ವಿದ್ಯಾರ್ಥಿ ಜೀವನದಲ್ಲಿ ಶ್ರಮವಹಿಸಿ ಅಭ್ಯಾಸ ಮಾಡಿದರೆ ಯಶಸ್ಸು ನಿಶ್ಚಿತ: ವಿಶ್ವಾಸ ವೈದ್ಯ

Success is certain if you practice hard in student life: Vishwas Vaidya

ಯರಗಟ್ಟಿ 03:  ಆತ್ಮವಿಶ್ವಾಸ ವೃದ್ಧಿಸಿಕೊಂಡು ವಿವಿಧ ಕ್ಷೇತ್ರಗಳಲ್ಲಿ ಸಾಧಕರಾಗಿ ಹೊರ ಹೊಮ್ಮಬೇಕಾದರೆ  ವಿದ್ಯಾರ್ಥಿ ಜೀವನದಲ್ಲಿ ಶ್ರಮವಹಿಸಿ ಅಭ್ಯಾಸ ಮಾಡಬೇಕು ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು. 

ಪಟ್ಟಣದ ಸಿ. ಎಂ. ಮಾಮನಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ  ಬಿ.ಎ., ಬಿಕಾಂ. ಹಾಗೂ ಬಿ.ಎಸ್ಸಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಹಾಗೂ ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ಜೀವನದ ಪ್ರತಿಯೊಂದು ಸಂಗತಿಗಳು ಸಮಾಜ ಉಪಕೃತರಾಗಿ ಸ್ಮರಿಸುವಂತಿರ ಬೇಕೆಂದು ಹೇಳಿದರು.  

ತಂದೆ-ತಾಯಿಯ ಹಾಗೂ ಗುರುಗಳ ಋಣವನ್ನು ಎಂದಿಗೂ ತೀರಿಸಲಾಗದು; ತಾಯಿಗಾಗಿ ಊರು ಕಟ್ಟಿದ ಶ್ರೀ ಕೃಷ್ಣದೇವರಾಯ, ತಾಯಿಯ ಸ್ಮರಣೆಯಲ್ಲಿ ಸಾಮ್ರಾಜ್ಯ ಕಟ್ಟಿದ ಭಾರತದ ಅರಸರ ಪರಂಪರೆ ಸ್ಮರಣಾರ್ಹವಾದದ್ದು ತಂದೆ, ತಾಯಿ, ಗುರುಗಳ ಋಣವನ್ನು ತೀರಿಸಲು ಪ್ರಾಮಾಣಿಕ ಓದು, ಬರಹ, ಕಲಿಕೆಯನ್ನು ಅಳವಡಿಸಿ ಕೊಳ್ಳಬೇಕು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜು ಪ್ರಾಂಶುಪಾಲ ರಾಮನಗೌಡ ಮರಿಗೌಡರ ಅವರು ವ್ಯಕ್ತಿತ್ವ ವಿಕಸನಕ್ಕೆ ಕ್ರೀಡೆ ಹಾಗೂ ಪಠ್ಯೇತರ ಚಟುವಟಿಕೆಗಳು ಅವಶ್ಯಕವಾಗಿವೆ. ನಾಯಕತ್ವ ಗುಣ ಬೆಳಸಿಕೊಂಡು ವಿದ್ಯಾರ್ಥಿಗಳು ಸಮಾಜದ ಆಸ್ತಿಯಾಗ ಬೇಕು ಎಂದು ಹೇಳಿದರು. 

ಬೇವಿನಕೊಪ್ಪದ ಆನಂದಾಶ್ರಮದ ಪ.ಪೂ. ವಿಜಯಾನಂದ ಸ್ವಾಮಿಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸಿಡಿಸಿ ಸದಸ್ಯರಾದ ಎಸ್‌. ಎಸ್‌. ಕುರುಬಗಟ್ಟಿಮಠ, ಮಲ್ಲಪ್ಪ ಪೂಜೇರ, ಇಸಾಕ್ ಅಂಬ್ರಾಮ್, ಬಸವರಾಜ ಹಸಬಿ, ಹಣಮಂತ ರಂಗಾಪೂರ, ಸನ್ನಿಂಗಪ್ಪ ಮೇಟಿ, ಫಾರೂಕ್ ಅತ್ತಾರ, ರಾಘವೇಂದ್ರ ಗಿಡ್ಡಮಲ್ಲಪ್ಪಗೋಳ, ರಮೇಶ ಕೋಟೂರ, ಮುತ್ತೆಪ್ಪ ದಳವಾಯಿ, ಶಾನೂರಬಿ ದಿಲಾವರನಾಯ್ಕ, ಮಾಡಮಗೇರಿ ಗ್ರಾ. ಪಂ. ಅಧ್ಯಕ್ಷ ಲಕ್ಕಪ್ಪ ಸನ್ನಿಂಗನ್ನವರ, ಮಾಜಿ ಪುರಸಭೆ ಅಧ್ಯಕ್ಷ ಶಿವಾನಂದ ಪಟ್ಟಣಶೆಟ್ಟಿ, ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದ್ದಬಸನವರ, ಕೆಎಂಎಫ್ ನಿರ್ದೇಶಕ ಶಂಕರ ಇಟ್ನಾಳ, ಶಿವಾನಂದ ಕರಿಗೋಣ್ಣವರ, ನಿಖಿಲ ಪಾಟೀಲ, ಸಲಿಂಬೇಗ ಜಮಾದಾರ, ಪ್ರಕಾಶ ವಾಲಿ, ಸುರೇಶ ಭಜಂತ್ರಿ ಉಪಸ್ಥಿತರಿದ್ದರು. ಶಿದ್ಲಿಂಗಪ್ಪ ಎಸ್‌.ಜಿ. ನಿರೂಪಿಸಿದರು, ಡಾ. ರಾಜಶೇಖರ ಬಿರಾದಾರ ಅತಿಥಿಗಳನ್ನು ಪರಿಚಯಿಸಿ, ಸ್ವಾಗತಿಸಿದರು. ಚಿಕ್ಕಹನುಮಯ್ಯ ವಂದಿಸಿದರು.  

ಡಾ. ಸುನಂದಾ ಮಾದರ, ಮಹಾಂತೇಶ ತಂಬಾಕೆ, ವಿಜಯಲಕ್ಷ್ಮೀ ಬದ್ದಿ, ಶಂಕರ​‍್ಪ ಲಗಳಿ, ರಾಮಚಂದ್ರ ಹೆಗಡೆ, ಮಹಂತೇಶ್ ಕೆ.ವೈ. ಸೇರಿದಂತೆ ಕಾಲೇಜಿನ ಬೋದಕ-ಭೋದಕೇತರ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳು ಹಾಜರಿದ್ದರು.