ಸುಪ್ರಿಯಾ ಭೋಸಲೆ ಅವರಿಗೆ ಪಿ.ಎಚ್.ಡಿ(ಡಾಕ್ಟರೇಟ್) ಪದವಿ ಪ್ರದಾನ
Supriya Bhosale awarded Ph.D. (Doctorate) degree
ವಿಜಯಪುರ 28 : ಸುಪ್ರಿಯಾ ಭೋಸಲೆ ಅವರಿಗೆ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ(ಡಾಕ್ಟರೇಟ್) ಲಭಿಸಿದೆ.ಡೀಮ್ಡ್ ವಿವಿಯ ಬಿ. ಎಂ. ಪಾಟೀಲ ಮೆಡಿಕಲ್ ಕಾಲೇಜಿನ ಬಯೊಟೆಕ್ನಾಲಜಿ ವಿಭಾಗದಲ್ಲಿ ಅಸಿಸ್ಟಂಟ್ ಪ್ರೊಫೆಸರ್ ಆಗಿರುವ ಸುಪ್ರಿಯಾ ಭೋಸಲೆ ಅವರು ಅಲೈಡ್ ಹೆಲ್ತ್ ಸಾಯಿನ್ಸ್ ನ ಬಯೊಟೆಕ್ನಾಲಜಿ ವಿಭಾಗದಲ್ಲಿ ಡಬ್ಲ್ಯೂಎನಟಿ ಬಿ- ಕೆಟೆನಿನ್ ಸಿಗ್ನಲಿಂಗ್ ಇನಗ ಹಿಪೊಕ್ಸಿಯಾ- ಇಂಡ್ಯೂಸ್ಡ್ ಪಲ್ಮನರಿ ಆರ್ಟಿಲರಿ ಸ್ಮೂಥ್ ಮಸಲ್ ಸೆಲ್ ಪ್ರಾಲಿಫಿರೇಶನ್- ರೋಲ್ ಆಫ್ ಎ ಬಯೊಆ್ಯಕ್ಟಿವ್ ಮಾಲಿಕ್ಯೂಲ್ ಆಫ್ ಮ್ಯುಕ್ಯೂನಾ ಪ್ರೂರಿಯನ್ಸ್ ವಿಷಯದಲ್ಲಿ ಮಂಡಿಸಿದ ಮಹಾಪ್ರಬಂಧಕ್ಕೆ ಪಿ.ಎಚ್.ಡಿ ದೊರೆತಿದೆ.ಬಿ.ಎಲ್.ಡಿ.ಇ ಮೆಡಿಕಲ್ ಕಾಲೇಜಿನ ಶರೀರಕ್ರಿಯಾ ಶಾಸ್ತ್ರ ವಿಭಾಗದ ಡಿಸ್ಟಿಂಗ್ವಿಶ್ ಚೇರ್ ಪ್ರೊ. ಕುಸಾಲ ಕೆ. ದಾಸ ಅವರ ಮಾರ್ಗದರ್ಶನದಲ್ಲಿ ಮತ್ತು ಡಾ. ಶ್ರೀಲಕ್ಷ್ಮಿ ಬಗಲಿ ಅವರ ಸಹಮಾರ್ಗದರ್ಶನದಲ್ಲಿ ಅವರು ಮಹಾಪ್ರಬಂಧ ರಚಿಸಿದ್ದಾರೆ.ವಿಜಯಪುರ ನಗರದಲ್ಲಿ ಡಿಸೆಂಬರ್ 19 ರಂದು ನಡೆದ ಘಟಿಕೋತ್ಸವದಲ್ಲಿ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಕುಲಾಧಿಪತಿ ಬಿ. ಎಂ. ಪಾಟೀಲ ಅವರು ಪಿ.ಎಚ್.ಡಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ, ರಾಷ್ಟ್ರೀಯ ವೈದ್ಯಕೀಯ ಮೌಲ್ಯಮಾಪನ ಮತ್ತು ಶ್ರೇಯಾಂಕ ಮಂಡಳಿಯ ಅಧ್ಯಕ್ಷ ಡಾ. ಎಂ. ಕೆ. ರಮೇಶ, ಸಮಕುಲಾಧಿಪತಿ ಡಾ.ವೈ. ಎಂ. ಜಯರಾಜ, ಪ್ರಭಾರ ಕುಲಪತಿ ಡಾ. ಅರುಣ ಚಂ. ಇನಾಮದಾರ, ರಜಿಸ್ಟ್ರಾರ್ ಡಾ. ಆರ್. ವಿ. ಕುಲಕರ್ಣಿ ಮುಂತಾದವರು ಉಪಸ್ಥಿತರಿದ್ದರು.
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ 