ಪುಣೆಯಲ್ಲಿ ಶ್ರೀಮಂತ ಪಾಟೀಲ್‌ಗೆ ಶುಗರ್ ಇಂಡಸ್ಟ್ರೀಜ್ ಗ್ಲೋರಿ: ಅವಾರ್ಡ್‌ ಪ್ರಶಸ್ತಿ ಪ್ರದಾನ

ಪುಣೆಯಲ್ಲಿ ಶ್ರೀಮಂತ ಪಾಟೀಲ್‌ಗೆ ಶುಗರ್ ಇಂಡಸ್ಟ್ರೀಜ್ ಗ್ಲೋರಿ: ಅವಾರ್ಡ್‌ ಪ್ರಶಸ್ತಿ ಪ್ರದಾನ Sugar Industries Glory: Award presentation to Shrimant Patil in Pune

ಲೋಕದರ್ಶನ ವರದಿ 

ಕಾಗವಾಡ 09: ಮಹಾರಾಷ್ಟ್ರದ ಪುಣೆಯ ಡೆಕ್ಕನ್ ಶುಗರ್ ಟೆಕ್ನಾಲಜಿಸ್ ವತಿಯಿಂದ ತಾಲೂಕಿನ ಕೆಂಪವಾಡದ ಅಥಣಿ ಫಾರ್ಮರ​‍್ಸ‌ ಶುಗರ್ ವರ್ಕ್ಸ್‌ನ ಅಧ್ಯಕ್ಷ ಹಾಗೂ ಮಾಜಿ ಸಚಿವ ಶ್ರೀಮಂತ ಪಾಟೀಲ ಅವರಿಗೆ ಶನಿವಾರ ದಿ. 08 ರಂದು  ಪುಣೆ ಮಹಾನಗರದಲ್ಲಿ ನಡೆದ ಡೆಕ್ಕನ್ ಶುಗರ್ ಟೆಕ್ನಾಲಜಿಸ್‌ನ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ‘ಶುಗರ್ ಇಂಡಸ್ಟ್ರೀಜ್ ಗ್ಲೋರಿ ಅವಾರ್ಡ್‌' (ಸಕ್ಕರೆ ಉದ್ಯಮ ಗೌರವ ಪುರಸ್ಕಾರ) ಪ್ರದಾನ ಮಾಡಲಾಯಿತು. ಉಗಾರ ಸಕ್ಕರೆ ಕಾರ್ಖಾನೆಯ ಉದ್ಯಮಿ ಸೋಹನ್ ಶಿರಗಾಂವಕರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಮುಖಂಡ ಮಾಜಿ ಸಚಿವ ಜಯಂತ್ ಪಾಟೀಲ ಅವರು ಮಾಜಿ ಸಚಿವ ಶ್ರೀಮಂತ ಪಾಟೀಲ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದ  ಮಾಡಿದರು.