ಕೃಷ್ಣಾ ಸಕ್ಕರೆ ಕಾರಖಾನೆಗೆ ಗುಣ ಮಟ್ಟದ ಕಬ್ಬು ಪೂರೈಕೆ ಮಾಡಿ: ಶಾಸಕ ಲಕ್ಷ್ಮಣ ಸವದಿ
Supply quality sugarcane to Krishna Sugar Factory: MLA Lakshman Savadi
ಅಥಣಿ 22: ಖಾಸಗಿ ಕಾರಖಾನೆಗಳ ತೂಕದಲ್ಲಿನ ಮೋಸ ಸೇರಿದಂತೆ ಅನೇಕ ಕುತಂತ್ರಗಳ ಪರಿಣಾಮ ಸಹಕಾರಿ ಸಕ್ಕರೆ ಕಾರಖಾನೆಗಳು ಮುಚ್ಚುವ ಸ್ಥಿತಿಗೆ ತಲುಪಿದ್ದು, ರೈತರು ಹೆಚ್ಚಿನ ಪ್ರಮಾಣದ ಗುಣಮಟ್ಟದ ಕಬ್ಬನ್ನು ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆಗೆ ಪೂರೈಕೆ ಮಾಡಿದಲ್ಲಿ ಮಾತ್ರ ಸಹಕಾರಿ ಸಕ್ಕರೆ ಕಾರಖಾನೆಗಳನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ಮಾಜಿ ಉಪ ಮುಖ್ಯಮಂತ್ರಿ, ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅವರು ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆಯ 33 ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಖಾಸಗಿ ಕಾರಖಾನೆಗಳು ಕಬ್ಬು ಪೂರೈಕೆ ಮಾಡುವ ಒಂದು ಟ್ರ್ಯಕ್ಟರನಿಂದ ಕನಿಷ್ಠ 2. ಟನ್ ಕಬ್ಬನ್ನು ಕಳುವು ಮಾಡುತ್ತಾರೆ ಇದರಿಂದ ಲಕ್ಷಾಂತರ ರೈತರಿಗೆ ಕೊಟ್ಯಾಂತರ ರೂ.ಗಳಷ್ಟು ಹಾನಿ ಒಂದು ಕಡೆಯಾದರೆ ಮತ್ತೊಂದೆಡೆ ಸಕ್ಕರೆ, ಇಥೇನಾಲ್ ಉತ್ಪಾದನೆ ಮತ್ತು ಜಿ.ಎಸ್.ಟಿ ಭರಣಾ ಮೇಲೂ ಮಹತ್ವದ ಪರಿಣಾಮ ಬೀರುತ್ತದೆ ಎಂದ ಅವರು ಎಲ್ಲ ಖಾಸಗಿ ಮತ್ತು ಸಹಕಾರಿ ಸಕ್ಕರೆ ಕಾರಖಾನೆಗಳ ಎದುರು ರಾಜ್ಯ ಸರಕಾರವೇ ತೂಕದ ಯಂತ್ರ ಅಳವಡಿಸಿ ಮತ್ತು ಈ ಯಂತ್ರಗಳ ನಿರ್ವಹಣೆಯನ್ನು ತಹಶೀಲ್ದಾರಗೆ ವಹಿಸಿಕೊಡಿ ಎಂದು ಈಗಾಗಲೇ ರಾಜ್ಯ ಸರಕಾರಕ್ಕೆ ಸಲಹೆ ನೀಡಿರುವೆ ಎಂದರು. ನಾನೂ ಸಹ ಇತರರಂತೆ ಖಾಸಗಿ ಸಕ್ಕರೆ ಕಾರಖಾನೆ ಪ್ರಾರಂಭಿಸಬಹುದಿತ್ತು ಕೆಲ ವರ್ಷಗಳ ಹಿಂದೆಯೇ ನಾನೂ ಸಹ ರಾಯಬಾಗ ಮತ್ತು ಸಿಂದಗಿಯಲ್ಲಿ ಸಕ್ಕರೆ ಕಾರಖಾನೆ ಪ್ರಾರಂಭಿಸುವ ನಿಟ್ಟಿನಲ್ಲಿ ಲೈಸನ್ಸ ಪಡೆದುಕೊಂಡಿದ್ದೆ ಆದರೆ ಈ ಸಕ್ಕರೆ ಕಾರಖಾನೆಗಳು ಪ್ರಾರಂಭಿಸುವುದರಿಂದ ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆಗಳಿಗೆ ಹಾನಿಯಾಗಬಹುದು ಎನ್ನುವ ಏಕೈಕ ಕಾರಣದಿಂದ ಖಾಸಗಿ ಕಾರಖಾನೆಗಳನ್ನು ಪ್ರಾರಂಭಿಸುವ ಯೋಚನೆ ಕೈ ಬಿಟ್ಟೆ ಎಂದ ಅವರು ಖಾಸಗಿ ಕಾರಖಾನೆಗಳ ಎದುರು ತೂಕದ ಯಂತ್ರ ಅಳವಡಿಸಿ ಎಂದು ಹತ್ತು ವರ್ಷಗಳಿಂದ ರಾಜ್ಯ ಸರಕಾರಗಳಿಗೆ ಅಧಿವೇಶನಗಳಲ್ಲಿ ಆಗ್ರಹಿಸಿದ್ದರೂ ಕೂಡ ಇಲ್ಲಿಯವರೆಗೂ ಯಾವುದೇ ಪ್ರಯೋಜನ ಆಗಿಲ್ಲ ಎಂದರು.
ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆ ಕಳೆದ ಹಂಗಾಮಿನಲ್ಲಿ ಅತೀ ಕಡಿಮೆ ಕಬ್ಬು ನುರಿಸಿದ ಪರಿಣಾಮ ದೊಡ್ಡ ಪ್ರಮಾಣದಲ್ಲಿ ಹಾನಿಗೊಳ ಪಟ್ಟಿದೆ ಇದನ್ನು ಸರಿ ಪಡಿಸಲು ಸಕ್ಕರೆ ಕಾರಖಾನೆಯ ಉಸ್ತುವಾರಿಗಾಗಿ ಸಲಹಾ ಸಮಿತಿ ರಚಿಸಿ ಅವರಿಂದ ಸಲಹೆ ಪಡೆದು ಈ ವರ್ಷ ಅತೀ ಹೆಚ್ಚು ಕಬ್ಬು ನುರಿಸುವ ಮೂಲಕ ಸಕ್ಕರೆ ಕಾರಖಾನೆಯನ್ನು ಲಾಭದಲ್ಲಿ ಮುನ್ನಡೆಸಿ ಎಂದ ಅವರು ಕಾರಖಾನೆ ಲಾಭದಲ್ಲಿ ಮುನ್ನಡೆಯಲು 130 ರಿಂದ 150 ದಿನ ಕನಿಷ್ಠ ನಿತ್ಯ 6000 ಟನ್ ಕಬ್ಬು ನುರಿಸಿದಲ್ಲಿ ಮಾತ್ರ ಲಾಭದಲ್ಲಿ ಮುನ್ನಡೆಯುತ್ತದೆ ಇದಕ್ಕಾಗಿ ನಿರ್ದೇಶಕ ಮಂಡಳಿ ಸದಸ್ಯರು ಕಬ್ಬು ಬೆಳೆಗಾರರ ಮನೆ ಮನೆ ತೆರಳಿ ವಿನಂತಿಸಿಕೊಳ್ಳಿ ಎಂದು ಸಲಹೆ ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಾಗವಾಡ ಶಾಸಕ ರಾಜು ಕಾಗೆ ಮಾತನಾಡಿ, ಕಾರಖಾನೆ ಆಡಳಿತದಲ್ಲಿ ನಾನು ಮತ್ತು ಲಕ್ಷ್ಮಣ ಸವದಿ ಎಂದಿಗೂ ಹಸ್ತಕ್ಷೇಪ ಮಾಡಿಲ್ಲ. ಕಾರಖಾನೆಯ ಎಲ್ಲ ಜವಾಬ್ದಾರಿಯನ್ನು ಆಡಳಿತ ಮಂಡಳಿಗೆ ವಹಿಸಿಕೊಡಲಾಗಿದೆ ಎಂದ ಅವರು ರೈತರು ಗುಣಮಟ್ಟದ ಕಬ್ಬನ್ನು ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆಗೆ ಪೂರೈಸಿ, ಕಬ್ಬು ಪೂರೈಕೆ ಮಾಡದೇ ಹೋದಲ್ಲಿ ಕಾರಖಾನೆ ಉಳಿಯುವುದಿಲ್ಲ ನಾನು ಕೈ ಮುಗಿದು ಮನವಿ ಮಾಡುತ್ತೇನೆ ಕಬ್ಬನ್ನು ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆ ಮಾಡಿ ಎಂದು ಮನವಿ ಮಾಡಿದರು. ಕಾರಖಾನೆ ಅಧ್ಯಕ್ಷ ಪರ್ಪ ಸವದಿ ಮಾತನಾಡಿ, ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆಗೆ ಗುಣಮಟ್ಟದ ಮತ್ತು ಹೆಚ್ಚು ಇಳುವರಿಯ ಕಬ್ಬು ಪೂರೈಕೆ ಮಾಡುವ ಮೂಲಕ ಕಾರಖಾನೆಯನ್ನು ಬಲ ಪಡಿಸಿ ಎಂದ ಅವರು ನಿಹದಿತ ಅವಧಿಯಲ್ಲಿಯೇ ಕಬ್ಬಿನ ಬಿಲ್ಲ ಪಾವತಿಸುತ್ತೇವೆ ರೈತರು ನಮ್ಮ ಮೇಲೆ ವಿಶ್ವಾಸ ಇಡಿ ಎಂದರು. ಸಭೆಯಲ್ಲಿ ವ್ಯವಸ್ಥಾಪಕ ನಿರ್ದೇಶಕ ಜಿ.ಎಮ್.ಪಾಟೀಲ, ಸಭೆ ನಡುವಳಿಕೆಯನ್ನು ಕಛೇರಿ ಅಧಿಕ್ಷಕ ಸುರೇಶ ಠಕ್ಕಣ್ಣವರ ಓದಿದರು, ಮುಖ್ಯ ಲೆಕ್ಕಾಧಿಕಾರಿ ಶಂಕರ ಗೊಟಖಿಂಡಿ 2025-26 ನೇ ಸಾಲಿನ ಅಂದಾಜು ಪತ್ರಿಕೆ ಓದಿ ಅನುಮೋದನೆ ಪಡೆದುಕೊಂಡರು.
ಸಭೆಯಲ್ಲಿ ವ್ಯವಸ್ಥಾಪಕ ನಿರ್ದೇಶಕ ಜಿ.ಎಮ್.ಪಾಟೀಲ, ಆಡಳಿತ ಮಂಡಳಿ ಉಪಾಧ್ಯಕ್ಷ ಶಂಕರ. ವಾಘಮೋಡೆ, ನಿರ್ದೇಶಕ ಮಂಡಳಿ ಸದಸ್ಯರಾದ ಗುರುಬಸು ತೆವರಮನಿ, ಶಾಂತಿನಾಥ ನಂದೇಶ್ವರ, ಘೂಳಪ್ಪ ಜತ್ತಿ, ಶ್ರೀಮತಿ ರುಕ್ಮೀಣಿ ಕುಲಕರ್ಣಿ, ರಮೇಶ ಪಟ್ಟಣ, ಸೌರಭ ಪಾಟೀಲ, ಶ್ರೀಮತಿ ಸುನಂದಾ ನಾಯಿಕ, ಸಿದ್ರಾಯ ನಾಯಿಕ, ಮಲ್ಲಿಕಾರ್ಜುನ ಗೋಟಖಿಂಡಿ, ಹಣಮಂತ ಜಗದೇವ, ವಿಶ್ವನಾಥ ಪಾಟೀಲ, ಪಿ.ಸಿ.ಪಾಟೀಲ ಸೇರಿದಂತೆ ಕಾರಖಾನೆಯ ವಿಭಾಗಾಧಿಕಾರಿಗಳು, ರೈತ ಸದಸ್ಯರು, ಸಿಬ್ಬಂದಿ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 