10 ಲಕ್ಷ ಅರವತ್ತು ಸಾವಿರ ಮೆಟ್ರಿಕ್ ಟನ್ ಕಬ್ಬುನೂರುಸಿ ಸಕ್ಕರೆ ಉತ್ಪಾದನೆ
Sugar production by crushing 10 lakh sixty thousand metric tons of sugarcane
ಮಾಂಜರಿ 11: ರಾಜ್ಯಸಭೆಯ ಮಾಜಿ ಸದಸ್ಯ ಹಾಗೂ ಪದ್ಮಶ್ರೀ ಡಾ ಪ್ರಭಾಕರ್ ಕೋರೆ ರಾಷ್ಟ್ರೀಯ ಸಕ್ಕರೆ ಕಾರ್ಖಾನೆ ಮಹಾಮಂಡಲ ದೆಹಲಿಯ ನಿರ್ದೇಶಕ ಹಾಗೂ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿರುವ ಯುವ ನಾಯಕ ಅಮಿತ್ ಕೋರೆ ಮತ್ತು ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಕೋರೆ ಇವರ ಮಾರ್ಗದರ್ಶನದಲ್ಲಿ ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಪ್ರಸಕ್ತ ಸಾಲಿನ ಹಂಗಾಮಿನಲ್ಲಿ ಸುಮಾರು 10 ಲಕ್ಷ ಅರವತ್ತು ಸಾವಿರ ಮೆಟ್ರಿಕ್ ಟನ್ ಕಬ್ಬುನೂರುಸಿ ಸಕ್ಕರೆ ಉತ್ಪಾದನೆ ಮಾಡಲಾಗಿದೆ ಈ ವರ್ಷ ಕಬ್ಬು ನುರಿಸುವ ಮಂಡ್ಯದ ಗುರಿ ತಲುಪಲು ಎಲ್ಲ ಸಕ್ಕರೆ ಕಾರ್ಖಾನೆಯ ಸದಸ್ಯರು ಹಾಗೂ ಕಾರ್ಮಿಕ ವರ್ಗ ಮತ್ತು ಕಬ್ಬು ಕಟಾವು ಮತ್ತು ಸಾಗಾಣಿಕೆಯ ಕಾರ್ಮಿಕರಿಂದ ಸಾಧ್ಯವಾಗಿದೆ ಎಂದು ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೇಶಕರಾದ ಭರತೇಶ ಬನವನೆ ಹೇಳಿದರು
ಅವರು ಇಂದು ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಆವರಣದಲ್ಲಿರುವ ಕಾರ್ಮಿಕರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ ಕಬ್ಬು ಸಾಗಾಣಿಕೆ ಮತ್ತು ಕಬ್ಬು ಕಟಾವ ಕಾರ್ಮಿಕರ ಸನ್ಮಾನ ಸಮಾರಂಭ ಮತ್ತು 2025 ಮತ್ತು 26 ಸಾಲಿನ ಕಬ್ಬು ಉಳಿಸುವ ಹಂಗಾಮ ಮುಕ್ತಾಯ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು ಈ ಸಮಾರಂಭದ ಅಧ್ಯಕ್ಷತೆಯನ್ನು ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷರಾದ ತಾತ್ಯಾಸಾಹೇಬ್ ಕಾಟೆ ವಹಿಸಿದ್ದರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕಾರಖಾನೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಆರಿ್ಬ.ಖಾಂಡಗಾವೆಯವರು ಮಾತಾಡುತ್ತಾ ಕಾರಖಾನೆಯು ಹಂಗಾಮಿನಲ್ಲಿ ಉತ್ತಮ ಕಬ್ಬು ನುರಿಸುವಲ್ಲಿ ಶ್ರಮವಹಿಸಿ ಕಬ್ಬು ಕಟಾವು ಮತ್ತು ಸಾರಿಗೆ ಮಕ್ತೆದಾರಿಗೆ, ರೈತ ಸದಸ್ಯರಿಗೆ ಮತ್ತು ಕಾರಖಾನೆಯ ಎಲ್ಲ ಸಿಬ್ಬಂದಿ/ ಕಾರ್ಮಿಕರಿಗೆ ಧನ್ಯವಾದಗಳನ್ನು ಹೇಳಿದರು.
ಈ ಕಾರ್ಯಕ್ರಮಕ್ಕೆ ಕಾರಖಾನೆಯ ಹಿರಿಯ ಪ್ರಧಾನ ವ್ಯವಸ್ಥಾಪಕ(ಕಬ್ಬು)ರಾದ ಶ್ರೀ ಎನ್.ಎಸ್. ಹಿರೇಮಠ . ಒಕ್ಕಲುತನ ವಿಭಾಗದ ಪ್ರಭಾರಿ ಕಬ್ಬು ಅಭಿವೃದ್ಧಿ ಅಧಿಕಾರಿಯಾದ ಶ್ರೀ ಸಚಿನ್ ಮೊಪಗಾರ ಹಾಗೂ ಕಾರಖಾನೆಯ ಆಡಳಿತ ಮಂಡಳಿಯ ಸದಸ್ಯರಾದ ಅಜೀತರಾವ ದೇಸಾಯಿ, ಚೇತನ ಪಾಟೀಲ, ಅಣ್ಣಾಸಾಹೇಬ ಇಂಗಳೆ, ಮಲ್ಲಪ್ಪ ಮೈಶಾಳೆ, ಭೀಮಗೌಡಾ ಪಾಟೀಲ, ಕಾರಖಾನೆಯ ವಿವಿಧ ವಿಭಾಗಗಳ ಮುಖ್ಯಸ್ಥರು ಹಾಗೂ ಸಿಬ್ಬಂದಿ ಕಾರ್ಮಿಕರು ಕಬ್ಬು ಕಟಾವು ಮತ್ತು ಸಾರಿಗೆ ಮಕ್ತೆದಾರರು ಉಪಸ್ಥಿತರಿದ್ದರು. ರಾಹುಲ್ ಇಚಲಕರಂಜಿ ಸ್ವಾಗತಿಸಿ ನಿರೂಪಿಸಿದರು ರಾಹುಲ್ ಬಸ್ತವಾಡಿ ವಂದಿಸಿದರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 