ಸಾಧಿಸುವ ಛಲವಿದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ: ಟಿ.ಎಸ್‌. ವಂಟಗೂಡಿ

ಸಾಧಿಸುವ ಛಲವಿದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ: ಟಿ.ಎಸ್‌. ವಂಟಗೂಡಿ  Success is assured if one has the determination to achieve: T.S. Vantagudi


ಪಾಲಬಾವಿ 04 : ಹಿಡಕಲ್ಲ ಗ್ರಾಮದ ಮಹಾದೇವ ಕರೆಪ್ಪ ಗಲಗಲಿ ಅವರು ಗ್ರಾಮದಿಂದ ಅಯೋಧ್ಯೆಗೆ 43 ದಿನಗಳ ಕಾಲ ಸುಮಾರು 1,600 ಕಿ.ಮೀ ಕಾಲ್ನಡಿಗೆಯಲ್ಲಿ ತೆರಳಿ ಶ್ರೀರಾಮನ ದರ್ಶನ ಪಡೆದು ಮರಳಿದ ಹಿನ್ನೆಲೆಯಲ್ಲಿ ಅವರನ್ನು ಗುರುವಾರ ಸಂಜೆ ಗೌರವಿಸಿ ಸನ್ಮಾನಿಸಲಾಯಿತು. ಹಿಡಕಲ್ಲ ಗ್ರಾಮದ ಕರೆಪ್ಪ ಗಲಗಲಿ ಅವರ ತೋಟದ ಮಹಾಮನೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಹಾಗೂ ಸಾಹಿತಿ ಟಿ.ಎಸ್‌. ವಂಟಗೂಡಿ ಮಾತನಾಡಿ, ಸಾಧನೆ ಸಾಧಕನ ಸ್ವತ್ತು, ಸೋಮಾರಿಯ ಸ್ವತ್ತಲ್ಲ. ಸಾಧಿಸುವ ಛಲವಿದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬುದನ್ನು ಮಹಾದೇವ ಗಲಗಲಿ ತೋರಿಸಿಕೊಟ್ಟಿದ್ದಾರೆ.

ಅವರ ಈ ಸಾಧನೆ ಶ್ಲಾಘನೀಯ, ಎಂದರು. ಪ್ರಧಾನಗುರು ಭೀಮರಾವ್ ಘಂಟಿ ಮಾತನಾಡಿ, ಮಹಾದೇವ ಗಲಗಲಿ ಅವರು ಕಾಲ್ನಡಿಗೆಯಲ್ಲಿ ಅಯೋಧ್ಯೆಗೆ ತೆರಳಿ ಶ್ರೀರಾಮನ ದರ್ಶನ ಪಡೆದು ತಾಯ್ನಾಡಿಗೆ ಮರಳಿರುವುದು ಭಕ್ತಿಯ ಶಕ್ತಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು. ಪ್ರಾಚಾರ್ಯ ಲಕ್ಷ್ಮಣ ಪಾಟೀಲ, ಚುಟುಕು ಕವಿ ಸಾಹಿತಿ ಧರ್ಮರಾಜ ಕೋಳಿ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಧಾನಗುರು ಬೀರ​‍್ಪ ತಡಸಲೂರ, ಸಿ.ಎಸ್‌. ಮಾಂಗ, ದೈಹಿಕ ಶಿಕ್ಷಕ ಮಹಾದೇವ ಆಂಟಿನ, ಎಂ.ಐ. ಪಾಟೀಲ, ಎಂ.ಪಿ. ಕಂಟಿಕಾರ, ಕರೆಪ್ಪ ಗಲಗಲಿ, ಲಕ್ಷ್ಮಿ ಗಲಗಲಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಶಿಕ್ಷಕ ಎಸ್‌.ಡಿ. ರಾಯಮಾನೆ ಸ್ವಾಗತಿಸಿ ನಿರೂಪಿಸಿದರು. ಸದಾಶಿವ ಬಾಗಿ ವಂದಿಸಿದರು.