ನೆಟ್ ಪರೀಕ್ಷೆ ಉತ್ತೀರ್ಣಕ್ಕೆ ಅಧ್ಯಯನ ಅವಶ್ಯ: ಹುಡೇದ
Studying is essential to pass NET exam: Hudaya
ಲೋಕದರ್ಶನ ವರದಿ
ಬಾಗಲಕೋಟೆ 25: ಸ್ಪರ್ಧಾತ್ಮಕ ಯುಗದಲ್ಲಿ ಉನ್ನತ ಶಿಕ್ಷಣ ಮತ್ತು ಉತ್ತಮ ಉದ್ಯೋಗ ಪಡೆಯಲು ಯುಜಿಸಿ ನೆಟ್ ಪರೀಕ್ಷೆಯು ಮಹತ್ವದ ಹೆಜ್ಜೆಯಾಗಿದೆೆ. ಸರಿಯಾದ ಯೋಜನೆ ಮತ್ತು ಪರಿಶ್ರಮದಿಂದ ಉತ್ತೀರ್ಣರಾಗುವುದು ಸುಲಭ ಎಂದು ರಾಣಿಚನ್ನಮ್ಮ ವಿವಿಯ ಜೆ.ಆರ್.ಎಫ್. ರಿಸರ್ಚ್ ಸ್ಕಾಲರ್ ದಯಾನಂದ ಹುಡೇದ ಹೇಳಿದರು.
ನಗರದ ಬಿವಿವಿ ಸಂಘದ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಎಮ್.ಕಾಂ. ಪಿಜಿ ವಿಭಾಗ ಮತ್ತು ಕರೀಯರ್ ಗೈಡೆನ್ಸ್ ಪ್ಲೇಸಮೆಂಟ್ ಸೆಲ್ ವತಿಯಿಂದ ಹಮ್ಮಿಕೊಂಡಿದ್ದ ಯುಜಿಸಿ ನೆಟ್ ಮತ್ತು ಕೆ - ಸೆಟ್ ಸಕ್ಸಸ್ ಬ್ಲೂ-ಪ್ರಿಂಟ್ ಒಂದು ದಿನದ ಕಾರ್ಯಾಗಾರವನ್ನು ಸಸಿಗೆ ನೀರು ಎರೆಯುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಇನ್ನೊಬ್ಬರಿಗೆ ಹೋಲಿಕೆ ಮಾಡಿಕೊಳ್ಳದೆ ಸ್ವಂತ ವಿಚಾರಧಾರೆಗಳನ್ನು ರೂಪಿಸಿಕೊಂಡರೆ ಖುಷಿಯಾದ ಮತ್ತು ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಸಾಧ್ಯ. ವಿದ್ಯಾರ್ಥಿಯ ಜೀವನ ತುಂಬಾ ಮುಖ್ಯವಾಗಿದ್ದು ಸ್ಪಷ್ಟವಾದ ಗುರಿ, ದೃಢನಿಶ್ಚಯ ಇಟ್ಟುಕೊಂಡರೆ ಪ್ರಯತ್ನಗಳಿಗೆ ದಿಕ್ಕು ಸಿಗುತ್ತದೆ. ಎಲ್ಲರ ಸಲಹೆ ಪಡೆದುಕೊಂಡು ಆಲೋಚನೆಗಳೊಂದಿಗೆ ನಮ್ಮ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಎಂದರು.
ಓದಿನ ಜೊತೆಗೆ ಮರುಪಠಣ ಮಾಡುವುದರಿಂದ ದೃಢವಾಗಿ ನೆನಪಿಮಲ್ಲಿ ಇಟ್ಟುಕೊಳ್ಳಲು ಸಹಾಯಕವಾಗುತ್ತದೆ. ಸಮಯ ನಿರ್ವಹಣೆ ಬಹಳ ಮುಖ್ಯ ಪ್ರತಿದಿನವೂ ಒಂದು ನಿಶ್ಚಿತ ಸಮಯವನ್ನು ಓದಿಗೆ ಮೀಸಲಿಡಬೇಕು. ಆತ್ಮವಿಶ್ವಾಸ ಅಗತ್ಯವಾಗಿದ್ದು ಎಷ್ಟೇ ಅಡಚಣೆ ಬಂದರೂ ಹಿಂಜರಿಯದೆ ಗುರಿಯತ್ತ ಹೆಜ್ಜೆ ಹಾಕಿ ಎಂದರು.
ಪ್ರಾಚಾರ್ಯ ಡಾ. ಜಗನ್ನಾಥ ಚವಾಣ್ ಮಾತನಾಡಿ ವ್ಯಕ್ತಿಯ ರೂಪಕ್ಕಿಂತ ಅವರ ವ್ಯಕ್ತಿತ್ವ ದೊಡ್ಡದು. ವಿದ್ಯಾ ದೇವತೆಯು ಎಲ್ಲರಲ್ಲೂ ನೆಲಸಿದ್ದು ಅದನ್ನು ಅರ್ಥೈಸಿಕೊಂಡು ಅಧ್ಯಯನದಲ್ಲಿ ತೊಡಗಬೇಕು. ವಿದ್ಯಾರ್ಥಿ ಜೀವನ ಕಲಿಕೆಯ ಪ್ರಮುಖ ಘಟ್ಟವಾಗಿದ್ದು ಹಿಂಜರಿಯದೇ ಕೇಳಿ ತಿಳಿದುಕೊಳ್ಳಬೇಕು ಎಂದರು.
ಪಿಜಿ ವಿಭಾಗದ ಮುಖ್ಯಸ್ಥ ಕೆ. ಜೆ. ಮಾಳಜಿ, ಐಕ್ಯೂಎಸಿ ಸಂಯೋಜಕ ಜಿ.ಎಮ್. ನಾವದಗಿ, ಆರ್. ಎಮ್. ತ್ಯಾಪಿ, ಎಮ್.ಎಮ್. ಶಿವಂಗಿ, ಎಸ್.ಎಸ್. ಚಬ್ಬಿ, ಟಿ.ಪಿ. ದರ್ಬಾರ್ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 