ಸೂಡಂಬಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ

ಸೂಡಂಬಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ Sudambi Cluster Level Talent Fountain Programme

 ಬ್ಯಾಡಗಿ 25: ವಿದ್ಯಾರ್ಥಿಗಳ ಕಲಿಕಾ ಪ್ರಗತಿಗೆ ಪೂರಕವಾದ ವಾತಾವರಣ ಸೃಷ್ಟಿಸುವ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಮಕ್ಕಳ ಭಾಗವಹಿಸುವಿಕೆ ಬಹಳ ಮುಖ್ಯ ಎಂದು ಮುಖಂಡ ಚಿಕ್ಕಣಜಿ ಗ್ರಾಂ ಪಂಚಾಯತಿ ಸದಸ್ಯ ಬಸವರಾಜ ಕೋಣನವರ ಹೇಳಿದರು. 

ತಾಲೂಕಿನ ಚಿಕ್ಕಣಜಿ ಗ್ರಾಮದ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಡಂಬಿ ಕ್ಲಸ್ಟರ್ ಮಾಡಿದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮುಖಂಡ ಮಂಜನಗೌಡ ಲಿಂಗನಗೌಡ ಮಾತನಾಡಿ ಪ್ರಾಥಮಿಕ ಶಾಲೆ ಶಿಕ್ಷಣ ನಮ್ಮ ಜೀವನದ 30 ವರ್ಷದ ಸಾಧನೆಗೆ ಮುನ್ನುಡಿ ಬರೆಯಲಿದೆ. ಮಕ್ಕಳು ಪಠ್ಯ ಪುಸ್ತಕಗಳಲ್ಲಿ ಬರುವ ಸಾಧಕರ ಜೀವನ ಅನುಕರಣೆ ಮಾಡಬೇಕು.ಸರ್ಕಾರಿ ಶಾಲೆ, ನಾವು ಬಡವರು ಎಂಬ ಕೀಳಿರಿಮೆ ಮಾಡಿಕೊಳ್ಳಬಾರದು.

ಗುರುಗಳ ದಿನ ನಿತ್ಯ ಪಾಠಗಳೇ ನಮ್ಮ ಮುಂದಿನ ಜೀವನದ ಮೆಟ್ಟಿಲು ಎಂದರು.ಶಿಕ್ಷಣದ ಜೊತೆಗೆ ಸಂಸ್ಕಾರವೂ ಕಲಿಸಬೇಕಾಗಿದೆ ಕಳೆದ 23 ವರ್ಷದಿಂದಲೂ ಪ್ರತಿಭಾ ಕಾರಂಜಿ ನಡೆಯುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಉತ್ತಮ ಪ್ರತಿಭಾವಂತ ಮಕ್ಕಳು ಉತ್ತಮ ಶಿಕ್ಷಕರಿದ್ದಾರೆ. ಮಗು ಪರಿಪೂರ್ಣವಾಗಲು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆ ಯೂ ಅಗತ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ ಜಿ ಕೋಟಿ ತಿಳಿಸಿದರು. 

ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ಬಸವರಾಜ ಬನ್ನಿಹಟ್ಟಿ ಗ್ರಾಂ ಪಂ ಸದಸ್ಯರಾದ ಬಸವರಾಜ ಕೋಣನವರ,ರೇಣಕವ್ವಾ ಓಲೆಕಾರ,ಎಂ ಎಸ್ ಪಾಟೀಲ, ಶೇಖನಗೌಡ ಪಾಟೀಲ, ರುದ್ರೇಶ್ ಕುಳವಳ್ಳಿ, ಮಂಜನಗೌಡ ಲಿಂಗನಗೌಡ್ರ, ಚಂದ್ರಶೇಖರ್ ಸಿಂಗಾಪುರ,ಹೋನಕೆರ​‍್ಪ ಬನ್ನಿಹಟ್ಟಿ ಹಾಗೂ ಶಾಲೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು