ರೂ.6,279.87 ಕೋಟಿ ಮೊತ್ತದ ಪೂರಕ ಅಂದಾಜು ಬೇಡಿಕೆ ಪ್ರಸ್ತಾವ ಮಂಡನೆ
Supplementary Estimated Demand Proposal of Rs. 6,279.87 crores submitted
ಬೆಳಗಾವಿ, ಸುವರ್ಣ ವಿಧಾನಸೌಧ ಡಿ.16: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮಂಗಳವಾರದಂದು, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರವಾಗಿ, ರೂ.6,279.87 ಕೋಟಿ ಮೊತ್ತದ 2025-26ನೇ ಸಾಲಿನ ಪೂರಕ ಅಂದಾಜುಗಳ ಎರಡನೇ ಕಂತಿನ ಬೇಡಿಕೆ ಪ್ರಸ್ತಾವನೆಯನ್ನು ಮಂಡಿಸಿದರು.
ಸಂವಿಧಾನದ 205(1) (ಎ)ರ ಅನುಚ್ಛೇದ ಪ್ರಕಾರ ಸರ್ಕಾರ ಎರಡನೇ ಕಂತಿನ ಪೂರಕ ಅಂದಾಜು ಪಟ್ಟಿಯನ್ನು ರಾಜ್ಯ ವಿಧಾನ ಮಂಡಲದ ಮುಂದೆ ಮಂಡಿಸಿದೆ.
ಎರಡನೇ ಕಂತು ಪೂರಕ ಅಂದಾಜಿನಲ್ಲಿ ಒದಗಿಸಿರುವ ಒಟ್ಟು ಮೊತ್ತ ರೂ.6279.87 ಕೋಟಿಗಳಲ್ಲಿ ರೂ.23.46 ಕೋಟಿಗಳು ಪ್ರಭೃತ ವೆಚ್ಚ ಮತ್ತು ರೂ.6256.41 ಕೋಟಿಗಳು ಪುರಸ್ಕøತ ವೆಚ್ಚಕ್ಕೆ ಸೇರಿರುತ್ತವೆ. ಇದರಲ್ಲಿ ಮೀಸಲು ನಿಧಿಯಿಂದ ಭರಿಸಲಾಗುವ ರೂ.618.11 ಕೋಟಿಗಳು ಸಹ ಪುರಸ್ಕøತವಾಗಬೇಕಾಗಿದ್ದು, ಸಂಚಿತ ನಿಧಿಯಿಂದ ಹೊರ ಹೋಗುವ ನಿವ್ವಳ ಮೊತ್ತ ರೂ.5,661.76 ಕೋಟಿಯಾಗಿದೆ. ಇದರಲ್ಲಿ ರೂ.2,240.32 ಕೋಟಿಗಳು ಕೇಂದ್ರ ಸಹಾಯಕ್ಕೆ ಸಂಬಂಧಿಸಿವೆ. ಆದ್ದರಿಂದ ಹೊರ ಹೋಗುವ ನಿವ್ವಳ ನಗದು ಮೊತ್ತ ರೂ.3,421.44 ಕೋಟಿಗಳಾಗಿರುತ್ತವೆ ಎಂದು ಪೂರಕ ಅಂದಾಜು ಪಟ್ಟಿಯಲ್ಲಿ ತಿಳಿಸಲಾಗಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 