ಕಬ್ಬಿನ ದರ ಏರಿಕೆಗೆ ಪಟ್ಟುಹಿಡಿದ ರೈತರು: ಕೆಲಸವಿಲ್ಲದೆ ಕಂಗಾಲಾದ ಕಬ್ಬು ಕಟಾವು ಕಾರ್ಮಿಕರು
Sugarcane harvesters are distraught without work
ಮಾಂಜರಿ 30: ಚಿಕ್ಕೋಡಿ ತಾಲ್ಲೂಕಿನ ಮಾಂಜರಿ ಯಡುರ, ಚಂದುರ್, ಇಂಗಳಿ, ಅಂಕಲಿ ಗ್ರಾಮದ ಬಯಲು ಪ್ರದೇಶದಲ್ಲಿ ಈರುವ ಗದ್ದೆಯಲ್ಲಿ ಕಬ್ಬು ಕಡೆಯಲು ಬಂದಿರುವ ಮಹಾರಾಷ್ಟ್ರದ ತಾಂಡಾದವರು ಕೆಲಸವಿಲ್ಲದೆ ತಮ್ಮ ದೈನಂದಿನ ಕಾರ್ಯದಲ್ಲಿ ತೊಡಗಿದ್ದರು.
ಕಬ್ಬಿನ ದರ ಏರಿಕೆಗೆ ಪಟ್ಟು ಹಿಡಿದು ರೈತರು ಒಂದಡೆ ಪ್ರತಿಭಟಿಸುತ್ತಿದ್ದರೆ, ಕಬ್ಬು ಕಟಾವು ಮಾಡಿ ಕೂಲಿ ಗಳಿಕೆಯ ಆಸೆಗೆ ತಾಲ್ಲೂಕಿನ ವಿವಿಧೆಡೆ ಬಂದು ನೆಲೆನಿಂತ ತಾಂಡಾ (ಟೋಲಿ) ಸದಸ್ಯರು ಕೆಲಸ ಸಿಗದೆ ಕಂಗಾಲಾಗಿದ್ದಾರೆ.ಸ್ಥಳೀಯ ತಾಲೂಕಿನಲ್ಲಿರುವ ಮತ್ತು ಗಡಿ ಪ್ರದೇಶದಲ್ಲಿರುವ ಸಕ್ಕರೆ ಕಾರ್ಖಾನೆ ಕಬ್ಬು ನುರಿಯುವ ಪ್ರಕ್ರಿಯೆ ಆರಂಭಿಸಲು ಸಜ್ಜುಗೊಂಡಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ, ವಿವಿಧೆಡೆಯಿಂದ ನೂರಾರು ತಾಂಡಾ ಸದಸ್ಯರು ಕಾರ್ಖಾನೆ ಜೊತೆ ಒಪ್ಪಂದ ಮಾಡಿಕೊಂಡು ಕಬ್ಬು ಕಟಾವಿಗೆ ಬಂದಿವೆ.
ಆದರೆ, ಕಬ್ಬು ನುರಿತ ಪ್ರಕ್ರಿಯೆ ಆರಂಭಕ್ಕೆ ಮುನ್ನ ಪ್ರತಿ ಟನ್‌ಗೆ ?3,350 ನಿಗದಿಪಡಿಸುವ ಜೊತೆಗೆ ಬೆಳೆಗಾರರ ಹಿಂದಿನ ಬಾಕಿ ಪ್ರತಿ ಟನ್‌ಗೆ ?200ರಂತೆ ಪಾವತಿಸಬೇಕು. ತೂಕದ ಯಂತ್ರ ಕಾರ್ಖಾನೆಯ ಹೊರಗೆ ಅಳವಡಿಸಬೇಕು ಎಂದು ಪಟ್ಟು ಹಿಡಿದ ಕಬ್ಬು ಬೆಳೆಗಾರರ ಸಂಘ ಕಟಾವಿಗೆ ಮುಂದಾಗುತ್ತಿಲ್ಲ.
ಅಕ್ಟೋಬರ್ ಎರಡನೇ ವಾರದಿಂದಲೇ ಕಾರ್ಖಾನೆ ಕಬ್ಬು ನುರಿಸಲು ಪ್ರಾರಂಭವಾಗುತ್ತಿದೆ ಎಂದು ತಾಂಡಾಗಳು ಆಯಾ ಗ್ರಾಮಗಳಲ್ಲಿ ಬೀಡು ಬಿಟ್ಟಿವೆ. ಪ್ರತಿ ತಂಡದಲ್ಲಿ 18-20 ಮಂದಿ ಇದ್ದಾರೆ. ದವಸ ಧಾನ್ಯ ದಾಸ್ತಾನು ಮಾಡಿಟ್ಟು ಗದ್ದೆಗಳಲ್ಲಿ ಅಲ್ಲಲ್ಲಿ ತಾಡಪತ್ರಿ ಬಳಸಿ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಿಕೊಂಡಿದ್ದಾರೆ.ಕಳೆದ ವಾರ ಅಕಾಲಿಕ ಮಳೆಯಿಂದ ದಾಸ್ತಾನು ಇಟ್ಟಿದ್ದ ತಾತ್ಕಾಲಿಕ ಗುಡಿಸಲಿನಲ್ಲಿ ನೀರು ನುಗ್ಗಿ ದವಸ ಧಾನ್ಯ ಹಾನೀಗೀಡಾದವು. 15 ರಿಂದ 20 ಜನರು ಒಟ್ಟಾಗಿ ಕಾರ್ಖಾನೆ ಕಬ್ಬು ಕಟಾವು ಆರಂಭಿಸಿತೆಂದು ಬಂದಿದ್ದೇವೆ. 15 ದಿನತಾತ್ಕಾಲಿಕ ಗುಡಿಸಲಿನಲ್ಲಿ ನೀರು ನುಗ್ಗಿ ದವಸ ಧಾನ್ಯ ಹಾನೀಗೀಡಾದವು. 15 ರಿಂದ 20 ಜನರು ಒಟ್ಟಾಗಿ ಕಾರ್ಖಾನೆ ಕಬ್ಬು ಕಟಾವು ಆರಂಭಿಸಿತೆಂದು ಬಂದಿದ್ದೇವೆ. 15 ದಿನ ಕಳೆದರೂ ಕೆಲಸ ಆರಂಭಗೊಂಡಿಲ್ಲ. ಕೆಲಸ ಇರದಿದ್ದರೆ ಕಾರ್ಖಾನೆಯಿಂದ ಕೂಲಿ ಪಾವತಿ ಆಗುವುದಿಲ್ಲ. ಹೀಗೆಯೇ ದಿನ ಕಳೆದರೂ ಆರ್ಥಿಕ ಸಂಕಷ್ಟ ಎದುರಾಗಲಿದೆ' ಎನ್ನುತ್ತಾರೆ ಮಹಾರಾಷ್ಟ್ರ ರಾಜ್ಯದ ಬಾಲನಾ ಜಿಲ್ಲೆಯ ಘಣಸಂಗಿ ತಾಲೂಕಿನ ಸುಖದೇವ ನಾಗೋರಾವ ಧರ್ಮ.
“ಕಾರ್ಖಾನೆ ಮತ್ತು ಬೆಳೆಗಾರರ ನಡುವೆ ಮಾತುಕತೆ ನಡೆದು ಸಮಸ್ಯೆ ಬಗೆಹರಿದರೆ ನಮಗೂ ದುಡಿಮೆ ಸಿಗಲಿದೆ. ಕಬ್ಬು ನುರಿಸಲು ಪ್ರಾರಂಭಿಸಿದರೆ ಕಬ್ಬು ಕಟಾವು ಮಾಡಲು ಬಂದ ತಾಂಡಾಗೆ ಅನುಕೂಲಕರವಾಗಲಿದೆ' ಎಂದು ಸೋನು ಪರಮೇಶ್ವರ್ ಪೋರೆ ಹೇಳಿದರು.
ಲಕ್ಷಾಂತರ ಸಾಲ ಮಾಡಿ ಟ್ರ್ಯಾಕ್ಟರ್ ಟ್ರಾಲಿ ಖರೀದಿಸಿ ತಂದಿದ್ದೇವೆ. 15 ದಿನವಾದರೂ ಕೆಲಸ ಸಿಗದೆ ಅತಂತ್ರರಾಗಿದ್ದೇವೆ
ತಾಂಡಾವೊಂದರ ಮುಖ್ಯಸ್ಥ
“ಮಕ್ಕಳ ಮೇಲೆ ನಿಗಾ ಸವಾಲು'
“ಕಬ್ಬು ಕಟಾವು ಮಾಡಲು ಬಂದ ತಾಂಡಾದ (ಟೋಲಿ) ಪುರುಷ ಸದಸ್ಯರು ಕಬ್ಬು ಕಟಾವು ಕೆಲಸಕ್ಕೆ ತೆರಳಿದರೆ ಅವರ ಜೊತೆ ಬರುವ ಮಹಿಳೆಯರು ತಾಂಡಾದ ಎಲ್ಲಾ ಜನರಿಗೆ ಅಡುಗೆ ಮಾಡುವುದರ ಜೊತೆಗೆ ಹೆಚ್ಚಿನ ದುಡಿಮೆಗೆ ಕಬ್ಬು ಕಟಾವು ಮಾಡಲು ನೆರವಾಗಬೇಕಾಗುತ್ತದೆ. ಬಹುತೇಕ ತಾಂಡಾಗಳಲ್ಲಿ ಚಿಕ್ಕ ಮಕ್ಕಳಿದ್ದು ಅವರನ್ನೂ ಕಬ್ಬು ಕಟಾವು ನಡೆಯುವ ಗದ್ದೆಗೆ ಕರೆದೊಯ್ಯವ ಅನಿವಾರ್ಯತೆ ಉಂಟಾಗುತ್ತದೆ. ಹೀಗೆ ಮಕ್ಕಳ ಮೇಲೆ ನಿಗಾ ಇಡುವುದೇ ಸವಾಲು' ಎನ್ನುತ್ತಾರೆ ತಾಂಡಾವೊಂದರ ಮುಖ್ಯಸ್ಥ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 