ಜಿಲ್ಲೆಯಾದ್ಯಂತ ಗಣತಿ ಕಾರ್ಯ ಸಂಪೂರ್ಣವಾಗಿ ಯಶಸ್ವಿಗೊಳಿಸಿSuccessfully complete census work across the district
Lokadrshan Daily
1/13/25, 5:49 AM ಪ್ರಕಟಿಸಲಾಗಿದೆ
ಹಾವೇರಿ:ಜ.08 ಏಳನೇ ಆಥರ್ಿಕ ಗಣತಿ ಕಾರ್ಯವನ್ನು ರಾಜ್ಯದಲ್ಲಿಯೇ ಮಾದರಿಯಾಗುವಂತೆ ಜಿಲ್ಲೆಯಾದ್ಯಂತ ಸಂಪೂರ್ಣವಾಗಿ ಯಶಸ್ವಿಗೊಳಿಸುವಂತೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಏಳನೇ ಆಥರ್ಿಕ ಗಣತಿ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಿಗದಿತ ಅವಧಿಯಲ್ಲಿ ಗುಣಮಟ್ಟದ ಅಂಕಿ ಅಂಶಗಳನ್ನು ಸಂಗ್ರಹಿಸಬೇಕು. ಏಳನೇ ಆಥರ್ಿಕ ಗಣತಿ ಡಿಜಟಲ್ ಇಂಡಿಯಾ ಕಾರ್ಯಕ್ರಮದಡಿ ಮೊಬೈಲ್ ಆಪ್ ಮೂಲಕ ಮಾಹಿತಿ ಸಂಗ್ರಹಿಸಲಾಗುತ್ತದೆ. ಈ ಗಣತಿ ಕಾರ್ಯವು ಜನವರಿ 2020 ರಿಂದ ಮಾಚರ್್ 2020 ರವರೆಗೆ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ನಡೆಯಲಿದೆ. ಜನಸಾಮಾನ್ಯರು ಸಹ ಸಾಮಾನ್ಯ ಸೇವಾ ಕೇಂದ್ರದಿಂದ ನೀಡಲಾದ ಗುರುತಿನ ಚೀಟಿಯೊಂದಿಗೆ ತಮ್ಮ ಮನೆ ಮತ್ತು ಉದ್ಯಮಗಳಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ಗಣತಿದಾರರಿಗೆ ಮತ್ತು ಮೇಲ್ವಿಚಾರಕರಿಗೆ ನೀಡಿ ಸಹಕರಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಗಣತಿಯು ಏಳನೇ ಆಥರ್ಿಕ ಗಣತಿಯಾಗಿದೆ. ಪ್ರತಿ ಐದು ವರ್ಷಗಳಿಗೊಮ್ಮೆ ಆಥರ್ಿಕ ಗಣತಿಯನ್ನು ನಡೆಸಲಾಗುತ್ತದೆ. ಗಣತಿಯಲ್ಲಿ ಸಂಗ್ರಹಿಸಲಾಗುವ ಮಾಹಿತಿಗಳು ಮುಂದಿನ ಐದು ವರ್ಷಗಳಲ್ಲಿ ಅಭಿವೃದ್ಧಿ ಯೋಜನೆಗಳನ್ನು ತಯಾರಿಸಲು ಹಾಗೂ ಹಾಲಿ ಇರುವ ಉದ್ಯಮಿಗಳ ಸ್ಥಿತಿಗತಿಗಳನ್ನು ಅವುಗಳಿಗೆ ಪ್ರೋತ್ಸಾಹ ನೀಡಲು ಮಾರುಕಟ್ಟೆ ವ್ಯವಸ್ಥೆ, ಆಥರ್ಿಕ ನೆರವು ಮುಂತಾದ ನಿಧರ್ಾರಗಳಿಗೆ ಆಥರ್ಿಕ ಗಣತಿಯಿಂದ ಸಂಗ್ರಹಿಸಿ ಅಂಕಿ-ಅಂಶಗಳು ನೆರವಾಗುತ್ತವೆ ಎಂದು ತಿಳಿಸಿದರು
ಗಣತಿದಾರರು ಕ್ಷೇತ್ರ ಕಾರ್ಯಚರಣೆ ಸಂದರ್ಭದಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸಾರ್ವಜನಿಕ ವಲಯ ಹಾಗೂ ಖಾಸಗಿ ವಲಯದಲ್ಲಿರುವ ಸಂಘಟಿತ ಹಾಗೂ ಅಸಂಘಟಿತ ವಿಭಾಗಗಳ ವಿವಿಧ ಆಥರ್ಿಕ ಚಟುವಟಿಕೆಗಳನ್ನು ಹೊಂದಿರುವ ಕೃಷಿ ಹಾಗೂ ಕೃಷಿಯೇತರ ಉದ್ಯಮಗಳ ಮಾಹಿತಿ ಸಂಗ್ರಹಿಸಿ ಪಟ್ಟಿಯನ್ನು ತಯಾರಿಸಬೇಕು. ಈ ಸಂದರ್ಭದಲ್ಲಿ ಸಾಮಾನ್ಯ ಸೇವಾ ಕೇಂದ್ರದ ಮುಖ್ಯಸ್ಥರು, ಗಣತಿದಾರರು ಮತ್ತು ಮೇಲ್ವಿಚಾರಕರಿಗೆ ಜನಸಾಮಾನ್ಯರೊಂದಿಗೆ ಸೌಹಾರ್ದಯುತವಾಗಿ, ಸಂವಹನ ನಡೆಸಿ ಅಪೇಕ್ಷಿತ ಮಾಹಿತಿಯನ್ನು ಪಡೆಯಲು ತಿಳಿಸಿದರು.
ಆಥರ್ಿಕ ಗಣತಿ ಕಾರ್ಯವನ್ನು ಪ್ರಪ್ರಥಮ ಬಾರಿಗೆ ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ಕೈಗೊಳ್ಳಲಾಗುತ್ತಿದೆ. ಆಥರ್ಿಕ ಗಣತಿಯಲ್ಲಿ ಗಣತಿದಾರರು ತಮಗೆ ನಿಧರ್ಿಷ್ಟಪಡಿಸಿದ, ಗಡಿಯೊಳಗೆ ಬರುವ ಪ್ರತಿ ಮನೆ, ಕಟ್ಟಡಗಳಿಗೂ ಭೇಟಿ ನೀಡುವುದರ ಮೂಲಕ ಅಲ್ಲಿ ನಡೆಯುವ ಉದ್ಯಮ ಅಥವಾ ವ್ಯಾಪಾರ ಘಟಕಗಳ ಮಾಲೀಕರ ಲಿಂಗವಾರು, ಸಾಮಾಜಿಕ ಪಂಗಡವಾರು ಮಾಹಿತಿಯನ್ನು ಉದ್ಯಮವಾರು ಕೆಲಸಗಾರರ ಮಾಹಿತಿ, ಉದ್ಯಮಿಗಾಗಿ ಹಣಕಾಸಿನ ಮೂಲ ಇತ್ಯಾದಿ ಮಾಹಿತಿಯನ್ನು ಕಲೆ ಹಾಕುತ್ತಾರೆ.
ಈ ಮಾಹಿತಿಯನ್ನು ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮತ್ತು ಯೋಜನೆಗಳನ್ನು ರೂಪಿಸಲು ಮಾತ್ರ ಉಪಯೋಗಿಸಲಾಗುತ್ತಿದ್ದು, ಸಂಗ್ರಹಿಸಿದ ಎಲ್ಲ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು ಎಂದು ಹೇಳಿದರು.
ಗಣತಿ ಸಂದರ್ಭದಲ್ಲಿ ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ, ನಗರ ಸ್ಥಳೀಯ ಸಂಸ್ಥೆಗಳ ವಿವಿಧ ಹಂತದ ಅಧಿಕಾರಿ ಹಾಗೂ ಸಿಬ್ಬಂದಿಗಳಿಂದ ಸೂಕ್ತ ಸಹಕಾರ ನೀಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ವಾಯ್ .ಎಚ್.ಮೀಶಿ, ಸಹಾಯಕ ಅಧಿಕಾರಿ ಜೆ.ಆರ್.ಪಾಟೀಲ, ಜಿಲ್ಲಾ ವ್ಯವಸ್ಥಾಪಕರಾದ ಕೃಷ್ಣಕಾಂತ ಆಡೂರ. ಮೋಹನ ಕಾಡಸಾಲಿ ಉಪಸ್ಥಿತರಿದ್ದರು