ಯುವಕರ ಪಾಲಿನ ಸ್ಪೂರ್ತಿಯ ಚಲುಮೆಯಾದ ಸ್ವಾಮಿ ವಿವೇಕಾನಂದರು : ಸಿದ್ದಣ್ಣಾ ದುರದುಂಡಿ

ಯುವಕರ ಪಾಲಿನ ಸ್ಪೂರ್ತಿಯ ಚಲುಮೆಯಾದ ಸ್ವಾಮಿ ವಿವೇಕಾನಂದರು :  ಸಿದ್ದಣ್ಣಾ ದುರದುಂಡಿ Swami Vivekananda is a source of inspiration for the youth: Siddanna Duradundi

   

ಮಾಂಜರಿ 13 : ಎಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎಂಬ ಸಂದೇಶ ಭಾರತಿಯರಲ್ಲಿ ಎಂದಿಗೂ ನವಚೈತನ್ಯೆ ತುಂಬುವ ಮಾತು ತಮ್ಮ ಬದುಕಿನ ರೀತಿಯಿಂದಲೇ ಯುವಕರ ಪಾಲಿನ ಸ್ಪೂರ್ತಿಯ ಚಲುಮೆಯಾದ ಸ್ವಾಮಿ ವಿವೇಕಾನಂದರು  ಎಂದು ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಜಿಲ್ಲಾ ಅಧ್ಯಕ್ಷರಾದ  ಸಿದ್ದಣ್ಣಾ ದುರದುಂಡಿ  ಜನರಿಗೆ ಕರೆ ನೀಡಿದರು. ಅವರು ಮಂಗಳವಾರ  ದಿನಾಂಕ 13 ರಂದು ಮಾಂಜರಿ ಗ್ರಾಮದ ಸರ್ವೂದಯ ಶಿಕ್ಷಣ ಸಂಸ್ಥೆಯ  ಸಭಾಂಗಣದಲ್ಲಿ.  ಜಿಲ್ಲಾ ಆಡಳಿತ .ಜಿಲ್ಲಾ ಪಂಚಾಯತ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ.ಮೈ ಭಾರತ  ಯುವ ಕೇಂದ್ರ ಬೆಳಗಾವಿ.

ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ತಾಲೂಕಾ ಘಟಕ ಚಿಕ್ಕೋಡಿ ಅಂಬೇಡ್ಕರ ಕಲಾ ಮತ್ತು ಕ್ರೀಡಾ ಯುವಕ ಮಂಡಳ ಮಾಂಜರಿ ಸರ್ವೋದಯ ಪ್ರೌಢಶಾಲೆ ಇವರ ಸಹಯೋಗದಲ್ಲಿ  ಜರುಗಿದ  ಸ್ವಾಮಿ ವಿವೇಕಾನಂದರ 164ನೇ ಜನ್ಮ  ದಿನೋತ್ಸವದ ಅಂಗವಾಗಿ ಚಿಕ್ಕೋಡಿ ತಾಲೂಕಾ    ಮಟ್ಟದ ಯುವ ಸಪ್ತಾಹ 2025- 26  ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು . ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿಗಳಾದ  ವ್ಹಿ ಎಸ ಪೋತದಾರ   ಮಾತನಾಡಿ ಯುವಜನರು ಸ್ವಾಮಿ ವಿವೇಕಾನಂದರ ಜೀವನ ಆದರ್ಶ್‌ ತತ್ವಗಳನು ಅನುಪಾಲನೆ ಮಾಡಿ ತಮ್ಮ ಜೀವನದಲ್ಲಿ ಅಳವಡಿಸುವಂತೆ ಯುವಕರಿಗೆ ಹೇಳಿದರು . ಕಾರ್ಯಕ್ರಮದ ವೇಧಿಕೆಮೇಲೆ ಗ್ರಾಮ ಪಂಚಾಯತ ಅಧ್ಯಕ್ಷರಾದ  ಅನಿತಾ ಬಾಳಾಸಾಬ ಧಯಾರಕರ  ಮುಖ್ಯೋಪಾಧ್ಯರಾದ ಕೆ ಎಸ  ಸಾಳುಂಕೆ . ಎಮ ಬಿ ಕೋಳಿ. ಎಸ ಕೆ ವಡಗೂಲೆ  ಹಾಗೂ  ಕಾಲೇಬನ ಉಪನ್ಯಾಸಕರು ಉಪಸ್ಥಿತರಿದ್ದರು ಕಾರ್ಯಕ್ರಮದಲ್ಲಿ  ಎಮ ನಾಗವೇಣಿ    ನಿರೂಪಿಸಿ   ರಾಘವೇಂದ್ರ ಲಂಬುಗೋಳ    ಸ್ವಾಗತಿಸಿ  ಎ ಎಮ ತೋರಸೆ ವಂಧಿಸಿದರು.