ಕರ್ನಾಟಕ ಸಂಘ ಕತಾರ್ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಹೆಬ್ಬಾಗಿಲು ಅಧಿಕಾರ ಸ್ವೀಕಾರ
Subrahmanya Hebbagailu assumes office as Karnataka Sangha Qatar President
ದೋಹಾ, ಕತಾರ್ 25: ಕರ್ನಾಟಕ ಸಂಘ ಕತಾರ್‌ನ 2026ಹಿ2028 ಅವಧಿಗೆ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಹೆಬ್ಬಾಗಿಲು ಅಧಿಕಾರ ಸ್ವೀಕರಿಸಿದ್ದು, ಕತಾರ್‌ನ ಕನ್ನಡ ಸಮುದಾಯದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ.
ಅವರು ಈ ಜವಾಬ್ದಾರಿಯನ್ನು ಅತ್ಯಂತ ನಮ್ರತೆ ಮತ್ತು ಬದ್ಧತೆಯಿಂದ ಸ್ವೀಕರಿಸಿರುವುದಾಗಿ ತಿಳಿಸಿ, ಸಮುದಾಯಕ್ಕೆ ಸೇವೆ ಸಲ್ಲಿಸುವ ಅವಕಾಶ ದೊರೆತಿರುವುದು ಗೌರವದ ಸಂಗತಿಯಾಗಿದೆ ಎಂದು ಹೇಳಿದರು.ನಿಕಟ ಪೂರ್ವ ಅಧ್ಯಕ್ಷರಾದ ರವಿ ಶೆಟ್ಟಿ ಹಾಗೂ ಆಡಳಿತ ಸಮಿತಿ (2024ಹಿ2026) ಅವರ ಸೇವೆ ಮತ್ತು ಕೊಡುಗೆಗಳನ್ನು ಅವರು ಕೃತಜ್ಞತೆಯಿಂದ ಸ್ಮರಿಸಿದರು. ಅವರ ಶ್ರಮದಿಂದ ಸಂಘದ ಅಭಿವೃದ್ದಿಗೆ ಬಲವಾದ ಅಡಿಪಾಯ ನಿರ್ಮಾಣವಾಗಿದೆ ಎಂದು ಹೇಳಿದರು.
ಸಂಘದ ಎಲ್ಲಾ ಪೂರ್ವ ಅಧ್ಯಕ್ಷರಾದ ಸತೀಶ್ ದೇಶಪಾಂಡೆ, ನಾಗರಾಜ್, ಪ್ರಕಾಶ್ ಬಾಬು, ಕೆ. ಪ್ರಭಾಕರ್, ಅರವಿಂದ ಪಾಟೀಲ, ಅರುಣ್ ಕುಮಾರ್ ಕೆ.ಎಂ., ವಿ.ಎಸ್. ಮನ್ನಂಗಿ, ದೀಪಕ್ ಶೆಟ್ಟಿ, ಎಚ್.ಕೆ. ಮಧು, ವೆಂಕಟ್ ರಾವ್, ದಿವಂಗತ ಶ್ರೀ ಮೈರ್ಾಡಿ ನಾಗೇಶ್ ರಾವ್, ಸಂಜಯ ಕುದರಿ, ಮಹೇಶ್ ಗೌಡ ಹಾಗೂ ರವಿ ಶೆಟ್ಟಿ ಅವರ ಸೇವೆಯನ್ನು ಅವರು ಸ್ಮರಿಸಿ ಪ್ರಶಂಸಿಸಿದರು.
ಸಂಘದ ಎಲ್ಲಾ ಸಮಿತಿ ಸದಸ್ಯರು, ಸಮುದಾಯ ಮುಖಂಡರು ಮತ್ತು ಸದಸ್ಯರ ನಿರಂತರ ಸೇವೆ ಹಾಗೂ ಸಮರೆ್ಣಯನ್ನು ಅವರು ಶ್ಲಾಘಿಸಿದರು.ಮುಂದಿನ ಅವಧಿಯಲ್ಲಿ ಕನ್ನಡ ಸಮುದಾಯದ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವುದು, ಸಂಸ್ಕೃತಿಯನ್ನು ಉತ್ತೇಜಿಸುವುದು ಮತ್ತು ಎಲ್ಲರಿಗೂ ಅರ್ಥಪೂರ್ಣ ಅವಕಾಶಗಳನ್ನು ಸೃಷ್ಟಿಸುವುದು ತಮ್ಮ ಗುರಿಯಾಗಿದೆ ಎಂದು ಅವರು ತಿಳಿಸಿದರು.
“ಒಗ್ಗಟ್ಟಿನಿಂದ ಮತ್ತು ಉದ್ದೇಶಪೂರ್ವಕವಾಗಿ ನಾವು ಮುಂದೆ ಸಾಗಿದರೆ, ಇನ್ನಷ್ಟು ಮೈಲಿಗಲ್ಲುಗಳನ್ನು ಸಾಧಿಸಬಹುದು,” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.ಕರ್ನಾಟಕ ಸಂಘ ಕತಾರ್ ಭಾರತೀಯ ರಾಯಭಾರ ಕಚೇರಿಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಭಾರತೀಯ ಸಾಂಸ್ಕೃತಿಕ ಕೇಂದ್ರದ ಸಹಾಯಕ ಸಂಸ್ಥೆಯಾಗಿದ್ದು, ಕತಾರ್‌ನ ಕನ್ನಡಿಗರ ಪ್ರಮುಖ ವೇದಿಕೆಯಾಗಿದೆ.
ಮೈದುಂಬಿ ಹರಿಯುತ್ತಿರುವ ಘಟಪ್ರಭಾ ನದಿ: ಭರ್ತಿ ಹಂತದಲ್ಲಿ ಹಿಡಕಲ್ ಜಲಾಶಯ
ಎಚ್ಚರ ಅನಾಹುತಕ್ಕೆ ಕೈ ಮಾಡಿ ಕರೆಯುತ್ತಿದೆ: ರಸ್ತೆಯ ಭೂಗತ ವಿದ್ಯುತ್ ತಂತಿಯಿಂದ ಹೊರಬರುತ್ತಿದೆ ಬೆಂಕಿ ಕಿಡಿ-ಹೊಗೆ
ಹುಕ್ಕೇರಿ ತಾಲೂಕಿನ ಅತಿ ಹಿರಿಯ 107 ವಯಸ್ಸಿನ ನಾಗರಿಕ ನಿಜಪ್ಪ ಜಾಡರ್ ವಿಧಿವಶ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ 