ಸ್ವಾಮಿ ವಿವೇಕಾನಂದರ ಚಿಕ್ಯಾಗೋ ಭಾಷಣ 125ನೇ ವಷರ್ಾಚರಣೆ

ಹಾವೇರಿ11: ಸ್ವಾಮಿ ವಿವೇಕಾನಂದರು ದೇಶದ ಕಂಡ ಅಪ್ರತಿಮ ತತ್ವಜ್ಞಾನಿ, ಆಧ್ಯಾತ್ಮಿಕ ಚಿಂತಕ. ಯುವಜನತೆಗೆ  ಹೊಸ ದಿಕ್ಸೂಚಿಯಂತಿರುವ ಅವರ ವಿಚಾರಧಾರೆಗಳನ್ನು ಯುವ ವಿದ್ಯಾಥರ್ಿ ಸಮೂಹಕ್ಕೆ ತಿಳಿಸಲು ಒಂದು ವರ್ಷವೀಡಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಅವರು ಹೇಳಿದರು.

     ಮಂಗಳವಾರ ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರಿಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆ, ಪದವಿ ಪೂರ್ವ ಶಿಕ್ಷಣ ಸಹಯೋಗದಲ್ಲಿ ಆಯೋಜಿಸಿದ ಸ್ವಾಮಿ ವಿವೇಕಾನಂದರ ಚಿಕ್ಯಾಗೋ ಭಾಷಣದ 125ನೇ ವಷರ್ಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

      ದೇಶದಲ್ಲಿ ಪರಕೀಯರ ಆಡಳಿತದಲ್ಲಿ ನಮ್ಮ ಸಂಸ್ಕೃತಿ, ಸಂಸ್ಕಾರ, ಧಮರ್ಾಚರಣೆ ಅವನತಿಗೆ ತಲುಪಿದ ಸಂದರ್ಭದಲ್ಲಿ 1983ರಲ್ಲಿ ಚಿಕ್ಯಾಗೋ ವಿಶ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿದ ಸ್ವಾಮಿ ವಿವೇಕಾನಂದರು ಹಿಂದು ಸಂಸ್ಕೃತಿ, ಭಾರತದ ತತ್ವಾದರ್ಶಗಳ ಪರಂಪರೆಯನ್ನು ವಿಶ್ವದ ವಿವಿಧ ಧಾಮರ್ಿಕ ನಾಯಕರ ಉಪಸ್ಥಿತಿಯಲ್ಲಿ ಮನದಟ್ಟಾಗುವಂತೆ ಉಪನ್ಯಾಸ ನೀಡಿ ಎಲ್ಲರ ಮೆಚ್ಚುಗೆಗೆ ಕಾರಣರಾದರು. ಪ್ರಭಾವಿತವಾದ ಈ ಭಾಷಣದ ಆರಂಭದಲ್ಲಿ  ಸಹೋದರ, ಸಹೋದರಿಯರೆ ಎಂದು ಆರಂಭಿಸಿದ್ದು  ಅಮೆರಿಕದ ಜನರ ಕಣ್ಣಲ್ಲಿ ನೀರು ಬರುವಂತೆ ಮಾಡಿತ್ತು, ಮಂತ್ರಮುಗ್ದರನ್ನಾಗಿಸಿತು ಎಂದರು.

ರಾಮಕೃಷ್ಣ ಪರಮಹಂಸ ಗುರುಗಳ ಮಾರ್ಗದರ್ಶನದಲ್ಲಿ ದೇಶದ ಉದ್ದಗಲ್ಲಕ್ಕೂ ಸಂಚಾರಮಾಡಿ ಭಾರತದ ಯುವಜನತೆಯಲ್ಲಿ ಹೊಸ ಉತ್ಸಾಹ ಹಾಗೂ ಉಲ್ಲಾಸ ಮೂಡಿಸಿದರು. "ಎಳಿ ಎದ್ದೇಳಿ ಗುರಿ ಮುಟ್ಟುವವರೆಗೆ ನಿಲ್ಲದಿರಿ" ಎಂಬ ಅವರ ವಾಣಿ ಎಲ್ಲರಿಗೂ ಸ್ಪೂತರ್ಿದಾಯಕವಾಗಿದೆ.  ರಾಷ್ಟ್ರೀಯತೆ, ಶ್ರಮದಾನಕ್ಕೆ ಹೆಚ್ಚು ಒತ್ತು ನೀಡಿ ಅವರು ಭ್ರಾತೃತ್ವದ ಸಂದೇಶವನ್ನು ರಾಷ್ಟ್ರೀಯತೆಯ ಅಭಿಮಾನ ಯುವ ಜನರಲ್ಲಿ ಬೆಳೆಯುವಂತೆ ಮಾಡಿದರು.

    ಚಿಕ್ಯಾಗೋದಲ್ಲಿ 11 ಸೆಪ್ಟೆಂಬರ್  1983ರಲ್ಲಿ ವಿಶ್ವಧರ್ಮ ಸಮ್ಮೇಳನದಲ್ಲಿ ಮಾಡಿದ ಭಾಷಣ ಸೆಪ್ಟೆಂಬರ್ 11, 2018ಕ್ಕೆ  125 ವರ್ಷ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ  ಒಂದು ವರ್ಷ ಕಾಲ ಸಕರ್ಾರ ವಿವೇಕರ ಚಿಂತನೆಗಳನ್ನು ಯುವ ಸಮೂಹಕ್ಕೆ ತಿಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಹಮ್ಮಿಕೊಂಡಿದೆ. ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಲ್ಲಿ ವಿವೇಕಾನಂದರ ಕುರಿತಂತೆ ವಿಚಾರ ಸಂಕಿರಣ, ಭಾಷಣ, ಚಚರ್ಾಕೂಟ, ಪ್ರಬಂಧ ಸ್ಪಧರ್ೆಗಳನ್ನು ಆಯೋಜಿಸಲಾಗಿದೆ. ವಿದ್ಯಾಥರ್ಿಗಳು ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು ಹಾಗೂ ದೇಶಾಭಿಮಾನವನ್ನು ರಕ್ತದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

   ಅಪರ ಜಿಲ್ಲಾಧಿಕಾರಿ ಶ್ರೀಮತಿ ಶಾಂತಾ ಹುಲ್ಮನಿ ಅವರು ಮಾತನಾಡಿ, ಜಗತ್ತು ಸ್ವಾಮಿ ವಿವೇಕಾನಂದರ ವಿದ್ವತ್ತಿಗೆ ತಲೆಬಾಗಿದೆ.  ಸ್ವಾಮಿ ವಿವೇಕಾನಂದರ ಬಗ್ಗೆ ತಿಳಿದುಕೊಂಡರೆ ದೇಶದ ಬಗ್ಗೆ ತಿಳಿದುಕೊಂಡಂತೆ ಎಂದು ರವೀಂದ್ರನಾಥ ಠ್ಯಾಗೋರ ಅವರು ಹೇಳಿದ್ದರು. ಇದರಿಂದ ಸ್ವಾಮಿ ವಿವೇಕಾನಂದರು ಎಂತಹ ಮಹಾನ್ ಚೇತನ ಎಂದು ತಿಳಿಯುತ್ತದೆ.  ದೇಶದಲ್ಲಿ ಶೇ. 50ರಷ್ಟು ಯುವ ಸಮೂಹವಿದೆ. ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಸುಭದ್ರ ರಾಷ್ಟ್ರ ನಿಮರ್ಾಣಕ್ಕೆ ಕಂಕಣಬದ್ಧರಾಗಬೇಕು ಎಂದು ಹೇಳಿದರು.

   ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಪ್ರಭಾರ ಅಧ್ಯಕ್ಷರಾದ ಶ್ರೀಮತಿ ದೀಪಾ ಅತ್ತಿಗೇರಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದಶರ್ಿ ಜಿ. ಗೋವಿಂದಸ್ವಾಮಿ, ವಾತರ್ಾಧಿಕಾರಿ ಬಿ.ಆರ್.ರಂಗನಾಥ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿದರ್ೆಶಕ ಪೀರಶಾದ್, ತಹಶೀಲ್ದಾರ ಶಿವಕುಮಾರ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿದರ್ೆಶಕ ಶಕೀರ ಅಹ್ಮದ್ ಇತರರು  ಉಪಸ್ಥಿತರಿದ್ದರು. 

   ಜಾಥಾ: ಇದೇ ಸಂದರ್ಭದಲ್ಲಿ ವಿವೇಕಾನಂದರ ಚಿಕ್ಯಾಗೋ ಭಾಷಣದ 125ನೇ ವಷರ್ಾಚರಣೆ ಆರಂಭದ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾದ ವಿದ್ಯಾಥರ್ಿಗಳ ಬೃಹತ್ ಜಾಥಾಕ್ಕೆ ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಅವರು ಕ್ರೀಡಾಂಗಣದ ಆವರಣದಲ್ಲಿ ಚಾಲನೆ ನೀಡಿದರು. ನಗರದ ವಿವಿಧ ವೃತ್ತಗಳಲ್ಲಿ ಜಾಥಾ ಸಂಚರಿಸಿತು.