ತಡೆಹಿಡಿದ ಸಂಬಳ ಬಿಡುಗಡೆಗೆ ಆಗ್ರಹಿಸಿ ದಿಢೀರ್ ಧರಣಿ

ತಡೆಹಿಡಿದ ಸಂಬಳ ಬಿಡುಗಡೆಗೆ ಆಗ್ರಹಿಸಿ ದಿಢೀರ್ ಧರಣಿ Sudden sit-in demanding release of withheld salary

          ಮುದ್ದೇಬಿಹಾಳ:  ತಾಲೂಕಿನ ತಂಗಡಗಿಯಲ್ಲಿರುವ ಖಾಸಗಿ ಅನುದಾನಿತ ಚರಲಿಂಗೇಶ್ವರ ಪ್ರೌಢಶಾಲೆ ಮುಖ್ಯಾಧ್ಯಾಪಕ ಬಿ.ಜಿ.ಬಿರಾದಾರ ಅವರಿಗೆ ಕಳೆದ ಒಂದು ವರ್ಷದಿಂದ ಸಂಬಳ ಮಾಡದೇ ತಡೆ ಹಿಡಿದಿರುವುದರಿಂದ ಬೇಸತ್ತು ಅವರ ಪತ್ನಿ ಮಕ್ಕಳ ಸಮೇತ ತಾಲೂಕಾ ಕ್ಷೇತ್ರ ಶಿಕ್ಷಣ ಇಲಾಖೆಯ ಕಚೇರಿ ಎದುರು ಶುಕ್ರವಾರ ದಲಿತ ಮುಖಂಡರ ನೇತೃತ್ವದಲ್ಲಿ  ದಿಢೀರ್ ಧರಣಿ ನಡೆಸಿ ತಡೆಹಿಡಿದ ಸಂಬಳ ಬಿಡುಗಡೆಗೊಳಿಸುವಂತೆ ಆಗ್ರಹಿಸಿದರು.  

ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಎದುರು ಧರಣಿ ನಡೆಸುತ್ತಿರುವ ಮುಖ್ಯಾಧ್ಯಾಪಕ ಬಿ.ಜಿ.ಬಿರಾದಾರ ಅವರನ್ನು ಬೆಂಬಲಿಸಿದ ತಾಲೂಕಾ ದಲೀತ ಸಂಘಟನೆಯ ಮುಖಂಡ ಹರೀಷ ನಾಟಿಕಾರ ಅವರು ಮಾತನಾಡಿ ಬಿ ಜಿ ಬಿರಾದಾರ ಅವರೋಬ್ಬ ದಲಿತರು ಎಂಬ ಕಾರಣಕ್ಕೆ ಯಾವೂದೇ ತಪ್ಪು ಮಾಡದೇ ಇದ್ದರೂ ಕಾರಣವಿಲ್ಲದೇ ಸಂಬಳ ತಡೆಹಿಡಿದಿರುವುದು ದುರುದ್ದೇಶದಿಂದ ಕೂಡಿದೆ ಈ ಕೂಡಲೇ ಸಂಬಳ ವಿತರಿಸಬೇಕು ಅಲ್ಲಿಯವರೆಗೆ ಧರಣಿ ಹಿಂಪಡೆಯುವ ಪ್ರಶ್ನೇಯೇ ಇಲ್ಲ. ಅದಕ್ಕೂ ಅಧಿಕಾರಿಗಳು ಬಗ್ಗದೇ ಇದ್ದರೇ ತಾಲೂಕಿನ ಎಲ್ಲ ಪ್ರಗತಿಪರ ದಲಿತ ಮುಖಂಡರ ನೇತೃತ್ವದಲ್ಲಿ ಹಂತ ಹಂತವಾಗಿ ಧರಣಿ ಜತೆಗೆ ಉಗ್ರ ಹೋರಾಟ ನಡೆಸುವ ಮೂಲಕ ಇಡೀ ರಾಜ್ಯಾದಾಧ್ಯಂತ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುವಂತೆ ಮಾಡಬೇಕಾಗುತ್ತದೆ ಎಂದರು.  

ಅನ್ಯಾಯಕ್ಕೋಳಗಾದ ಮುಖ್ಯೋಪಾಧ್ಯಾಯ ಬಿ ಜಿ ಬಿರಾದಾರ ಅವರು ಮಾತನಾಡಿ 2025ರ ಮಾರ್ಚನಿಂದ ಇಲ್ಲಿವರೆಗೆ ಯಾವುದೇ ಲಿಖಿತ ಕಾರಣ ನೀಡದೆ ಬಿ.ಇ.ಓ ಅವರು ಸಂಬಳ ತಡೆಹಿಡಿದಿದ್ದಾರೆ. ಇದನ್ನು ಪ್ರಶ್ನಿಸಿ ಕಲಬುರಗಿ, ಹೈಕೋರ್ಟ ಪೀಠಕ್ಕೆ ರಿಟ್ ಪಿಟೇಶನ್ ದಾಖಲಿಸಿದಾಗ, ಡಿ.3ರಂದು ತಡೆ ಆದೇಶ ನೀಡಿದ್ದರೂ ಸಂಬಳ ತೆಗೆಯದೆ ನಿರ್ಲಕ್ಷ ವಹಿಸಿದ್ದಾರೆ.  ಸಂಸ್ಥೆಯ ಹಿಂದಿನ ಅಧ್ಯಕ್ಷರು  ಶಾಲಾ ಆಡಳಿತ ಮಂಡಳಿಯವರು ಎಜುಕೇಷನ್ ಅಪೆಲೆಟ್ ಟ್ರಿಬ್ಯೂನಲಗೆ ಹೋಗಿ ನ್ಯಾಯ ಪಡೆದುಕೊಳ್ಳಲು ಆದೇಶಿಸಿತ್ತು. ಅದರಂತೆ ಟ್ರಿಬ್ಯೂನಲನವರು 2024ರ ಮಾರ್ಚ 26ರಂದು ನನ್ನ ಮೇಲೆ ಹೇರಿದ್ದ ಆರೋಪ ರದ್ದುಪಡಿಸಿ.  ಸಂಬಳ ನೀಡಬೇಕೇಂದು ಆದೇಶಿಸಿದೆ, ಆದರೂ ಸಹಿತಿ ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿ ಬಿ ಎಸ್ ಸಾವಳಗಿ ಅವರು 11 ತಿಂಗಳು ಕಳೆದರೂ ಸಂಬಳ ಬಿಡುಗಡೆ ಮಾಡಿಲ್ಲ. ಇದರಿಂದ ನನ್ನ ಕುಟುಂಬ ತೀವೃ ತೊಂದರೆ ಅನುಭವಿಸುವಂತಾಗಿದೆ ಮಾತ್ರವಲ್ಲದೇ  ಸಾಲ ಸೂಲ ಮಾಡಿ ಹೆಂಡತಿ, ಮಕ್ಕಳೊಂದಿಗೆ ಬದುಕುವುದು ಕಷ್ಟಕರವಾಗಿದೆ.  ನನ್ನ ಕುಟುಂಬದಲ್ಲಿ ಏನಾದರೂ ಹೆಚ್ಚುಕಡಿಮೆಯಾದಲ್ಲಿ ಇದಕ್ಕೆ ಬಿಇಓಅವರೇ ಹೊಣೆಗಾರರು ಎಂದು ತಿಳಿಸಿ ಬಿಇಓ ಅವರಿಗೆ ಲಿಖಿತ ಪತ್ರ ನೀಡಿದರು.  

ದಲಿತ ಮುಖಂಡರಾದ ದೇವೇಂದ್ರ ವಾಲೀಕಾರ  ಬಿಇಓ ಕಚೇರಿ ಸಿಬ್ಬಂದಿಯನ್ನು ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡು ಕಾರಣ ವಿಲ್ಲದೆ ಸಂಬಳ ತಡೆ ಹಿಡಿದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಒಂದು ಹಂತದಲ್ಲಿ ವಾಲೀಕಾರ ಅವರು ಬಿಇಓ ಕಚೇರಿ ಸಮಸ್ತ ಸಿಬ್ಬಂದಿಗಳಿಗೆ ತರಾಟೆಗೆ ತೆಗೆದುಕೊಂಡು ಮುಖ್ಯಾಧ್ಯಾಪಕರ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡದಿದ್ದರೆ  ರಾಜ್ಯದಾಧ್ಯಂತ ಉಗ್ರ ಹೋರಾಟಕ್ಕಿಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು. ದಲಿತ ಮುಖಂಡರಾದ ಹರೀಶ ನಾಟಿಕಾರ  

ಪ್ರಶಾಂತ ಕಾಳೆ,  ಶಿಲ್ಪಾ ಬಿರಾದಾರ, ಹನುಮಂತನಾಯಕ ಮಕ್ಕಳ, ರಾಜು ವಾಲಿಕಾರ, ಅರವಿಂದ ಕಾಶಿನಕುಂಟಿ, ಸಂಗಮೇಶ ಗುತ್ತೇದಾರ, ಮಂಜುನಾಥ ಪೂಜಾರಿ, ಸಿದ್ದು ಭಂಟನೂರ, ವೀರೇಶ ಭಜಂತ್ರಿ, ಎಚ್ .ಡಿ.ಅತ್ತಾರ, ದೇವರಾಜ ಹಂಗರಗಿ, ಶಾಂತು ನಾಯಕ ಮಕ್ಕಳ, ರಾಜು ತುಂಬಗಿ, ಸಂಗನಗೌಡ ಪಾಟೀಲ(ಜಿಯೋ), ಬಿ.ಎಚ್‌.ಹಾಲಣ್ಣವರ್, ಮುತ್ತು ಚಲವಾದಿ, ಮೌನೇಶ ಗಸ್ತಿಗಾರ,  ಹಲವರು ಇದ್ದರು. ವೇಗದ ಚಾಲನೆ ನಿಲ್ಲಬೇಕು. ಇದರಿಂದ ಅನೇಕ ಸಾವು ನೋವುಗಳು ಸಂಭವಿಸುತ್ತಿವೆ ಎಂದು ತಿಳಿಸಿದರು.  

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಾದ ಅಂಬವ್ವ ಕುಂಬಾರ ಅವರು ಮಾತನಾಡಿ,ಸಮಾಜದಲ್ಲಿ ನಡೆಯುವ ಬಾಲ್ಯ ವಿವಾಹವನ್ನು ಹೆಣ್ಣು ಮಕ್ಕಳು ತಡೆಹಿಡಿಯಬೇಕು ಅಥವಾ 1098 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ತಿಳಿಸಿ ಅಧಿಕಾರಿಗಳು ಬಂದು ತಕ್ಷಣ ವಿವಾಹ ನಿಲ್ಲಿಸುತ್ತಾರೆ ಎಂದು ಬಾಲ್ಯ ವಿವಾಹದ ಕುರಿತು ಸವಿಸ್ತಾರವಾಗಿ ಮಾತನಾಡಿದರು.  

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ವಕೀಲರ ಸಂಘದ ಸದಸ್ಯರಾದ ರವಿ ನಾಯಕ, ರಾಜಕುಮಾರ ಬಿರಾದಾರ, ಅಸ್ಲಾಂ ಬಂಕಲಗಿ ಹಾಗೂ ಪೋಲಿಸ್ ಇಲಾಖೆಯ ಅಧಿಕಾರಿಗಳಾದ  ಬಿ.ಎಂ.ಚೌರ ಅವರು ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ಯುವಕರು, ಚಿಕ್ಕಮಕ್ಕಳು ಅತ್ಯಂತ ವೇಗವಾಗಿ ದ್ವಿಚಕ್ರ ವಾಹನ ಚಾಲನೆ ಮಾಡಿ ಸಂಚಾರ ನಿಯಮ ಉಲ್ಲಂಘಿಸುತ್ತಿದ್ದಾರೆ. ನಿಯಮಗಳು ಇರುವುದು ನಮ್ಮ ಒಳ್ಳೆಯದಕ್ಕಾಗಿ ಪ್ರತಿಯೊಬ್ಬರೂ ಸಂಚಾರ ನಿಯಮ ಪಾಲಿಸಬೇಕು ಎಂದು ಹೆಳಿದರು.  

ಅಧ್ಯಕ್ಷತೆಯನ್ನು ಸ್ಥಳೀಯ ಸಂಸ್ಥೆಯ ಎನ್‌.ಎಲ್‌.ಅಂಗಡಿ ಅವರು ಮಾತನಾಡಿ, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ರಸ್ತೆ ಸುರಕ್ಷತೆಯ ಮಹತ್ವ ಅರಿಯಬೇಕು, ಅಪಘಾತ ಪ್ರಮಾಣಗಳನ್ನು ಕಡಿಮೆ ಮಾಡಲು ವಾಹನ ಚಲಿಸುವ ಪ್ರತಿಯೊಬ್ಬರು ಚಾಲನಾ ಪರವಾನಿಗೆ ಪಡೆದಿರಬೇಕು ಎಂದು ಹೇಳಿದರು.  ಉಪನ್ಯಾಸಕ ಸಿದ್ದರಾಮ ತಳವಾರ ನಿರೂಪಿಸಿ, ವಂದಿಸಿದರು. ಪ್ರಾಚಾರ್ಯ ಎಸ್‌.ಪಿ. ರಜಪೂತ್, ಉಪನ್ಯಾಸಕರಾದ ಎಸ್‌.ಎಚ್‌.ಮುಬಿ, ಎಂ.ವೈ.ಬುಯ್ಯಾರ, ಎಸ್‌.ವ್ಹಿ. ಕುಲಕರ್ಣಿ ಎನ್‌.ಪಿ.ಕೊರಬು, ಸನ್ನಥ ಬಾಗಡಿ ಸೇರಿದಂತೆ ಬೋಧಕ ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.