ಕಬ್ಬು ಬೆಳೆಯ ವಿಚಾರ ಸಂಕೀರ್ಣ ಸಭೆ

ಕಬ್ಬು ಬೆಳೆಯ ವಿಚಾರ ಸಂಕೀರ್ಣ ಸಭೆ Sugarcane cultivation consultation meeting

ಮಾಂಜರಿ, 25 ; ಸಮೀಪದ   ನಂದಿಕುರಳಿ ಗ್ರಾಮದಲ್ಲಿ ಮಲ್ಲಿಕಾರ್ಜುನ್ ಹಿರೇಮಠ್ ಇವರ ತೋಟದಲ್ಲಿ ಶಿವಶಕ್ತಿ ಶುಗರ್ಸ್‌ ಹಾಗೂ ಚಿದಾನಂದ ಬಸಪ್ರಭು ಕೊರೆ ಸಹಕಾರಿ ಸಕ್ಕರೆ ಕಾರ್ಖಾನೆ ಇವರ ಸಂಯೋಗದಲ್ಲಿ  ಬುಧವಾರರಂದು ರೈತರಿಗಾಗಿ ಕಬ್ಬು ಬೆಳೆಯ ವಿಚಾರ ಸಂಕೀರ್ಣವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಾದ ಆರ್‌. ಬಿ. ಖಂಡಗಾವೆ ಇವರು ಅಧ್ಯಕ್ಷತೆ ವಹಿಸಿಕೊಂಡು  ಮಾತನಾಡಿ ಆಧುನಿಕ ಕಬ್ಬಿನ ಬೆಳೆಯನ್ನು ಯಾವ ರೀತಿ ಬೆಳೆಯಬೇಕು. ಹಾಗೂ ಅದಕ್ಕೆ ಬಾದೆಯಾಗದಂತೆ  ರೋಗಗಳ ಹತೋಟಿಯನ್ನು ಯಾವ ರೀತಿ ಮಾಡಬೇಕು. ಪ್ರಾಥಮಿಕ ಹಂತದಲ್ಲಿ  ಕಬ್ಬನ್ನು ಯಾವ ರೀತಿ ನಾಟಿ ಮಾಡಿ ಅದನ್ನು ಉತ್ತಮವಾಗಿ ಹೇಗೆ ಬೆಳೆಯಬೇಕು. ಮತ್ತು ಕಾರ್ಖಾನೆಗೆ ಕಬ್ಬು ಕಟಾವು ಮಾಡಿ ಸಾಗಾಣಿಕೆ ಮಾಡುವವರಿಗೆ ಯಾವ  ಪೋಷಕಾಂಶಗಳನ್ನು ಕಬ್ಬಿಗೆ ಕೊಡಬೇಕು. ಅಂತ ವಿಸ್ತಾರವಾಗಿ ಮಾತನಾಡಿದರು.  

ಈ ಸಂದರ್ಭದಲ್ಲಿ ಕಾರ್ಖಾನೆಯ ಹಿರಿಯ ಪ್ರಧಾನ ವ್ಯವಸ್ಥಾಪಕರಾದ(ಕಬ್ಬು) ಎನ್‌. ಎಸ್‌. ಹಿರೇಮಠ್ ಇವರು ಕೂಡ ಮಾತನಾಡಿ ಆಧುನಿಕ ಕಬ್ಬಿನ ಕೃಷಿಯಲ್ಲಿ ಕಬ್ಬಿನ ಹೆಚ್ಚು ಇಳುವರಿಯನ್ನು ಯಾವ ರೀತಿ ಪಡೆಯುವ ಬಗ್ಗೆ ಮತ್ತು ಅದರ ಮಹತ್ವವನ್ನು ರೈತರಿಗೆ ತಿಳಿಸಿಕೊಟ್ಟರು. ಸದರಿ ಕಾರ್ಯಕ್ರಮದಲ್ಲಿ ಶಿವಶಕ್ತಿ ಶುಗರ್ಸ್‌ ಕಾರ್ಖಾನೆಯ ಕಬ್ಬು ಅಭಿವೃದ್ಧಿ ಅಧಿಕಾರಿಗಳು ಮತ್ತು ಅವರ ಸಿಬ್ಬಂದಿ ವರ್ಗ ಜೊತೆಗೆ ಚಿದಾನಂದ ಬಸ ಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಕಬ್ಬು ಮೇಲ್ವಿಚಾರಕರಾದ ಎನ್‌. ಆಯ್ ಪಾಟೀಲ್, ಕಬ್ಬು ಅಭಿವೃದ್ಧಿ ಮೇಲ್ವಿಚಾರಕರಾದ ರಾಹುಲ್ ಇಚಲಕರಂಜೆ, ಸಚಿನ್ ಮೋಪಗಾರ ಹಾಗೂ ಸಿಬ್ಬಂದಿ ವರ್ಗದವರು, ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.