ಪ.ಪಂ., ತಹಶೀಲ್ದಾರ ಕಛೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳ ಧಿಡೀರ ದಾಳಿ
Sudden raid by Lokayukta officials on P.P., Tahsildar's office
ಚಡಚಣ, 12 : ಪಟ್ಟಣದ ಪ.ಪಂ. ಹಾಗೂ ತಲಶೀಲ್ದಾರ ಕಛೇರಿ ಮೇಲೆ ಮಂಗಳವಾರ ಲೋಕಾಯುಕ್ತ ಅಧಿಕಾರಿಗಳು ಧಿಡೀರ ದಾಳಿ ನಡೆಸಿ, ವಿವಿಧ ಕಡತಗಳನ್ನು ಪರೀಶೀಲನೆ ಮಾಡಿದರು.
ಪ.ಪಂ. ಕಛೇರಿಯಲ್ಲಿ 2023-24, 2024-25ನೇ ಸಾಲಿನಲ್ಲಿ ಭೂಪರಿವರ್ತನೆ (ಎನ್.ಎ.) ಆಗಿರುವ ಜಮೀನುಗಳ ಎಲ್ಲ ದಾಖಲೆಗಳನ್ನು ಪರೀಶೀಲನೆ ನಡೆಸಿ, ಅದರ ಸಂಪೂರ್ಣ ಮಾಹಿತಿಯನ್ನು ಪಡೆದ ಲೋಕಾಯುಕ್ತ ಅಧಿಕಾರಿಗಳು ಹೆಚ್ಚಿನ ಮಾಹಿತಿಗಾಗಿ ಎಲ್ಲ ಭೂಪರಿವರ್ತನೆ ಕಡತಗಳ ನಕಲು ಪ್ರತಿಯನ್ನು ಪಡೆದರು. ಇತ್ತಿಚೆಗೆ ಪಟ್ಟಣದ ಹೊರವಲಯದಲ್ಲಿ ಭೂಪರಿವರ್ತನೆಯಾಗಿರುವ ಡೈಮಂಡ ಪಾರ್ಕ ಸಿಟಿ ಸರ್ವೆಯಲ್ಲಿ ಬರುವದಿಲ್ಲ ಮತ್ತು ಅದರಲ್ಲಿ ಈಗಾಗಲೇ 40ಅ ನಿವೇಶನಗಳ ಉತಾರಿಯನ್ನು ಪ.ಪಂ.ನವರು ನೀಡಿದ್ದಾರೆ ಎಂದು ಸಾರ್ವಜನಿಕರು ಆಕ್ಷೇಪಣೆ ಮಾಡಿದಾಗ ಲೋಕಾಯುಕ್ತ ಅಧಿಕಾರಿಗಳು ಇದರ ಕುರಿತು ಪ.ಪಂ.ನ ಮುಖ್ಯಾಧಿಕಾರಿಯನ್ನು ವಿಚಾರಿಸಿ, ಹೆಚ್ಚಿನ ಮಾಹಿತಿಗಾಗಿ ಈ ಭೂಪರಿವರ್ತನೆ ಕಡತದ ನಕಲು ಪ್ರತಿಯನ್ನು ನೀಡುವಂತೆ ಸೂಚಿಸಿದರು. ನಂತರ ಪ.ಪಂ.ನ ಎಲ್ಲ ವಾಹನಗಳ ಲಾಗ್‌ಬುಕ್ ಪರೀಶೀಲನೆ ನಡೆಸಿ, ಅದರ ಖರ್ಚು ವೆಚ್ಚಗಳ ಬಗ್ಗೆ ಸಂಪೂರ್ಣ ಮಾಹಿತಿ ಪರೀಶೀಲನೆ ನಡೆಸಿದರು.
ಪ.ಪಂ.ನಲ್ಲಿ ಒಟ್ಟು 8 ವಾಹನಗಳು ಇದ್ದು ಅವುಗಳಲ್ಲಿ ಕೇವಲ 4 ವಾಹನಗಳು ಮಾತ್ರ ಚಾಲನೆಯಲ್ಲಿವೆ ಎಂದು ಪ.ಪಂ. ಸಿಬ್ಬಂದಿ ಮಾಹಿತಿ ನೀಡಿದರು. ಪ.ಪಂ.ಗೆ ಸಂಬಂಧಿಸಿದ ಜೆ.ಸಿ.ಬಿ.ಯ ಇಂಧನದ ರಶೀದಿ, ಕಾಮಗಾರಿಗಳ ಬಗ್ಗೆ ಲಾಗ್‌ಬುಕ್‌ನಲ್ಲಿ ದಾಖಲಿಸದೇ ಇರುವದು ಕಂಡುಬಂತು. ನಂತರ 2 ವರ್ಷಗಳ ಸಂಪೂರ್ಣ ಲೆಕ್ಕಪರಿಶೋಧನಾ ವರದಿಯನ್ನು ಪರೀಶೀಲಿದ ಅವರು, ಲೆಕ್ಕಪರಿಶೋಧನಾ ಸಮಯದಲ್ಲಿ ಲಾಗ್‌ಬುಕ್‌ನಲ್ಲಿ ದಾಖಲಿಸದೇ ಇರದ ವಾಹನಗಳ ಇಂಧನ ಖರ್ಚುವೆಚ್ಚಗಳನ್ನು ಹೇಗೆ ಪರಿಶೋಧನೆ ಮಾಡಿ ಲೆಕ್ಕಪರಿಶೋಧನಾ ವರದಿಯನ್ನು ನೀಡಿದ್ದಾರೆ ಎಂದು ಪ್ರಶ್ನಿಸಿದ ಅವರು, ಎರಡು ವರ್ಷಗಳ ಅವಧಿಯಲ್ಲಿನ ವಾಹನ ಇಂಧನ ಸಂಪೂರ್ಣ ಮಾಹಿತಿಯನ್ನು ಲಾಗ್‌ಬುಕ್‌ನಲ್ಲಿ ದಾಖಲಿಸದೆ ಇರದ ಕಾರಣ ಅದರ ಸಂಪೂರ್ಣ ವಿವರಗಳನ್ನು ಬೆಳಗಾವಿಯ ಲೋಕಾಯುಕ್ತ ಕಛೇರಿಗೆ ಬಂದು ವರದಿ ನೀಡುವಂತೆ ಪ.ಪಂ. ಮುಖ್ಯಾಧಿಕಾರಿಗಳಿಗೆ ಹೇಳಿದರು.
ತಹಶೀಲ್ದಾರ ಕಛೇರಿ ಭೇಟಿ ನೀಡಿದ ಲೋಕಾಯುಕ್ತ ಅಧಿಕಾರಿಗಳು, ಆರ್.ಟಿ.ಎ. ಆರ್.ಟಿ.ಎಸ್. ಮ್ಯುಟೇಶನ್ ಕುರಿತ ದಾಖಲೆ, ವಾರಸಾ, ಭೋಜಾ, ಜಮೀನುಗಳ ವ್ಯಾಜ್ಯ ಕುರಿತಂತೆ ಹಾಗೂ ವಿವಿಧ ದಾಖಲೆಗಳನ್ನು ಪರೀಶೀಲಿದ ಅವರು, ಪಡಿತರ ಚೀಟಿ ರದ್ದಾದ ಕುರಿತು ವಿವರವನ್ನು ಪಡೆದರು. ಕಛೇರಿಯ ಕೆಲಸಗಳ ವಿಳಂಬಕ್ಕೆ ಕಾರಣ ಕೇಳಿದ ಅವರು ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಕಾರ್ಯನಿರ್ವಹಿಸಿ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಲೋಕಾಯುಕ್ತ ಪಿ.ಎಸ್.ಐ.ಗಳಾದ ಭೀಮನಗೌಡ ಬಿರಾದಾರ, ನಿರಂಜನ ಪಾಟೀಲ ಸೇರಿದಂತೆ ಬಾಗಲಕೋಟ, ಬೆಳಗಾವಿಯ ಸಿಬ್ಬಂದಿಗಳು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 