ಗಡಿಭಾಗದಲ್ಲಿ ಕಬ್ಬಿನ ಟ್ರ್ಯಾಕ್ಟರ್‌ಗಳ ಸಂಚಾರ ನಿಯಮಗಳ ಉಲ್ಲಂಘನೆ
Sugarcane tractors violate traffic rules at the border
‘ಅಪಘಾತಕ್ಕೆ ಟ್ರ್ಯಾಕ್ಟರಗಳೇ ಕಾರಣ’ ಹೊಸ ಗಾದೆ
ವರದಿ: ಸಂತೋಷಕುಮಾರ ಕಾಮತ್
ಮಾಂಜರಿ 17: ಸಿಕ್ಕಾಪಟ್ಟೆ ಲೋಡಿಂಗ್, ಯರ್ರಾಬಿರ್ರಿ ರೈಡಿಂಗ್, ಬೇಕಾಬಿಟ್ಟಿ ಪಾಕಿಂರ್ಗ್, ನೋ ಲೋಡ್ ಲಿಮಿಟ್, ನೋ ಸ್ಪೀಡ್ ಲಿಮಿಟ್, ನೋ ಫಿಯರ್, ಓಗ್ಲಿ ಟಾಪ್ ಗೇರ್..! ಪ್ರಸಕ್ತ ಸಾಲಿನ ಕಬ್ಬು ನುರಿಯುವ ಹಂಗಾಮು ಪ್ರಾರಂಭಗೊಂಡಿದ್ದು, ಗಡಿಭಾಗದಲ್ಲಿ ಕಬ್ಬಿನ ಟ್ರ್ಯಾಕ್ಟರ್‌ಗಳ ಸಂಚಾರ ನಿಯಮಗಳ ಉಲ್ಲಂಘನೆ ಸಹಜವಾಗಿದೆ. ಕಬ್ಬು ಸಾಗಿಸುವ ನೂರಾರು ಟ್ರ್ಯಾಕ್ಟರ್‌ಗಳು ರಸ್ತೆಯಲ್ಲಿ ಎಗ್ಗಿಲ್ಲದೆ ನುಗ್ಗಿ ಇತರ ವಾಹನ ಸವಾರರು ಮತ್ತು ಸಾರ್ವಜನಿಕರಿಗೆ ಭಯವನ್ನುಂಟು ಮಾಡುತ್ತಿವೆ.
ಅಪಘಾತಕ್ಕೆ ಟ್ರ್ಯಾಕ್ಟರಗಳೇ ಕಾರಣ ಎಂಬ ಹೊಸ ಗಾದೆ ಈ ಭಾಗದಲ್ಲಿ ಚಾಲ್ತಿಯಲ್ಲಿದೆ. ಅಷ್ಟರಮಟ್ಟಿಗೆ ಈ ಭಾಗದಲ್ಲಿ ಟ್ರ್ಯಾಕ್ಟರ್‌ಗಳು ರಸ್ತೆ ಮೇಲೆ ಯಮಸ್ವರೂಪಿಯಾಗಿ ಸಂಚರಿಸುತ್ತಿವೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಾರೆ.
ರಸ್ತೆ ಮೇಲಿನ ಎಲ್ಲ ವಾಹನಗಳಿಗೂ ವೇಗ ಮತ್ತು ಭಾರದ ವಿಷಯದಲ್ಲಿಒಂದು ಮಿತಿಯಿದೆ. ಆದರೆ ಈ ಟ್ರ್ಯಾಕ್ಟರ್‌ಗಳಿಗೆ ಅದ್ಯಾವ ಮಿತಿಯೂ ಇಲ್ಲ. ಒಂದು ಟೆಲರ್‌ಗೆ ಕೇವಲ 6 ಟನ್ ಮತ್ತು ಎರಡು ಟೆಲರ್‌ಗೆ ಸೇರಿ12 ಟನ್ ಭಾರ ಮಾತ್ರ ಹೇರಬೆಕೆಂಬ ನಿಯಮವಿದ್ದರೂ 25ರಿಂದ 30 ಟನ್ ಕಬ್ಬು ಹೇರುತ್ತಿದ್ದಾರೆ.
ಕೆಲವೊಮ್ಮೆ ದಾಖಲೆಗಾಗಿ ಎರಡು ಟೆಲರ್‌ನಲ್ಲಿ 40ರಿಂದ 50 ಟನ್‌ವರೆಗೆ ಕಬ್ಬು ಹಾಕಿ ಚಾಲಕರು ಶರವೇಗದ ಸರದಾರರಂತೆ ಹೆಚ್ಚು ವೇಗವಾಗಿ ಚಲಾಯಿಸಿ ಇನ್ನಿತರ ಸವಾರರ ದಿಕ್ಕು ತಪ್ಪಿಸಿ ಅಪಘಾತಕ್ಕೆ ಕಾರಣರಾಗುತ್ತಿದ್ದಾರೆ. ಧಾಬಾ ಮತ್ತು ಪಾನ್ ಶಾಪ್‌ಗಳ ಮುಂದೆ ಬೇಕಾಬಿಟ್ಟಿ ಟ್ರ್ಯಾಕ್ಟರ್‌ಗಳನ್ನು ನಿಲ್ಲಿಸಿ ಟ್ರಾಫಿಕ್ ಕಾರಣರಾಗುತ್ತಿದ್ದಾರೆ ಎಂದು ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೆಚ್ಚು ಭಾರದ ಕಬ್ಬನ್ನು ತುಂಬುವುದನ್ನು ತಡೆಯಲು ಸಂಚಾರ ಸಂಹಿತೆ ಕಟ್ಟುನಿಟ್ಟಾಗಿ ಪಾಲನೆಯಾಗಲಿ ಎನ್ನುವುದು ಸಾರ್ವಜನಿಕರ ಒತ್ತಾಯ. ಒಟ್ಟಿನಲ್ಲಿ ಟ್ರ್ಯಾಕ್ಟರ್‌ಗಳಲ್ಲಿ ಅತಿಯಾದ ಮತ್ತು ಕಬ್ಬು ತುಂಬಿ ಸಂಚರಿಸುವುದು ಸಾರ್ವಜನಿಕರಲ್ಲಿ ಪ್ರಯಾಣಿಕರಲ್ಲಿ ಆತಂಕ ಮೂಡಿಸಿರುವುದು ಮಾತ್ರ ಸತ್ಯ.!
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 