ಸುಮನ ರಾಮಣ್ಣ ಸಿಂದಗಿಗೆ ಪಿಎಚ್‌ಡಿ ಪದವಿ

ಸುಮನ ರಾಮಣ್ಣ ಸಿಂದಗಿಗೆ ಪಿಎಚ್‌ಡಿ ಪದವಿ Suman Ramanna Sindagi receives PhD degree


ವಿಜಯಪುರ 22: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ಸುಮನ ರಾಮಣ್ಣ ಸಿಂದಗಿ ಅವರು ಸಲ್ಲಿಸಿದ್ದ “ಮಾಧ್ಯಮಿಕ ಶಾಲಾ ವಿದ್ಯಾರ್ಥಿಗಳಿಗೆ ಜೀವನ ಕೌಶಲ್ಯಗಳ ಕಾರ್ಯಕ್ರಮದ ಅಭಿವೃದ್ಧಿ ಮತ್ತು ಪ್ರಯೋಗ: ಒಂದು ಅಧ್ಯಯನ” ಕುರಿತು ಸಲ್ಲಿಸಿದ್ದ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿ ನೀಡಿದೆ.   

ಸುಮನ ರಾಮಣ್ಣ ಸಿಂದಗಿ ಅವರು ಶಿಕ್ಷಣ ವಿಭಾಗದ ಡಾ. ಗಾಣಿಗೇರ ಭಾರತಿ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು. ಡಾಕ್ಟರೇಟ್ ಪದವಿ ಪಡೆದಿರುವ ಸುಮನ ರಾಮಣ್ಣ ಸಿಂದಗಿ ಅವರನ್ನು ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಎಲ್ ಲಕ್ಕಣ್ಣನವರ ಅಭಿನಂದಿಸಿದ್ದಾರೆ.