9 ವರ್ಷದ ಬುದ್ದಿಮಾಂದ್ಯ ಮಗುವಿಗೆ ಯಶಸ್ವೀ ಮೂಗಿನ ಚಿಕಿತ್ಸೆ: ಮೂಗಿನಿಂದ ಒಟ್ಟು ೧೪ ಸಾಮಾನುಗಳನ್ನು ಹೊರತೆಗೆದ ವೈದ್ಯರು

9 ವರ್ಷದ ಬುದ್ದಿಮಾಂದ್ಯ ಮಗುವಿಗೆ ಯಶಸ್ವೀ ಮೂಗಿನ ಚಿಕಿತ್ಸೆ:  ಮೂಗಿನಿಂದ ಒಟ್ಟು ೧೪ ಸಾಮಾನುಗಳನ್ನು ಹೊರತೆಗೆದ ವೈದ್ಯರು Successful nose surgery for 9-year-old mentally retarded child: Doctors remove a total of 14 objects

ಬೆಳಗಾವಿ  25: ಕಳೆದ ಒಂದು ತಿಂಗಳಿನಿಂದ ಸಾಮಾನ್ಯ ನೆಗಡಿ, ಮೂಗಿನಿಂದ ದುರ್ವಾಸನೆ , ಮೂಗಿನಲ್ಲಿ ಬಾವು ಹಾಗೂ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ 9 ವರ್ಷದ ಬುದ್ದಿಮಾಂದ್ಯ ಮಗುವಿಗೆ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಹೆಸರಾಂತ ಕಿವಿ, ಮೂಗು ಹಾಗೂ ಗಂಟಲು ತಜ್ಞ ಡಾ. ವಿವೇಕಾನಂದ ಕೊಳವೆಗರ ಅವರಿಂದ  ಚಿಕಿತ್ಸೆ ನೀಡಲಾಗಿದೆ. ಪೋಷಕರೊಂದಿಗೆ ಬಂದ ಬಾಲಕನು ಮೊದಲು ತೀರ್ವ ನೋವಿನಿಂದ ಬಳಲುತ್ತಿದ್ದನು. ಆತನ ಮೂಗಿನಲ್ಲಿ ದುರ್ಬೀನಿನ ಮೂಲಕ ನೋಡಲಾಗಿ ಕೆಲವು ಅಸಾಮಾನ್ಯ ವಸ್ತುಗಳು ಇರುವುದು ತಿಳಿದುಬಂದಿತು. ಇಂತಹ ಸಮಸ್ಯಾತ್ಮಕ ಪ್ರಕರಣಕ್ಕೆ ಸಮಾಧಾನ ಕಂಡುಕೊಂಡ ವೈದ್ಯರು ಬಾಲಕನಿಗೆ ಅರವಳಿಕೆ ನೀಡಿ ಮೂಗಿನಲ್ಲಿರುವ ವಸ್ತುಗಳನ್ನು ಹೊರತೆಗೆಯಲು ಯೋಜಿಸಿ ಚಿಕಿತ್ಸೆ ನೀಡಿದ್ದಾರೆ.  

ಆತನ ಮೂಗಿನಲ್ಲಿ ಸುಮಾರು 5 ರಿಂದ 8 ಸಣ್ಣ ಕಲ್ಲುಗಳು, 2 ಸಣ್ಣ ಪ್ಲಾಸ್ಟಿಕ್ ಆಟದ ಸಾಮಾನುಗಳು ಒಟ್ಟು 14 ವಸ್ತುಗಳನ್ನು ಹೊರತೆಗೆಯಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಡಾ. ವಿವೇಕಾನಂದ ಕೊಳ್ವೆಕರ “ ಮಕ್ಕಳು ಆಟವಾಡುವಾಗ ಅವರ ಕಡೆ ಗಮನ ಕೊಡುವದು ಪಾಲಕರ ಆದ್ಯ ಕರ್ತವ್ಯವಾಗಿದೆ. ಅದರಲ್ಲಿ ಇಂತಹ ವಿಶೇಷ ಮಕ್ಕಳ ಬಗ್ಗೆ ಅತೀಯಾದ ಕಾಳಜಿ ಅತೀ ಮಹತ್ವದ್ದಾಗಿದೆ. ಮಕ್ಕಳ ಕೈಯಲ್ಲಿ ಸಣ್ಣ ಸಣ್ಣ ಆಟದ ಸಾಮಾನುಗಳನ್ನು ಕೊಡದಿರಿ, ಒಂದು ವೇಳೆ ಆಟದ ಸಾಮಾನುಗಳು ಅವರ ಶರೀರದ ಯಾವುದೇ ಭಾಗದಲ್ಲಿ ಸಿಲುಕಿದರೆ ತಕ್ಷಣ ವೈದ್ಯರನು ಕಾಣಿರಿ”  ಎಂದರು. 

ಇಂತಹ ರೋಗಿಗೆ ಚಿಕಿತ್ಸೆ ನೀಡಿ ಆತನ ಆರೋಗ್ಯಯುತ ಜೀವನಕ್ಕೆ ಕಾರಣೀಭೂತ ರಾಗಲು ಕಾರಣರಾದ ವೈದ್ಯರಿಗೆ ಕಿವಿ, ಮೂಗು ಹಾಗೂ ಗಂಟಲು ವಿಭಾಗದ ಮುಖ್ಯಸ್ಥ ಡಾ. ಆರ್ ಎನ್ ಪಾಟೀಲ ಅವರು ಆಸ್ಪತ್ರೆಯ ವೈದ್ಯಕೀಯ ನೀರೀಕ್ಷಕರಾದ ಡಾ. ಆರ ಜಿ ನೆಲವಿಗಿ ಅವರು, ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹನಾಧಿಕಾರಿ   ಪ್ರಶಾಮತ ದೇಸಾಯಿ ಅವರು ವೈದ್ಯರಿಗೆ ಅಭಿನಂದಿಸಿದ್ದಾರೆ. ಯು ಎಸ್ ಎಮ್ ಕೆ ಎಲ ಇ ನಿರ್ದೇಶಕರಾದ ಡಾ. ಹೆಚ್ ಬಿ ರಾಜಶೇಖರ ಅವರು ಕೆ ಎಲ್ ಇ ಸಂಸ್ಥೆಯ ಕಾರ್ಯಾಧ್ಷರಾದ ಡಾ. ಪ್ರಬಾಕರ ಕೋರೆ ಅವರು ಶ್ಲಾಘಿಸಿದ್ದಾರೆ.