ಕಬ್ಬಿನ ಇಳುವರಿ ಕುರಿತು ವಿಚಾರ ಸಂಕೀರ್ಣ

ಕಬ್ಬಿನ ಇಳುವರಿ ಕುರಿತು ವಿಚಾರ ಸಂಕೀರ್ಣ Sugarcane yield information workshop

ಲೋಕದರ್ಶನ ವರದಿ 

ಮಾಂಜರಿ 13: ಚಿಕ್ಕೋಡಿ ತಾಲೂಕಿನ ನನದಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಭಾಂಗಣದಲ್ಲಿ ಹಾಗೂ ಸುತ್ತಮುತ್ತಲಿನ ಗ್ರಾಮದ ರೈತರಿಗಾಗಿ ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರಖಾನೆ ಹಾಗೂ ನ್ಯೂಟ್ರಿಕಾರ​‍್ ಅಗ್ರಿ ಪ್ರೈ.ಲಿ ಬೆಂಗಳೂರು ಮತ್ತು ಜೈನ ಇರಿಗೇಶನ ಇವರ ಸಹಯೋಗದಲ್ಲಿ ಬುಧವಾರರಂದು “ಕಬ್ಬಿನ ಬೆಳೆಯಲ್ಲಿ ಗೊಣ್ಣೆ ಹುಳುವಿನ (ಕೀಟ) ಸಮಗ್ರ ನಿರ್ವಹಣೆ, ಕಬ್ಬಿನ ಇಳುವರಿ ಹೆಚ್ಚಿಸಲು ಆಧುನಿಕ ಬೇಸಾಯ ಕ್ರಮಗಳು ಹಾಗೂ ಕಬ್ಬಿನ ಬೆಳೆಯಲ್ಲಿ ಹನಿ ನೀರಾವರಿಯ ಮಹತ್ವ ಕುರಿತು ವಿಚಾರ ಸಂಕೀರ್ಣ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. 

ಸದರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಪ್ರಾಥಮಿಕ ಕೃಷಿ ಪತ್ತಿನ ಅಧ್ಯಕ್ಷರಾದ ವಿಜಯಸಿಂಹ ನಾನಾಸಾಹೇಬ ನಿಂಬಾಳಕರ ದೇಸಾಯಿ(ಸರಕಾರ) ವಹಿಸಿದ್ದರು. ಕಾರ್ಯಕ್ರಮದ ಸ್ವಾಗತ ಪರ ಭಾಷಣವನ್ನು ಕಾರಖಾನೆಯ ಹಿರಿಯ ಪ್ರಧಾನ ವ್ಯವಸ್ಥಾಪಕರಾದ ಎನ್‌.ಎಸ್‌.ಹಿರೇಮಠ ಇವರು ಮಾಡಿದರು. ಹಾಗೂ ಪ್ರಾಸ್ತಾವಿಕವಾಗಿ ವ್ಯವಸ್ಥಾಪಕ ನಿರ್ದೇಶಕರಾದ ಆರ್‌.ಬಿ.ಖಂಡಗಾವೆಯವರು ಮಾತನಾಡಿದರು. 

ಕಾರ್ಯಕ್ರಮದ ಅತಿಥಿ ಉಪನ್ಯಾಸಕರುಗಳಾದ ವಿಜಯರಾಜ್ ಕ್ಷೇತ್ರಾಧಿಕಾರಿಗಳು ಬೆಳಗಾವಿ ನ್ಯೂಟ್ರಿಕಾರ​‍್ ಅಗ್ರಿ ಪ್ರೈ.,ಲಿ ಬೆಂಗಳೂರು ಹಾಗೂ ಬೇಸಾಯ ತಜ್ಞರು ಜೈನ ಇರಿಗೇಶನಿನ್ ಸುರೇಶ ಮಗದುಮ್ಮ ಮತ್ತು ತಾಂತ್ರಿಕ ವಿಭಾಗದ ಜೈನ್ ಇರಿಗೇಶನ್ ಪ್ರಶಾಂತ ಪಾಟೀಲ ಇವರು ಕಬ್ಬಿನ ಇಳುವರಿ ಹೆಚ್ಚಿಸಲು ಆಧುನಿಕ ಬೇಸಾಯ ಕ್ರಮಗಳು ಹಾಗೂ ಕಬ್ಬಿನ ಬೆಳೆಯಲ್ಲಿ ಹನಿ ನೀರಾವರಿಯ ಮಹತ್ವ ಕುರಿತು ಮತ್ತು ಸುಧಾರಿತ ಹೊಸ ಕಬ್ಬಿನ ತಳಿಗಳ ಬಗ್ಗೆ ಮಾಹಿತಿ ನೀಡುದರು. ಅಲ್ಲದೆ ಕಬ್ಬಿನ ಬೆಳೆಯಲ್ಲಿ ಗೊಣ್ಣೆ ಹುಳುವಿನ ಸಮಗ್ರ ಹತೋಟಿಯ ಕ್ರಮಗಳ ಬಗ್ಗೆ ಕಾರಖಾನೆಯ ಪ್ರಭಾರಿ ಕಬ್ಬು ಅಭಿವೃದ್ಧಿ ಅಧಿಕಾರಿಯಾದ ಸಚಿನ್ ಮೊಪಗಾರ ಮಾಹಿತಿ ನೀಡಿದರು. 

ಕಾರಖಾನೆಯ ನಿರ್ದೇಶಕರಾದ ಅಣ್ಣಾಸಾಹೇಬ ಇಂಗಳೆ ಇವರು ರೈತರನ್ನು ಉದ್ದೇಶಿಸಿ ಮಾತನಾಡಿ ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ಮತ್ತು ಕಬ್ಬಿನ ಆದಾಯ ಇಳುವರಿ ಹೆಚ್ಚಿಸಲು ಕಾರಖಾನೆಯ ರೂವಾರಿಗಳಾದ ಡಾ. ಪ್ರಭಾಕರಣ್ಣಾ ಕೋರೆಯವರು, ಅಮಿತ್‌ಅಣ್ಣಾ ಕೋರೆ, ಹಾಗೂ ಕಾರಖಾನೆಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಕೋರೆಯವರ ಮಾರ್ಗದರ್ಶನದಲ್ಲಿ ಹತ್ತು ಹಲವಾರು ಹೊಸ ಹೊಸ ಯೋಜನೆಗೆಳನ್ನು ಜಾರಿಗೆ ತರುತೀದ್ದು, ಇದರ ಲಾಭವನ್ನು ರೈತರು ತಗೆದುಕೊಳ್ಳಬೇಕೆಂದು ಹೇಳಿದರು. 

ಈ ಕಾರ್ಯಕ್ರಮದ ಸಂದರ್ಭದಲ್ಲಿ ಕಾರಖಾನೆಯ ಆಡಳಿತ ಮಂಡಳಿಯ ಸದಸ್ಯರಾದ ಮಲ್ಲಪ್ಪಾ ಮೈಶಾಳೆ, ಗ್ರಾಮದ ಸಂಪತ ತೋರಾತ, ರಾಮಚಂದ್ರ ಮಡಿವಾಳೆ, ವಿಲಾಸ ಚವ್ಹಾಣ, ವಿಜಯ ಕೋಕಣೆ, ಕೃಷ್ಣಾ ಕೋಕಣೆ ಮತ್ತು ಕಾರಖಾನೆಯ ಅಧಿಕಾರಿಗಳಾದ ರಾಹುಲ್ ಇಚಲಕರಂಜೆ ಕಿಸಾನ ಬಜಾರ ವ್ಯವಸ್ಥಾಪಕರು, ರಾಹುಲ್ ಬಸ್ತವಾಡೆ, ಎಸ್‌.ಡಿ.ಪಾಟೀಲ, ಎಸ್‌.ಎಸ್‌.ಖೋತ, ಆರ್‌.ಎ.ಭೀವಸೆ. ಎಮ್‌.ಎಸ್‌.ಪಾಟೀಲ ಇನ್ನುಳಿದ ಕಾರಖಾನೆಯ ಕ್ಷೇತ್ರಿಯ ಸಿಬ್ಬಂದಿಗಳು ಮತ್ತು ಕಬ್ಬು ಅಭಿವೃದ್ಧಿ ಸಿಬ್ಬಂದಿಗಳು, ಗ್ರಾಮದ ಸುತ್ತಮುತ್ತಲಿನ ರೈತರು ಉಪಸ್ಥಿತರಿದ್ದರು.