ಸಾಹಿತ್ಯ ಅಧ್ಯಯನದಿಂದ ಜ್ಞಾನದ ಸಾಕ್ಷಾತ್ಕಾರವಾಗುತ್ತದೆ: ಪ್ರೊ. ಎಸ್.ಜಿ. ಡೊಳ್ಳೆಗೌಡರ್
Studying literature leads to the realization of knowledge: Prof. S.G. Dollegouder
ಲೋಕದರ್ಶನ ವರದಿ
ಸಾಹಿತ್ಯ ಅಧ್ಯಯನದಿಂದ ಜ್ಞಾನದ ಸಾಕ್ಷಾತ್ಕಾರವಾಗುತ್ತದೆ: ಪ್ರೊ. ಎಸ್.ಜಿ. ಡೊಳ್ಳೆಗೌಡರ್
ಕೊಪ್ಪಳ 18: ಪ್ರಸ್ತುತ ದಿನಗಳಲ್ಲಿ ಲೇಖಕರ ಜೊತೆಗೆ ಮಿಮರ್ಶಕರ ಅಗತ್ಯವಿದೆ. ಸಾಹಿತ್ಯವನ್ನು ಮೌಲ್ಯಮಾಪನ ಮಾಡುವ ಕಾರ್ಯ ನಿರಂತರವಾಗಿ ಸಾಬೇಕು. ಇಂತಹ ವಿಚಾರ ಸಂಕಿರಣಗಳು ಸಾಹಿತ್ಯವನ್ನು ಚರ್ಚಿಸಿ ಮೌಲ್ಯಮಾಪನ ಮಾಡಿ, ಸಾಹಿತ್ಯ ಸತ್ವ ಹಾಗೂ ಗಟ್ಟಿ ವಿಚಾರಗಳನ್ನು ಸಾಹಿತ್ಯ ಆಸಕ್ತರಿಗೆ ತಲುಪಿಸಿದಾಗ ವಿಚಾರ ಸಂಕಿರಣದ ಉದ್ದೇಶ ಸಾಕಾಗೊಳ್ಳುತ್ತವೆ. ನೂರಾರು ವರ್ಷಗಳ ಹಿಂದೆ ಜನಿಸಿದ ಕಾರಾಂತರು ಇಂದಿಗೂ ಪ್ರಸ್ತುತವಾಗಿದ್ದಾರೆ ಎಂದರೆ ಅವರ ವಿಚಾರಗಳೆ ಕಾರಣ ಎಂದು ಕಲಬುರಗಿಯ ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಎಸ್.ಜಿ. ಡೊಳ್ಳೆಗೌಡರ್ ಹೇಳಿದರು. ನಗರದ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದಲ್ಲಿ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ. ಶಿವರಾಮ ಕಾರಂತ ಟ್ರಸ್ಟ್, ಉಡುಪಿ, ಜಿಲ್ಲೆ. ಹಾಗೂ ಮಹಾವಿದ್ಯಾಲಯದ, ಕನ್ನಡ ವಿಭಾಗ ಇವರ ಸಹಯೋಗದೊಂದಿಗೆ ಆಂತರಿಕ ಗುಣಮಟ್ಟ ಭರವಸೆ ಕೋಶದ ಅಡಿಯಲ್ಲಿ ದಿನಾಂಕ 17.10.2025ರಂದು ಅಯೋಜಿಸಿದ ‘ಡಾ. ಶಿವರಾಮ ಕಾರಂತರ ಸಾಹಿತ್ಯ ಮತ್ತು ವೈಚಾರಿಕತೆ’ ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉಧ್ಘಾಟಿಸಿ ಮಾತನಾಡಿದ ಅವರು ಸಾಹಿತ್ಯ ಒದುವದೆಂದರೆ ಬದುಕನ್ನು ತಿಳಿದುಕೊಳ್ಳುವುದು. ಸಾಹಿತ್ಯ ಅಧ್ಯಯನದಿಂದ ಜ್ಞಾನದ ಸಾಕ್ಷಾತ್ಕಾರವಾಗುತ್ತದೆ ಅಂತಹ ಬದುಕಿನ ಜ್ಞಾನ ಮತ್ತು ಅನುಭವವನ್ನು ಕಟ್ಟಿಕೊಟ್ಟವರು ಡಾ. ಶಿವರಾಮ ಕಾರಾಮತರಾಗಿದ್ದಾರೆ. ತಾವು ಸಾಹಿತ್ಯದ ಜೊತೆಗೆ ಕೌಶಲ್ಯಾಧಾರಿತ ಜ್ಞಾನವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ನಂತರ ಆಶಯ ನುಡಿಗಳನ್ನಾಡಿದ ಡಾ. ಶಿವರಾಮ ಕಾರಂತ ಟ್ರಸ್ಟ್‌ನ ಅಧ್ಯಕ್ಷರಾದ ಡಾ. ಗಣನಾಥ ಶೆಟ್ಟಿ ಎಕ್ಕಾರು ಮಾತನಾಡಿ ತಾವು ಬೆಳೆಯಲು ಕಾಲದ ಮಹತ್ವವನ್ನು ನಾವು ಅರ್ಥಮಾಡಿಕೊಳ್ಳಬೇಕು. ಸಾಹಿತ್ಯದಲ್ಲಿ ಬಹುಶಿಸ್ತಿನ ಅಧ್ಯಯನದ ಅಗತ್ಯವಾಗಿದೆ. ಕಾರಾಂತರ ಸಾಹಿತ್ಯ ಸಾಹಿತ್ಯದ ಒಳನೋಟಗಳನ್ನು ತಾವು ಅಧ್ಯಯನಗೈಯ್ಯಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಗವಿಸಿದ್ಧೇಶ್ವರ ವಿದ್ಯಾವರ್ಧಕ ಟ್ರಸ್ಟ್‌ನ ಕಾರ್ಯದರ್ಶಿಗಳಾದ ಡಾ. ಆರ್. ಮರೇಗೌಡ ಅವರು ಮಾತನಾಡುತ್ತ ಶಿವರಾಮ ಕಾರಾಂತರು ಜ್ಞಾನದ ಗಣಿಯಾಗಿದ್ದರು. ಹೆಚ್ಚಿನ ಜ್ಞಾನವನ್ನು ಪಡೆದಾಗ ಪರಿಪೂರ್ಣದೆಡೆಗೆ ನಾವು ಸಾಗಲು ಸಾಧ್ಯ. ಲೋಕದ ಅಪೂರ್ವ ಜ್ಞಾನ ಅವರ ಸಾಹಿತ್ಯದಲ್ಲಿ ಅಡಗಿದೆ ತಾವು ಕಾರಂತರ ಅಧ್ಯಯನ ಮಾಡಬೇಕು. ಜೊತೆಗೆ ಪ್ರಸ್ತುತ ಅಗತ್ಯವಿರುವ ತಂತ್ರಜ್ಞಾನ ಮತ್ತು ಕೌಶಲ್ಯ ಬೆಳೆಸಿಕೊಳ್ಳಬೇಕು ಅಂದಾಗ ಬದುಕು ಕಟ್ಟಿಕೊಳ್ಳಲು ಅನುಕೂಲವಾಗುತ್ತದೆ ಎಂದರು. ಡಾ. ಶಿರಾಮ ಕಾರಾಂತ ಟ್ರಸ್ಟ ಸದಸ್ಯ ಕಾರ್ಯದರ್ಶಿಗಳಾದ ಶ್ರೀಮತಿ. ಪೂರ್ಣಿಮಾ, ಕೊಪ್ಪಳದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಕರ್ಣಕುಮಾರ ಅವರು ಮಾತನಾಡಿದರು.
ನಂತರ 11.30 ರಿಂದ 1.45.ರವರೆಗೆ ಎರಡು ಗೋುಷ್ಠಿಗಳು ಜರಗುವವು ಗೋಷ್ಠಿ ಒಂದರಲ್ಲಿ ‘ಡಾ. ಶಿವರಾಮ ಕಾರಂತರ ಸಾಹಿತ್ಯದಲ್ಲಿ ಪರಿಸರ ಮತ್ತು ವೈಚಾರಿಕ ಪ್ರಜ್ಞೆ’ ಕರಿತು ದಾವಣಗೆರೆ ವಿಶ್ವವಿದ್ಯಾಲಯದ ಸಹಾಯಕ ಪಾಧ್ಯಾಪಕರಾದ ಡಾ. ಮಹಾಂತೇಶ ಪಾಟೀಲ ವಿಷಯ ಮಂಡಿಸಿದರು. ಗೋಷ್ಠಿಯ ಅಧ್ಯಕ್ಷತೆಯನ್ನು ಕುಂದಾಪುರ ಡಾ. ಬಿ.ಬಿ ಹಗ್ಡೆ ಪ್ರಥಮದರ್ಜೆ ಕಾಲೇಜಿನ ಉಪಪ್ರಾಚಾರ್ಯ ಡಾ. ಚೇತನ್ ಶಟ್ಟಿ ಕೋವಾಡಿ ವಹಿಸಿಕೊಂಡಿದ್ದರು.
ಗೊಷ್ಠಿ ಎರಡರಲ್ಲಿ ‘ಡಾ. ಶಿವರಾಮ ಕಾರಂತರ ಕಾದಂಬರಿಗಳು : ಮಹಿಳೆ-ವೈಚಾರಿಕತೆ’ ಕುರಿತು ಕೇರಳ ಕಾಸರಗೂಡಿನ ಕೇಂದ್ರಿಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ಗೊವಿಂದರಾಜು ಕಲ್ಲೂರ ಅವರು ವಿಷಯ ಮಂಡಿಸಿದರು. ಗೋಷ್ಠಿಯ ಅಧ್ಯಕ್ಷತೆಯನ್ನು ಹಿರೇಕೆರೂರ ಬಿ.ಆರ್.ಟಿ ಕಲಾ,ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ನಾನಾಸಾಹೇಬ ಹಚ್ಚಡದ ಅವರು ವಹಿಸಿಕೊಂಡಿದ್ದರು.
ಪ್ರಥಮದರ್ಜೆ ಕಾಲೇಜಿನ ಪ್ರಾಚಾರ್ಯ ಬಸಂತಪ್ಪ ಹೊಸಳ್ಳಿ, ಉಡುಪಿಯ ಡಾ. ಶಿರಾಮ ಕಾರಂತ ಟ್ರಸ್ಟನ ಸದಸ್ಯರಾದ ಸಂತೋಷ ನಾಯಕ ಪಟ್ಲಾ, ಪ್ರೊ. ಶರಣಬಸಪ್ಪ ಬಿಳಿಯಲೆ, ಡಾ. ದಯಾನಂದ ಸಾಳುಂಕೆ, ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಚನ್ನಬಸವ, ಆಯ್‌ಕ್ಯೂಎಸಿ ಸಂಯೋಜಕ ಡಾ. ಅರುಣಕುಮಾರ, ಉಪಪ್ರಾಚಾರ್ಯ ಡಾ. ಕರಿಬಸವೇಶ್ವರ, ಪ್ರಾಧ್ಯಾಪಕರಾದ ಡಾ. ಸುಂದರ ಮೇಟಿ, ಡಾ. ಪ್ರಶಾಂತ ಕೊಂಕಲ್, ಡಾ. ಸಿದ್ಧಲಿಂಗಪ್ಪ ಕೊಟ್ನೆಕಲ್, ಡಾ. ಯಮನೂರ್ಪ, ಲಲಿತಾ ಕಿನ್ನಾಳ, ವಿನೋದ ಮುದಿಬಸನನಗೌಡರ, ಮಹೇಶ ಬಿರಾದಾರ, ಶರಣಪ್ಪ ಚೌಹಾಣ್, ಡಾ. ಶಿವಪ, ಶರಣಪ್ಪ ಗುಳಗುಳಿ, ಮಂಜುನಾಥ ಹಿರೇಮಠ, ವೆಂಕಟೇಶ ಬೋವಿ, ಸ್ವಾತಿ ಹಿರೇಮಠ, ಪ್ರತಿಭಾ ಚಿತ್ರಗಾರ, ಸಂಗೀತಾ ಮಸ್ಕಿ, ಪ್ರೀಯ ಪತ್ತಾರ, ಶ್ವೇತಾ ಗಿರಡ್ಡಿ, ಮಹಾಮತೇಶ ತವಳಗೇರಿ ಉಪಸ್ಥಿತರಿದ್ದರು.
ವಿಚಾರ ಸಂಕಿರಣದ ಸಂಘಟಕ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥ ಡಾ. ನಾಗರಾಜ ದಂಡೋತಿ ಪ್ರಾಸ್ತಾವಿಕವಾಗಿ ಮಾತನಡಿದರು, ಡಾ. ಸುಮಲತಾ ಬಿ.ಎಂ ನಿರೂಪಸಿದರು, ಮಂಜುಶ್ರೀ ಪ್ರಾರ್ಥಿಸಿದರು, ಡಾ. ನಾಗೇಶ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 