ಹಿರೇಬೆಣಕಲ್ ನೆಲೆಯ ಪ್ರಾಮುಖ್ಯತೆಯನ್ನು ಹೆಚ್ಚಿಸಲು ಬ್ಲಾಗರ್ಗಳ, ಇನ್ಫ್ಲುಯೆನ್ಸರ್ಗಳ ತಂಡದ ಅಧ್ಯಯನ ಪ್ರವಾಸ
Study tour by a team of bloggers and influencers to enhance the importance of Hirebenkal Nela
ಗಂಗಾವತಿ 24: ಕೇಂದ್ರ ಪ್ರವಾಸೋದ್ಯಮ ಸಚಿವಾಲಯ, ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾಧಿಕಾರಿ ಹಾಗೂ ಕೊಪ್ಪಳ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಆಯೋಜನೆಯಲ್ಲಿ ಬ್ಲಾಗರ್ಗಳು, ಇನ್ಫ್ಲುಯೆನ್ಸರ್ಗಳು ಮತ್ತು ಟೂರ್ ಆಪರೇಟರ್ಗಳ ತಂಡವೊಂದು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಹಿರೇಬೆಣಕಲ್ ನೆಲೆಗೆ ಭೇಟಿ ನೀಡಿದೆ. ವಿಶ್ವವಿಖ್ಯಾತ ದಕ್ಷಿಣ ಭಾರತದ ’ಕರ್ನಾಟಕದ ಏಳು ಅದ್ಭುತಗಳಲ್ಲಿ’ ಒಂದಾದ ಹಿರೇಬೆಣಕಲ್ಲಿನ ಮೊರಿಯರ ಬೆಟ್ಟವನ್ನು ಅಧ್ಯಯನ ಮಾಡಿ, ಅದರ ಪ್ರಾಮುಖ್ಯತೆಯನ್ನು ಜಗತ್ತಿಗೆ ಪರಿಚಯಿಸುವುದು ಈ ಪ್ರವಾಸದ ಉದ್ದೇಶವಾಗಿತ್ತು.ಈ ಸಂದರ್ಭದಲ್ಲಿ, ಹಿರೇಬೆಣಕಲ್ಲಿನ ಇತಿಹಾಸ ಮತ್ತು ಪ್ರಾಮುಖ್ಯತೆಯನ್ನು ಗುಡ್ಲಾನೂರ ಮಂಜುನಾಥ್ ತಂಡವನ್ನು ಸ್ವಾಗತಿಸಿ ಮಾತನಾಡಿದರು. "ಈಗಾಗಲೇ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿದ್ದಾರೆ. ಇನ್ನಷ್ಟು ಜನ ಹಿರೇಬೆಣಕಲ್ಲಿನ ಈ ನೆಲೆಯನ್ನು ತಿಳಿದುಕೊಳ್ಳಲಿ. ನೆಲೆಯ ಸುರಕ್ಷತಾ ಕಾರ್ಯಗಳು ಕೂಡಲೇ ಪ್ರಸಾರಂಭವಾಗಲಿ. ನಾಗರಿಕ ಜೀವನದ ಆರಂಭಕ್ಕೆ ಸಾಕ್ಷಿಯಾದ ನೆಲೆ ಇದಾಗಿದೆ. ಇಂತಹ ನೆಲೆ ಅಪರೂಪ. ಕಬ್ಬಿಣದ ಬಳಕೆಯಿಂದ ಮಾನವ ಜೀವನದ ಬದಲಾವಣೆಗೆ ಕಾರಣವಾದ ಈ ಸ್ಥಳ, ಸಂಸ್ಕೃತಿಯ ಆರಂಭಕ್ಕೂ ಸಾಕ್ಷಿಯಾಗಿದೆ.
ಇಲ್ಲಿನ ಗುಹಾ ಚಿತ್ರಗಳು ಇದಕ್ಕೆ ಪೂರಕವಾಗಿವೆ. ಇಲ್ಲಿ ಕಂಡುಬರುವ ಸ್ಮಾರಕಗಳ ರಚನಾ ತಂತ್ರಜ್ಞಾನ ಅಚ್ಚರಿಯನ್ನು ಉಂಟುಮಾಡುತ್ತದೆ," ಎಂದು ಅವರು ತಿಳಿಸಿದರು.ಈ ವೇಳೆ ಚಂದ್ರಶೇಖರ್ ಕುಂಬಾರ, ಮಂಜುನಾಥ್ ದೊಡ್ಡಮನಿ ಕೂಡ ನೆಲೆಯ ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಭಾರತೀಯ ಪ್ರವಾಸೋದ್ಯಮ ಇಲಾಖೆಯ ಕೇದಾರನಾಥ್, ಕೇಂದ್ರ ಪುರಾತತ್ವ ಇಲಾಖೆಯ ಚಂದ್ರು ನಾಯಕ್, ರವೀಂದ್ರ (ಸಿಎ), ಕೊಪ್ಪಳ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ್, ಯಮನೂರ ಸ್ವಾಮಿ, ಎ ಎಸ್ ಆಯ್ ಕೊಪ್ಪಳ ಶ್ರೀಪಾದ, ಕಂದಾಯ ಇಲಾಖೆಯ ಮಹೇಶ್ ದಲಾಲ್, ರಾಘವೇಂದ್ರ, ಹಿರಿಯ ಸಾಹಿತಿ ಎನ್ ಶರಣಪ್ಪ ಮೆಟ್ರಿ ಹಾಗೂ ಗ್ರಾಮಸ್ಥರಾದ ,ವಿರೇಶ ಅಂಗಡಿ, ಬಸನಗೌಡ ಹೊಸಳ್ಳಿ, ಕೆ.ವೈ.ಟಿ.ಸಿ.ಯ ಅರ್ಜುನ್ ಜಿ., ಸಂತೋಷ್, ದೇವರಾಜ್, ಮಂಜುಳಾ, ನೆಲೆ ರಕ್ಷಕ ಪಂಪಾಪತಿ, ವೀರಭದ್ರ, ನಾಗರಾಜ್, ಹುಸೇನ್ ಭಾಷ ಮುಂತಾದವರು ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 