ಕಲಿಕೆಗೆ ಆನ್‌ಲೈನ್‌ ಮೊರೆ ಹೋಗುತ್ತಿರುವ ವಿದ್ಯಾರ್ಥಿಗಳು

ಬೆಂಗಳೂರು, ಏ.10,ಕೊರೊನಾ ವೈರಸ್ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದು, ಕಲಿಕೆಯ ಉದ್ದೇಶಕ್ಕಾಗಿ ಆನ್‌ಲೈನ್ ಮೊರೆ ಹೋಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ಬ್ರೈನ್ಲಿ ಸಂಸ್ಥೆಯು ನಡೆಸಿದ ಸಮೀಕ್ಷೆಯಿಂದ ಬಹಿರಂಗಗೊಂಡಿದೆ.ಆನ್‌ಲೈನ್ ಶಿಕ್ಷಣ ವೇದಿಕೆಯ ಹೆಚ್ಚೆಚ್ಚು ಬಳಕೆಯನ್ನು ವಿದ್ಯಾರ್ಥಿಗಳು ಮಾಡಿಕೊಳ್ಳುತ್ತಿದ್ದಾರೆ. ಲಾಕ್ ಡೌನ್ ಆದ ನಂತರ ಈ ವೇದಿಕೆಯನ್ನು ಬಳಸುವವರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡಿದೆ.
ಮಾರ್ಚ್ ತಿಂಗಳಿನಲ್ಲಿ ಬ್ರೈನ್ಲಿ ಸಂಸ್ಥೆಯ ವೆಬ್ಸೈಟ್ ಮೂಲಕ ಶೇಕಡ 36 ರಷ್ಟು ವಿದ್ಯಾರ್ಥಿಗಳು ಆನ್ಲೈನ್ ಕ್ಲಾಸ್ ಪಡೆದುಕೊಳ್ಳುತ್ತಿದ್ದರು. ಈಗ ಇಂತವರ ಸಂಖ್ಯೆ ಶೇಕಡ 57 ಆಗಿದೆ. ಈ ವಿಷಯವು ಸಂಸ್ಥೆ ನಡೆಸಿದ ಸಮೀಕ್ಷೆಯಿಂದ ಬಹಿರಂಗ ಗೊಂಡಿದೆ. ನಮಗೆ ಆಶ್ಚರ್ಯಕರ ಸಂಗತಿಯೆಂದರೆ ಜನರು ಬ್ರೈನ್ಲಿ ವೇದಿಕೆ ಮೂಲಕ ಕಲಿಯುವುದನ್ನು ಮುಂದುವರಿಸುತ್ತಿರುವುದು ಮಾತ್ರವಲ್ಲ, ಪ್ರತಿಯೊಬ್ಬರೂ ಸಹಾಯ ಹಸ್ತ ನೀಡುವುದನ್ನು ಮುಂದುವರಿಸುತ್ತಿದ್ದಾರೆ. ನಮ್ಮ ವೇದಿಕೆಯಲ್ಲಿ ವಿದ್ಯಾರ್ಥಿಗಳು ಮತ್ತು ತಜ್ಞರು ಹಂಚಿಕೊಂಡಿರುವ ಉತ್ತರಗಳು ಮತ್ತು ವಿವರಣೆಗಳ ಸಂಖ್ಯೆಯು ಘಾತೀಯವಾಗಿ ಹೆಚ್ಚಾಗುವುದನ್ನು ನಾವು ನೋಡುತ್ತಿದ್ದೇವೆ” ಎಂದು ಬ್ರೈನ್ಲಿ ಸಂಸ್ಥೆಯ ಸಿಇಒ ಮತ್ತು ಸಹ ಸಂಸ್ಥಾಪಕ ಮೈಕಲ್ ಬೊರ್ಕೊವ್ಸ್ಕಿ ತಿಳಿಸಿದ್ದಾರೆ.