ಮೂಢನಂಬಿಕೆ: ನಾಗಪಂಚಮಿ ಬದಲು ಬಸವ ಪಂಚಮಿ ಆಚರಣೆ

ಮೂಢನಂಬಿಕೆ: ನಾಗಪಂಚಮಿ ಬದಲು ಬಸವ ಪಂಚಮಿ ಆಚರಣೆ Superstition: Basava Panchami is celebrated instead of Naga Panchami

ಮೂಢನಂಬಿಕೆ: ನಾಗಪಂಚಮಿ ಬದಲು ಬಸವ ಪಂಚಮಿ ಆಚರಣೆ 

ಹಾವೇರಿ 30:  ಬಸವ ಪಂಚಮಿ ಆಚರಣೆಗೆ ಹಬ್ಬಗಳು ಮನುಷ್ಯನ ಪ್ರಗತಿಗೆ ಪೂರಕವಾಗಿದ್ದರೂ ಕೆಲವು ಆಚರಣೆಗಳು ಮೂಢನಂಬಿಕೆಗೆ ಪ್ರಚೋದನೆ ನೀಡುತ್ತಿವೆ. ಇದನ್ನು ಹೋಗಲಾಡಿಸಲು ನಾಗರ ಪಂಚಮಿಯಂದು ಮಠದಿಂದ ಹಾಲನ್ನು ರೋಗಿಗಳಿಗೆ ವಿತರಿಸುವ ಮೂಲಕ ಬಸವ ಪಂಚಮಿಯನ್ನಾಗಿಆಚರಿಸಲಾಗುತ್ತಿದೆ’ ಎಂದು ಮಾನವ ಬಂಧುತ್ವ ವೇದಿಕೆಯತಾಲೂಕು ಸಂಚಾಲಕ ಪ್ರಕಾಶ ಬಣಕಾರ  ಹೇಳಿದರು.ಮಾನವ ಬಂಧುತ್ವ ವೇದಿಕೆ ಬ್ಯಾಡಗಿತಾಲೂಕುಘಟಕದ ವತಿಯಿಂದ ಪಟ್ಟಣದ ಕನಕ ಅನಾಥ ಮಕ್ಕಳ ಆಶ್ರಮಕ್ಕೆ ಹಾಗೂ ಆದಿವಾಸಿ ಮಕ್ಕಳಿಗೆ  ಬಸವ ಪಂಚಮಿ ಹಬ್ಬದ ನಿಮಿತ್ ಹಾಲು ವಿತರಿಸುವ ಮೂಲಕ ಅವರು ಮಾತನಾಡಿದರು.‘ಹುತ್ತಕ್ಕೆ ಹಾಲು ಸುರಿದುಅವೈಜ್ಞಾನಿಕವಾಗಿಆಚರಣೆಗೆಜನರು ಮುಂದಾಗುತ್ತಾರೆ. ಇದರಿಂದಅಪಾರ ಪ್ರಮಾಣ ಹಾಲು ವ್ಯರ್ಥವಾಗುತ್ತಿದೆ.ನಮ್ಮರಾಜ್ಯವೊಂದರಲ್ಲೇ ಪ್ರತಿ ವರ್ಷಅಪೌಷ್ಟಿಕತೆಯಿಂದ ಸಾವಿರಾರು ಮಕ್ಕಳು ಸಾವೀಗೀಡಾಗುತ್ತಿದ್ದಾರೆ. ಹಾಲನ್ನು ವ್ಯರ್ಥ ಮಾಡುವ ಬದಲಿಗೆ ಮಕ್ಕಳಿಗೆ ಮತ್ತು ಬಡವರಿಗೆಕೊಟ್ಟರೆಅದುಅಮೃತವಾಗುತ್ತದೆ.  

ಈ ಕುರಿತುಜನರುಚಿಂತಿಸಬೇಕು’ ಎಂದರು.’ಬಡ ಮಕ್ಕಳು, ಅನಾಥ ಮಕ್ಕಳಿಗೆ  ಈ ಹಾಲು ಹಂಚುವ ಮೂಲಕ ಬಸವ ಪಂಚಮಿಯನ್ನುಅರ್ಥಪೂರ್ಣವಾಗಿ ಹಬ್ಬಆಚರಿಸುತ್ತಿರುವುದು ಬದಲಾವಣೆಯ ಸಂಕೇತವಾಗಿದೆ. ಎಲ್ಲರೂ ಮೂಢನಂಬಿಕೆಯಿಂದ ಹೋರ ಬರಬೇಕು’ ಎಂದುರೈತ ಮುಖಂಡಕಿರಣ ಗಡೀಗೊಳ ಹೇಳಿದರು.ಈ ಸಂದರ್ಭದಲ್ಲಿ ಮಾನವ ಬಂಧುತ್ವ ವೇದಿಕೆಯಜಿಲ್ಲಾ ಸಂಚಾಲಕ ರವಿ ಹಾದಿಮನಿ, ಜೈ ಭೀಮರಾರಾವಿ, ದುರ್ಗೇಶ್‌ಗೊಣೆಮ್ಮನವರ್, ಪಾಂಡುರಂಗ ಸುತಾರ್‌.ರಾಜು ಪಾಟೀಲ್‌. ಹನುಮಂತ ಬಮ್ಮಲಾಪುರ್‌. ಕೃಷ್ಣ ತಳವಾರ್‌.ಫರೀದಾ ಹಾಗೂ ಅನೇಕರು ಮಾನವ ಬಂದಿತ್ತ ವೇದಿಕೆಯಕಾರ್ಯಕರ್ತರು ಉಪಸ್ಥಿತರಿದ್ದರು.