ಹುಣಶ್ಯಾಳ ಪಿ.ಜಿ. ಕಾರ್ಖಾನೆಗೆ ಕಬ್ಬು ಪೂರೈಸಿದ ರೈತರಿಗೆ ರಿಯಾಯಿತಿ ದರದಲ್ಲಿ ಸಕ್ಕರೆ ವಿತರಣೆ
Sugar distribution at concessional rates to farmers who supplied sugarcane to Hunashyal PG factory
ಹುಣಶ್ಯಾಳ 05: ಸನ್ 2024-25 ನೇ ಹಂಗಾಮಿನಲ್ಲಿ ನಮ್ಮ ಕಾರ್ಖಾನೆಗೆ ಕಬ್ಬು ಹಾಗೂ ಕಬ್ಬಿನ ಬೀಜ ಪೂರೈಸಿದ ಎಲ್ಲ ರೈತ ಬಾಂಧವರಿಗೆ ತಾವು ಪೂರೈಸಿದ ಪ್ರತಿ ಟನ್ ಕಬ್ಬಿಗೆ 500 ಗ್ರಾಂ. (ಅರ್ಧ ಕೆ.ಜಿ) ಯಂತೆ ಸಕ್ಕರೆಯನ್ನು ಪ್ರತಿ ಕಿ.ಗ್ರಾಂ.ಗೆ ರೂ. 20/- ರ ರಿಯಾಯಿತಿ ದರದಲ್ಲಿ ವಿತರಿಸುವ ಕುರಿತು ಕಾರ್ಖಾನೆಯ ಆಡಳಿತ ಮಂಡಳಿಯಲ್ಲಿ ನಿರ್ಧರಿಸಲಾಗಿದೆ. ಸನ್ 2024-25 ನೇ ಹಂಗಾಮಿನಲ್ಲಿ ಕಬ್ಬು ಮತ್ತು ಕಬ್ಬಿನ ಬೀಜ ಪೂರೈಸಿದ ರೈತ ಬಾಂಧವರಿಗೆ ಪ್ರತಿ ವರ್ಷದಂತೆ ಈ ವರ್ಷವೂ ಸಹ ಸಕ್ಕರೆಯನ್ನು ಸೋಮವಾರ ದಿ. 07.07.2025 ರಿಂದ (ರವಿವಾರದ ರಜೆಯನ್ನು ಹೊರತುಪಡಿಸಿ) ಸತೀಶ ಶುಗರ್ಸ ಲಿಮಿಟೆಡ್, ಹುಣಶ್ಯಾಳ ಪಿ.ಜಿ. ಕಾರ್ಖಾನೆಯ ಆವರಣದಲ್ಲಿ ವಿತರಿಸಲಾಗುವುದು.
ಕಾರಣ, ಕಬ್ಬು ಪೂರೈಸಿದ ಎಲ್ಲ ರೈತ ಬಾಂಧವರು ಖುದ್ದಾಗಿ ಅಥವಾ ತಮ್ಮ ಪ್ರತಿನಿಧಿಯ ಮೂಲಕ ಕಾರ್ಖಾನೆಯ ಆವರಣದಲ್ಲಿನ ಸಕ್ಕರೆ ವಿತರಣಾ ಕೇಂದ್ರದಲ್ಲಿ ಕಬ್ಬಿನ ತೂಕದ ಪಾವತಿ, ಗುರುತಿನ ಚೀಟಿ ಹಾಗೂ ಪ್ರತಿನಿಧಿಯಾಗಿದ್ದಲ್ಲಿ ಸಂಬಂಧಪಟ್ಟ ವಲಯ ಕಚೇರಿಗಳಿಂದ ಅನುಮೋದಿಸಲ್ಪಟ್ಟ ಸಮ್ಮತಿ ಪತ್ರಗಳನ್ನು ಕಡ್ಡಾಯವಾಗಿ ಕಚೇರಿ ವೇಳೆಯಲ್ಲಿ ಹಾಜರುಪಡಿಸಿ ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬಹುದು. ಅದರಂತೆ, ಮುಂಬರುವ ದಿನಗಳಲ್ಲಿಯೂ ಸಹ ನಮ್ಮೆಲ್ಲ ರೈತ ಬಾಂಧವರು ತಾವು ಬೆಳೆದ ಒಳ್ಳೆಯ ಗುಣಮಟ್ಟದ ಕಬ್ಬನ್ನು ನಮ್ಮ ಕಾರ್ಖಾನೆಗೆ ಪೂರೈಸಿ, ಮುಂಬರುವ ಹಂಗಾಮನ್ನು ಯಶಸ್ವಿಗೊಳಿಸಲು ಸಹಕರಿಸಬೇಕೆಂದು ಸತೀಶ ಶುಗರ್ಸ ಲಿಮಿಟೆಡ್. ಪರವಾಗಿ ವಿನಂತಿಸುತ್ತೇವೆ.
ಈ ಮೇಲ್ಕಾಣಿಸಿದ ಸುದ್ದಿಯ ವಿಷಯವನ್ನು ತಮ್ಮ ಜನಪ್ರೀಯ ದಿನ ಪತ್ರಿಕೆಯಲ್ಲಿ ಸುದ್ದಿ ಅಂತಾ ಪ್ರಕಟಿಸಲು ವಿನಂತಿಸಲಾಗಿದೆ.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 