ರೈತರಿಗೆ 2025-26 ನೇ ಸಾಲಿನ ಸಕ್ಕರೆ ವಿತರಣೆ

ರೈತರಿಗೆ 2025-26 ನೇ ಸಾಲಿನ ಸಕ್ಕರೆ ವಿತರಣೆ  Sugar distribution to farmers for the 2025-26 year

ಲೋಕದರ್ಶನ ವರದಿ 

ಮಹಾಲಿಂಗಪುರ  04:  2025-26 ನೇ ಹಂಗಾಮಿಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ ಒಂದು ಟನ್ನಿಗೆ 500 ಗ್ರಾಂ ನಂತೆ ನಿಗದಿ ದರ 24 ರೂ.ಗಳಲ್ಲಿ ವಿತರಿಸುತ್ತಿರುವ ಸಕ್ಕರೆಯನ್ನು ಸಕಾಲದಲ್ಲಿ ಪಡೆದುಕೊಳ್ಳಲು ಗೋದಾವರಿ ಬಯೋರಿಫೈನ್ರೀಸ್ ಸಕ್ಕರೆ ಕಾರ್ಖಾನೆಯ ಕಾರ್ಯ ನಿರ್ವಾಹಕ ನಿರ್ದೇಶಕರಾದ ಬಿ.ಆರ್‌.ಭಕ್ಷಿ ರೈತರನ್ನು ಕೋರಿದ್ದಾರೆ. ಅಗಷ್ಟ 5 ಬುಧವಾರ ರಿಂದ 14 ರವರೆಗೆ ನಿಗದಿತ ಸ್ಥಳಗಳಲ್ಲಿ ಮುಂಜಾನೆ 9 ಗಂಟೆಯಿಂದ ಸಾಯಂಕಾಲ 4 ಗಂ ವರೆಗೆ ಸಕ್ಕರೆಯನ್ನು ವಿತರಿಸಲಾಗುತ್ತಿದೆ.ಈ ಸಂದರ್ಭದಲ್ಲಿ ರೈತರು ಒಟ್ಟು ಹಣವನ್ನು ನಗದು ಅಥವಾ ಕ್ಯೂಆರ್ ಕೋಡ್ ಮೂಲಕ ಸಂದಾಯ ಮಾಡಬಹುದು ಮತ್ತು ರೈತರು ತಾವು ಬರುವಾಗ ಕಬ್ಬಿನ ತೂಕದ ಸ್ಲೀಪ್, ಗುರುತಿನ ಚೀಟಿ ತರಬೇಕು. 

ಸಕ್ಕರೆ ವಿತರಿಸುವ ಸ್ಥಳಗಳು: 1) ಮಹಾಲಿಂಗಪುರ, ಎಪಿಎಂಸಿಯಲ್ಲಿಯ ಗೋಡೌನ್‌.2) ಬಿಸನಾಳ, ಸೋಲಾರ್ ಮ್ಯಾಜಿಕ್ ಪ್ರೈ.ಗೋಡೌನ್‌.3) ಮುಧೋಳ, ಪದ್ಮಾವತಿ ನಗರದ ಪೋಲೀಸ್ ಸ್ಟೇಷನ್ ಹತ್ತಿರದ ಗೋಡೌನ್‌.4) ರಬಕವಿ, ವಿ.ಆರ್‌.ಎಲ್ ಹಿಂದುಗಡೆ ಇರುವ ಗೋಡೌನ್‌.5) ಮೂಡಲಗಿ,ಶಿವಾಪೂರ ರೋಡ್, ಶ್ರೀನಿವಾಸ ಶಾಲೆ ಹತ್ತಿರದ ಜಿ.ಟಿ.ಸೋನವಾಲ್ಕರ್ ಗೋಡೌನ್‌.6) ಕುಲಗೂಡ, ಬಲಭೀಮ ಸಭಾಭವನದಲ್ಲಿ.7)ಮುಗಳಖೋಡ, ಭಾರತ ಗ್ಯಾಸ್ ಆಫೀಸ್ ಹತ್ತಿರ.8) ಸಿಂದಗಿ, ಎಪಿಎಂಸಿ ಬಿ.ಎಂ.ಕೋರಿ ಟ್ರೇಡರ್ಸ್‌ ಗೋಡೌನ್‌. ರೈತರು ಇಲ್ಲಿ ಸಕ್ಕರೆ ಪಡೆದುಕ್ಕೊಳ್ಳಬಹುದಾಗಿದೆ ಎಂದು ತಿಳಿಸಿದರು.