ಸುರ ಓರ್ ತಾಲ ಸಾಧನಾ ಸಂಗೀತ ಕಾರ್ಯಕ್ರಮ

ಸುರ ಓರ್ ತಾಲ ಸಾಧನಾ ಸಂಗೀತ ಕಾರ್ಯಕ್ರಮ Sura Or Tala Sadhana Music Program

ಬೆಳಗಾವಿ 31: ದಿ 30 ಜುಲೈ 2025 ರಂದು ಜೆ ಎನ್ ಎಂ ಸಿ ಆವರಣದ ಕೆಎಲ್‌ಇ ಕನ್ವೆನ್ಷನ್ ಸೆಂಟರದಲ್ಲಿ ಕೆಎಲ್‌ಇ ಸಂಗೀತ ಶಾಲೆಯು ‘ಸೂರ್ ಓರ್ ತಾಲ್‌’ ಸಂಗೀತ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.  

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸಂತೋಷ ಕುಲಕರ್ಣಿ ಹಾಗೂ ಶ್ರೀ ಅಂಬರ ಮಿರಿಂಕರ ಉಪಸ್ಥಿತರಿದ್ದು, ಪ್ರಥಮದಲ್ಲಿ ಸುಮಾರು ಒಂದು ಗಂಟೆಯ ಕಾಲದವರೆಗೆ ಸಂತೋಷ ಕುಲಕರ್ಣಿ ಅವರು ಅದ್ಭುತವಾಗಿ ತಬಲಾ  ಸೋಲೋ ನುಡಿಸಿ ಶೋತೃಗಳನ್ನೂ ಮಂತ್ರಮುಗ್ಧರನ್ನಾಗಿರಿಸಿದರು. ತದನಂತರ ವೇದಿಕೆ ಕಾರ್ಯಕ್ರಮದಲ್ಲಿ ಅತಿಥಿಗಳು ದೀಪ ಪ್ರಜ್ವಲ್ನ ಮಾಡಿದರು, ಅದೇ ವೇಳೆ ಮುಖ್ಯ ಅತಿಥಿ ಕಲಾವಿದರಿಗೆ ಸಂಗೀತ ಮಹಾವಿದ್ಯಾಲಯದಿಂದ ಸತ್ಕರಿಸಲಾಯಿತು, ನಂತರ ಸಂಗೀತ ಮಹಾವಿದ್ಯಾಲಯದ ಹೊಸ ವರ್ಷದ ವಿದ್ಯಾರ್ಥಿಗಳಿಗೆ ಹೂಗುಚ್ಛ ಕೊಟ್ಟು ಸ್ವಾಗತಿಸಲಾಯಿತು. ನಂತರ ಇನ್ನೋರ್ವ ಕಲಾವಿದರಾದ ಶ್ರೀ ಅಂಬರ ಮಿರಿಂಕರ ಅವರು  ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಪ್ರಸ್ತುತಪಡಿಸಿ, ಶೋತೃಗಳನ್ನು ಮಂತ್ರ ಮುಗ್ಧರನ್ನಾಗಿಸಿದರು, ಜೊತೆಗೆ ಅವರು ಸಂಗೀತ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ  ಹೊಸ ರಾಗಗಳ ಪರಿಚಯಗಳನ್ನು ಮಾಡಿಸಿ ಕೊಟ್ಟರು. ಸಂಗೀತ ಮಹಾವಿದ್ಯಾಲಯದ ಸಂಯೋಜಕರಾದ ಡಾ ರಾಜೇಂದ್ರ ಭಾಂದನಕರ ಸಂಗೀತ ವಿಭಾಗದ ಬಗ್ಗೆ ಮಾತನಾಡಿದರು, ಸಂಗೀತ ವಿಭಾಗದ ಮುಖ್ಯಸ್ಥರಾದ ಪಂಡಿತ ರಾಜಾರಾಮ್ ಅಂಬರಡೆಕರ ಸ್ವಾಗತಿಸಿದರು.  

ಕಾರ್ಯಕ್ರಮದ ನಿರೂಪಣೆಯನ್ನು ಸಂಗೀತ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಸುನೀತಾ ಪಾಟೀಲ, ಹಾಗೂ ಅತಿಥಿಗಳ ಪರಿಚಯವನ್ನು ಡಾಕ್ಟರ್ ದುರ್ಗಾ ನಾಡಕರ್ಣಿ ಹಾಗೂ ಸಂಗೀತಾ ಕುಲಕರ್ಣಿ ಮಾಡಿದರು. ಸಂಗೀತ ಕಾರ್ಯಕ್ರಮಕ್ಕೆ ಯಾದವೇಂದ್ರ ಪೂಜಾರಿ, ರಾಹುಲ ಮಂಡೂಲ್ಕರ್, ಯೋಗೇಶ ರಾಮದಾಸ, ನಿತಿನ ಸುತಾರ ಸಾಥ್ ಸಂಗತ ಮಾಡಿದರು. ಬೆಳಗಾವಿಯ ಎಲ್ಲ ಹಿರಿಯ ಹಾಗೂ ಯುವ ಕಲಾವಿದರು ಹಾಗೂ ಸಂಗೀತ ಮಹಾವಿದ್ಯಾಲಯದ ಎಲ್ಲ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.