ಇಟಗಿ ಗ್ರಾಮದಲ್ಲಿ ನಡೆದ ಸರ್ವೆ ಕಾರ್ಯ : ಚಕ್ಕುಬಂದಿ ಅಳತೆಯಲ್ಲಿ ವ್ಯತ್ಯಾಸ
Survey work conducted in Itagi village: Difference in the measurement of the circle
ಇಟಗಿ ಗ್ರಾಮದಲ್ಲಿ ನಡೆದ ಸರ್ವೆ ಕಾರ್ಯ : ಚಕ್ಕುಬಂದಿ ಅಳತೆಯಲ್ಲಿ ವ್ಯತ್ಯಾಸ
ಕಂಪ್ಲಿ 28 : ತಾಲೂಕಿನ ಸಣಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಟಗಿ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್‌ನಲ್ಲಿ ಸರ್ವೆ ಅಧಿಕಾರಿಗಳು ಮಂಗಳವಾರ ನಡೆಸಿದ ಸರ್ವೆ ವೇಳೆ ನೋಂದಣಿ ಮತ್ತು ಗ್ರಾಮ ಠಾಣೆಗೆ ಸಂಬಂಧಿಸಿದಂತೆ ಚಕ್ಕುಬಂದಿ ಅಳತೆ ವ್ಯತ್ಯಾಸದ ಹಿನ್ನಲೆ ಗ್ರಾಪಂಯ ಮೂಲ ದಾಖಲೆಗಳ ಪ್ರಕಾರ ಅಳತೆ ಸರಿಪಡಿಸುವಂತೆ ಪಂಚನಾಮೆ ಮಾಡಿದ್ದು, ಕೆಲ ಗ್ರಾಮಸ್ಥರು ಸಹಿ ಹಾಕಿದರೆ, ಅರ್ಜಿದಾರರು ಮಾತ್ರ ಪಂಚನಾಮೆಗೆ ಸಹಿ ಹಾಕಲು ನಿರಾಕರಿಸಿರುವುದು ಕಂಡು ಬಂತು. ಇಲ್ಲಿನ ಗ್ರಾಮದಲ್ಲಿರುವ ಆಸ್ತಿ ಸಂಖ್ಯೆ 15050400604000204ರ ಗ್ರಾಮ ಠಾಣ ನಕ್ಷೆಗೆ ಸಂಬಂಧಿಸಿದಂತೆ ಜಾಮೀಯಾ ಮಸ್ಜೀದ್ ಅಧ್ಯಕ್ಷ ಒ.ಪಿ.ದಾದಾಖಲಂದರ್ ಇವರು ಸರ್ವೆಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಅನ್ವಯದಂತೆ ಕಂದಾಯ ಅಧಿಕಾರಿಗಳ ಸಮ್ಮುಖದಲ್ಲಿ ಸರ್ವೆ ಅಧಿಕಾರಿಗಳು ಗ್ರಾಮಕ್ಕೆ ತೆರಳಿ, ಸರ್ವೆ ಕಾರ್ಯ ಮಾಡಿ, ತದನಂತರ ನೋಂದಣಿ ಮತ್ತು ಗ್ರಾಮ ಠಾಣಾ ಚಕ್ಕುಬಂದಿಯಲ್ಲಿ ವಿಸ್ತೀರ್ಣ ಹೆಚ್ಚು ಕಮ್ಮಿ ಇರುವುದು ಕಂಡು ಬಂದಿದೆ. ಗ್ರಾಮ ಪಂಚಾಯಿತಿ ಮೂಲ ದಾಖಲೆಗಳ ಪ್ರಕಾರ ಅಳತೆಯು ಪೂರ್ವ-ಪಶ್ಚಿಮ 7.01 ಮೀಟರ್ ಹಾಗೂ ಉತ್ತರ-ದಕ್ಷಿಣಕ್ಕೆ 4.57 ಮೀಟರ್ ವಿಸ್ತೀರ್ಣ ಇರುತ್ತದೆ. ಆದರೆ, ಅರ್ಜಿದಾರರ ನೋಂದಣಿ ಪ್ರಕಾರ ಪೂರ್ವ-ಪಶ್ಚಿಮ 15.24 ಮೀಟರ್ ಹಾಗೂ ಉತ್ತರ-ದಕ್ಷಿಣಕ್ಕೆ 12.192 ಮೀಟರ್ ವಿಸ್ತೀರ್ಣ ಇದೆ. ಅದ್ದರಿಂದ ಗ್ರಾಮ ಪಂಚಾಯತಿ ದೃಢೀಕರಣದ ಅಳತೆಗೆ ಹಾಗೂ ನೋಂದಣಿ ಅಳತೆಯಲ್ಲಿ ಬಹಳಷ್ಟು ವ್ಯತ್ಯಾಸವಿದೆ. ಹೀಗಾಗಿ ಗ್ರಾಪಂಯ ಮೂಲ ದಾಖಲೆಗಳ ಅಳತೆಯಂತೆ ಸರಿಪಡಿಸಲಾಗುವುದೆಂದು ಅಧಿಕಾರಿಗಳು ತಿಳಿಸಿದರು. ಅರ್ಜಿದಾರರು ಈ ಪಂಚನಾಮೆಗೆ ಒಪ್ಪಿಗೆ ನೀಡಲಿಲ್ಲ. ಈ ವರದಿಯನ್ನು ಮೇಲಿನ ಅಧಿಕಾರಿಗಳಿಗೆ ಒಪ್ಪಿಸಲು ತೀರ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕಂದಾಯ ನೀರೀಕ್ಷಕ ಜಗದೀಶ ಮಾತನಾಡಿ, ಭೂಮಾಪನ ಇಲಾಖೆಯ ಸೂಪರ್ ವೈಜರ್ ಶಾಂತಮ್ಮ, ಪೊಲೀಸ್ ಠಾಣೆಯ ಪಿಐ ಕೆ.ಬಿ.ವಾಸುಕುಮಾರ, ಪಿಡಿಒ ಹಾಲರಿ್ವ ಶೇಷಗಿರಿ, ಭೂಮಾಪಕ ಇಮ್ರಾನ್, ಪರವಾನಿಗೆ ಭೂಮಾಪಕರಾದ ತಿಪ್ಪೇಸ್ವಾಮಿ, ಪ್ರಭುಸ್ವಾಮಿ, ಗ್ರಾಮಸ್ಥರರಾದ ಐ.ಶರಣಬಸವನಗೌಡ, ಇಟಗಿ ಬಸವರಾಜಗೌಡ, ಈ.ಮಂಜಪ್ಪಗೌಡ, ಅಗೆದಾಳ್ ವಿರೇಶ, ವಿ.ಗೋವಿಂದಪ್ಪ, ಗಾಳೆಪ್ಪ, ಎ.ಶರಣಬಸವ, ತಿಪ್ಪಯ್ಯ ಶೆಟ್ಟಿ, ಹೆಚ್.ಕೆಂಚಪ್ಪ ಸೇರಿದಂತೆ ಇತರರು ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 