ಸುಪ್ರೀಂ ತೀಪು ಐತಿಹಾಸಿಕ: ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ

ಕಲಬುರಗಿ, ನ 9  :  ಅಯೋಧ್ಯೆ ವಿಚಾರದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀಪು ದೇಶದ ಇತಿಹಾಸದಲ್ಲಿಯೇ ಐತಿಹಾಸಿಕವಾದುದು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ 130 ಕೋಟಿ ಜನ ಒಪ್ಪುವಂತಹ ತೀಪು ಇದಾಗಿದ್ದು, ನ್ಯಾಯಾಲಯದ ಆದೇಶದಂತೆ ಎಲ್ಲಾ ವ್ಯವಸ್ಥೆಗಳನ್ನು ಭಾರತ ಸರ್ಕಾರ ಮಾಡಬೇಕು ಎಂದರು. ದೇಶದ ಏಕತೆ ಮತ್ತು ಅಖಂಡತೆಯನ್ನು ಉಳಿಸಿ, ಬೆಳೆಸಿಕೊಂಡು ಹೋಗಲು ಈ ತೀಪು ಸಹಕಾರಿಯಾಗಿದೆ. ಎಲ್ಲರೂ ಈ ತೀರ್ಪನ್ನು ಗೌರವಿಸುವ ಮೂಲಕ ಹಿಂದೂ - ಮುಸ್ಲಿಮರು ಅಣ್ಣತಮ್ಮಂದಿರಂತೆ ಬಾಳಬೇಕು ಎಂದರು. ತೀಪು ಯಾರ ಪರ, ವಿರುದ್ಧ ಬಂದರು ಸಂಯಮದಿಂದರಲು ಮನವಿ ಮಾಡಿದ್ದೆವು. ಈಗ ಪ್ರತಿಯೊಬ್ಬರೂ ಸುಪ್ರೀಂ ತೀರ್ಪನ್ನು ಗೌರವಿಸುವ ಮೂಲಕ ಸಮಾಜದಲ್ಲಿ ಶಾಂತಿ ಕದಡದಂತೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.  ಸಂಸದ ಡಾ.ಉಮೇಶ್ ಜಾಧವ್ ಮಾತನಾಡಿ, ಅಯೋಧ್ಯೆ ಸ್ಥಳದ ಕುರಿತು ಸುಪ್ರೀಂಕೋಟ್9 ನೀಡಿರುವ ತೀಪು ಸ್ವಾಗತಾರ್ಹ. ತೀಪು ಬರುವ ಮುನ್ನ, ಸುಪ್ರೀಂ ಕೋರ್ಟ ತೀಪು ಏನೇ ನೀಡಿದರು ಅದನ್ನು  ಸ್ವಾಗತಿಸಬೇಕು ಎಂದು ಹೇಳಿದ್ದೆ.  ನಮ್ಮ ಜನ ಶಾಂತಿ ಸಂಯಮದಿಂದ ವರ್ತಿಸಬೇಕು ಎಂದು ಕೈಮುಗಿದು ವಿನಂತಿಸಿಕೊಳ್ಳುತ್ತೇನೆ ಎಂದರು. ಕಲಬುರಗಿ ಜಿಲ್ಲೆ ಭಾವೈಕ್ಯತೆಯ ನೆಲ ಎನ್ನುವುದು ಸಾಬೀತು ಪಡಿಸಿ ಎಂದು ಅವರು ಮನವಿ ಮಾಡಿದರು.