ಸುಗಮ ಸಂಗೀತ ಹಾಗೂ ಸಂಘದ ಹಿರಿಯ ಸದಸ್ಯರಿಗೆಗೌರವ ಸಮರ್ಪಣಾ ಕಾರ್ಯಕ್ರಮ
Sugama Sangeet and a program to honor senior members of the association
ಧಾರವಾಡ 25 : ಶಿಕ್ಷಣ, ಸಂಗೀತ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಧಾರವಾಡದ ಕೊಡುಗೆ ಸ್ಮರಣೀಯವಾದುದು. ಶಿಕ್ಷಣದ ಗುಣಮಟ್ಟ ಸುಧಾರಿಸುವಲ್ಲಿ ನಾನು ತ್ರಿಕರಣ ಶುದ್ಧಿಯಿಂದ, ಬದ್ಧತೆಯಿಂದ ಕಾರ್ಯ ನಿರ್ವಹಿಸಿದ್ದೇನೆ ಎಂದು ಶಾಲಾ ಶಿಕ್ಷಣ ಹಾಗೂ ಪದವಿ ಪೂರ್ವಇಲಾಖೆಯ ಉಪ ನಿರ್ದೇಶಕ ಕೆ.ಪಿ.ಸುರೇಶ ಅಭಿಪ್ರಾಯಪಟ್ಟರು.
ಕರ್ನಾಟಕ ವಿದ್ಯಾವರ್ಧಕ ಸಂಘವು 136ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ, ಸುಗಮ ಸಂಗೀತ ಹಾಗೂ ಸಂಘದ ಹಿರಿಯ ಸದಸ್ಯರಿಗೆಗೌರವ ಸಮರಾ್ಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಮಾನ್ಯ ಜಿಲ್ಲಾಧಿಕಾರಿಗಳ ಮಾರ್ಗದರ್ಶನ ಹಾಗೂ ಕ.ವಿ.ವ. ಸಂಘದ ಸಹಕಾರದೊಂದಿಗೆಜಿಲ್ಲೆಯ ಪಿ.ಯು.ಸಿ.ವಿದ್ಯಾರ್ಥಿಗಳ ಫಲಿತಾಂಶದ ಶೇಕಡಾ ಪ್ರಮಾಣ ಹೆಚ್ಚಿಸಲಾಗಿದೆ.27ನೇ ಸ್ಥಾನದಲ್ಲಿದ್ದ ಜಿಲ್ಲೆಯ ತೇರ್ಗಡೆ ಪ್ರಮಾಣವನ್ನು ಕಳೆದ ವರ್ಷ 12ನೇ ಸ್ಥಾನಕ್ಕೆ ಬರುವಂತೆ ಮಾಡಲಾಗಿದೆ. ಫಲಿತಾಂಶ ಹೆಚ್ಚಿಸಲು ಪ್ರಾಚಾರ್ಯರ, ಪ್ರಾಧ್ಯಾಪಕರ ಶ್ರಮ ದೊಡ್ಡದು. ವಿಜ್ಞಾನ ವಿಷಯ ಅಧ್ಯಯನ ಮಾಡುವ ವಿದ್ಯಾರ್ಥಿಗಳಲ್ಲಿ ದೇಶದ ಸ್ವಾತಂತ್ರ್ಯ ಹೋರಾಟಗಾರರಜೀವನಯಶೋಗಾಥೆಯ ಬಗ್ಗೆ ಅಭಿಮಾನ ಹಾಗೂ ದೇಶಪ್ರೇಮ ಉಂಟು ಮಾಡುವ ಉಪನ್ಯಾಸ ಹಾಗೂ ಕೃತಿಗಳನ್ನು ರಚಿಸಲಾಗಿದೆ.
ನರಗುಂದ ಬಾಬಾಸಾಹೇಬ, ಮುಂಡರಗಿ ಭೀಮರಾಯ ಹಾಗೂ ರಾಣಿಚೆನ್ನಮ್ಮ, ಹಾವೇರಿ ಮೈಲಾರ ಮಹದೇವಪ್ಪ ಸೇರಿದಂತೆ ಚಲೇಜಾವ್ ಚಳುವಳಿಯ ಮೂವರು ಹುತಾತ್ಮರ ಸ್ವಾತಂತ್ರ್ಯ ಹೋರಾಟದ ಬಗ್ಗೆ ರೂಪಕಗಳನ್ನು ಆಯೋಜಿಸಿ ಜಿಲ್ಲಾಡಳಿತದಿಂದ ಪ್ರಶಂಸೆಗೆ ಪಾತ್ರವಾಗುವಂತೆ ಮಾಡಲಾಗಿದೆ. ಈ ಎಲ್ಲಾ ಕಾರ್ಯಕ್ಕೆ ಕ.ವಿ.ವ. ಸಂಘದ ಸಹಕಾರ ಸ್ಮರಿಸಲೇಬೇಕು. ಹೊರ ಜಿಲ್ಲೆಗಳಿಂದ ಅಧ್ಯಯನಕ್ಕೆ ಬರುವ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ನಮ್ಮದೊಂದು ಪ್ರಯತ್ನಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕೋಶಾಧ್ಯಕ್ಷ ಸತೀಶತುರಮರಿ ಮಾತನಾಡಿ, ಸಂಗೀತದಲ್ಲಿ ಒಂದು ಶಕ್ತಿ ಇದೆ.ಅದು ನಮ್ಮ ಜಡತ್ವ ನೀಗಿಸಿ ಮುದ ನೀಡುವುದಾಗಿದೆ. ಸಂಗೀತ ದೇವಾನುದೇವತೆಗಳಿಗೂ ಇಷ್ಟವಾದುದು. ಕ.ವಿ.ವ. ಸಂಘವು ಭವಿಷ್ಯದಲ್ಲಿ ಸಂಗೀತಾಸಕ್ತ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಕಾರ್ಯವನ್ನು ಆಯೋಜಿಸಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕ.ವಿ.ವ. ಸಂಘದ ಹಿರಿಯ ಸದಸ್ಯರಾದ ಧಾರವಾಡದ ತಿಲಕರಾಜ ಮಹಾಜನಶೇಟ, ನೂಲ್ವಿಯಗುರ್ಪ ಸಿದ್ಧಪ್ಪ ಜಿಡ್ಡಿ ಹಾಗೂ ಧಾರವಾಡದ ಎಂ.ಆರ್. ಹೊಂಗಲಮಠ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಬೆಳಗಾವಿಯ ಬೆಳ್ಳಿಚುಕ್ಕಿ ಅಕಾಡೆಮಿಯ ಡಾ.ರಾಜೇಶ್ವರಿ ಹಿರೇಮಠ ಹಾಗೂ ಸಂಗಡಿಗರು ಸುಶ್ರಾವ್ಯವಾಗಿ ‘ಸುಗಮ ಸಂಗೀತ’ ಪ್ರಸ್ತುತ ಪಡಿಸಿದರು.
ಶಂಕರ ಹಲಗತ್ತಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.ಡಾ. ಜಿನದತ್ತ ಹಡಗಲಿ ನಿರೂಪಿಸಿದರು. ವೀರಣ್ಣ ಒಡ್ಡೀನ ವಂದಿಸಿದರು.
ಕಾರ್ಯಕ್ರಮದಲ್ಲಿ ಡಾ.ಸಂಜೀವಕುಲಕರ್ಣಿ, ಬಸವಪ್ರಭು ಹೊಸಕೇರಿ, ಶಿವಾನಂದ ಭಾವಿಕಟ್ಟಿ, ಡಾ.ಮಹೇಶ ಧ. ಹೊರಕೇರಿ, ಪ್ರಿ. ಶಶಿಧರ ತೋಡಕರ, ಡಾ. ಧನವಂತ ಹಾಜವಗೋಳ, ಡಾ. ಸುರೇಶ ಹೊರಕೇರಿ, ಗದಿಗೆಯ್ಯಾ ಹಿರೇಮಠ, ಡಾ. ಅರುಣಾ ಹಳ್ಳಿಕೇರಿ, ಜಯಶ್ರೀ ಜಾತಿಕರ್ತ, ಕೆ.ಎಸ್. ಕೋರಿಶೆಟ್ಟರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ 