ರಸ್ತೆ ಹಸೀರೀಕರಣಕ್ಕಾಗಿ ಆಂಧ್ರ ಪ್ರದೇಶದ ರಾಜಮುಂಡ್ರಿಗೆ ತೆರಳಿದ ಅಧ್ಯಯನ ತಂಡ
Study team leaves for Rajahmundry, Andhra Pradesh for road greening
ರಸ್ತೆ ಹಸೀರೀಕರಣಕ್ಕಾಗಿ ಆಂಧ್ರ ಪ್ರದೇಶದ ರಾಜಮುಂಡ್ರಿಗೆ ತೆರಳಿದ ಅಧ್ಯಯನ ತಂಡ
ಅಥಣಿ 14: ಪಟ್ಟಣ ವ್ಯಾಪ್ತಿಯ ರಸ್ತೆ ಮಧ್ಯದಲ್ಲಿರುವ ಡಿವೈಡರ್ ಗಳಲ್ಲಿ ಹಸೀರೀಕರಣಕ್ಕಾಗಿ ಸಸಿ ನೆಟ್ಟು ಸೌಂದರ್ಯ ಹೆಚ್ಚಿಸುವ ಈ ಕಾರ್ಯ ಅನುಷ್ಠಾನಕ್ಕಾಗಿ ಅಥಣಿ ಪುರಸಭಾ ಸದಸ್ಯರ ತಂಡ ಆಂಧ್ರ ಪ್ರದೇಶದ ರಾಜಮುಂಡ್ರಿಗೆ ನಗರಕ್ಮೆ ತೆರಳಿ ಅಧ್ಯಯನ ನಡೆಸಿತು.
ಅಥಣಿ ಪಟ್ಟಣದ ಎಲ್ಲ ಪ್ರಮುಖ ರಸ್ತೆಗಳ ಡಿವೈಡರಗಳ ಮಧ್ಯೆ ವಿವಿಧ ಹೂವಿನ ಹಾಗೂ ಹಸಿರು ಸಸಿಗಳನ್ನು ಇಲ್ಲಿಯ ಸ್ಥಳೀಯ ಸಂಸ್ಥೆ ನೆಟ್ಟು ಹಸೀರೀಕರಣಕ್ಕೆ ಆದ್ಯತೆ ನೀಡಿದ್ದು, ಇದರಿಂದ ನಗರದ ಸೌಂದರ್ಯಕರಣವೂ ಹೆಚ್ಚಿಸಿದೆ. ಕೆಲ ತಿಂಗಳ ಹಿಂದೆ ಅಥಣಿ ಶಾಸಕ ಲಕ್ಷ್ಮಣ ಸವದಿ ರಾಜಮುಂಡ್ರಿಗೆ ಭೇಟಿ ನೀಡಿ ಸ್ಥಳೀಯ ಸಂಸ್ಥೆಯ ಈ ಕಾರ್ಯದಿಂದ ಪ್ರಭಾವಿತರಾಗಿ ಈ ಕಾರ್ಯವನ್ನು ಅಥಣಿಯಲ್ಲಿಯೂ ಅನುಷ್ಠಾನಗೊಳಿಸಬೇಕು ಎನ್ನುವ ತಮ್ಮ ಅಭಿಪ್ರಾಯವನ್ನು ಪುರಸಭಾ ಸದಸ್ಯರ ಮುಂದೆ ವ್ಯಕ್ತ ಪಡಿಸಿದಾಗ ಸದಸ್ಯರೆಲ್ಲರು ಶಾಸಕರ ಅಭಿಪ್ರಾಯಕ್ಕೆ ಮನ್ನಣೆ ಕೊಟ್ಟು ರಾಜಮುಂಡ್ರಿಗೆ ತೆರಳಿದ್ದರು.
ಆಂಧ್ರ ಪ್ರದೇಶದ ರಾಜಮುಂಡ್ರಿ ನರ್ಸರಿಗೆ ಮತ್ತು ಡಿವೈಡರ್ ಮಧ್ಯೆ ಹಸೀರೀಕರಣಕ್ಕೆ ಪ್ರಸಿದ್ಧಿಯಾದ ಈ ನಗರಕ್ಕೆ ತೆರಳಿದ್ದ ಮುಖ್ಯಾಧಿಕಾರಿ ಸಹಿತ 17 ಜನ ಸದಸ್ಯರ ನಿಯೋಗ ಅನೇಕ ನರ್ಸರಿಗಳಿಗೆ ಭೇಟಿ ನೀಡಿ ಮತ್ತು ಡಿವೈಡರ್ ಗಳ ಮಧ್ಯೆ ಹಚ್ಚಿರುವ ಸಸಿಗಳ ಅಧ್ಯಯನ ನಡೆಸಿತು.
ಸ್ಥಾಯಿ ಸಮಿತಿ ಅಧ್ಯಕ್ಷ ದತ್ತಾ ವಾಸ್ಟರ್, ಸದಸ್ಯರಾದ ಮಲ್ಲಿಕಾರ್ಜುನ ಬುಟಾಳಿ, ಮಲ್ಲೇಶ ಹುದ್ದಾರ, ವಿನಾಯಕ ದೇಸಾಯಿ, ರಾಮನಗೌಡ ಪಾಟೀಲ, ರಿಯಾಜ ಸನದಿ, ಕಲ್ಲೇಶ ಮಡ್ಡಿ, ರಮೇಶ ಪವಾರ, ರಾಜಶೇಖರ ಗುಡೋಡಗಿ, ವೀಲೀನರಾಜ ಯಳಮೇಲಿ, ಪ್ರಮೋದ ಬಿಳ್ಳೂರ, ಉದಯ ಸೋಳಸಿ, ರವಿ ಭಡಕಂಬಿ, ಬಸವರಾಜ ಹಳ್ಳದಮಳ, ತಿಪ್ಪಣ್ಣ ಭಜಂತ್ರಿ, ವೆಂಕಟೇಶ ದೇಶಪಾಂಡೆ, ಬೀರ್ಪ ಯಕ್ಕಂಚಿ, ಬಾಬು ಖೆಮಲಾಪುರ, ಮುಖ್ಯಾಧಿಕಾರಿ ಅಶೋಕ ಗುಡಿಮನಿ ತಂಡದಲ್ಲಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 