ಕ್ರಿಯೇಟಿವ್ ಸ್ಕಿಲ್ಲಿಂಗ್ ಕಾರ್ಯಾಗಾರದ ಪ್ರಯೋಜನ ಪಡೆದುಕೊಂಡ ವಿದ್ಯಾರ್ಥಿಗಳು
Students who benefited from the Creative Skilling Workshop
ಲೋಕದರ್ಶನ ವರದಿ
ಕ್ರಿಯೇಟಿವ್ ಸ್ಕಿಲ್ಲಿಂಗ್ ಕಾರ್ಯಾಗಾರದ ಪ್ರಯೋಜನ ಪಡೆದುಕೊಂಡ ವಿದ್ಯಾರ್ಥಿಗಳು
ಮುಧೋಳ 11: ಬೆಂಗಳೂರಿನ ಅಗಸ್ತ-್ಯ ಇಂಟರನ್ಯಾಷನಲ್ ಫೌಂಡೇಶನ್ ಅವರು ಗ್ರಾಮೀಣ ಭಾಗದಲ್ಲಿರುವ ಸರ್ಕಾರಿ ಮತ್ತು ಖಾಸಗಿ ಶಾಲಾ-ಕಾಲೇಜುಗಳ ಆಯ್ದ ವಿದ್ಯಾರ್ಥಿಗಳಿಗೆ ಆಧುನಿಕ ತಂತ್ರಜ್ಞಾನದ ಸಾಪ್ಟವೇರ್ ಟೂಲ್ಸ್ ಗಳನ್ನು ಬಳಸಿಕೊಂಡು ಪೋಸ್ಟರ್, ಬ್ರೌಚರ್ ಮೇಕಿಂಗ್ , ರೆಜ್ಯುಮ್ ಕ್ರಿಯೇಟಿಂಗ್, ವಿಡಿಯೋ ಎಡಿಟಿಂಗ್, ಆಡೊಬ್ ಕಲರ್ ಮತ್ತು ಪಿಪಿಟಿ ಸೇರಿದಂತೆ ಡಿಜಿಟಲ್ ಮಾಧ್ಯಮ ಕುರಿತು ಪ್ರಾಯೋಗಿಕ ಚಟುವಟಿಕೆ ನಡೆಸಿ ವಿದ್ಯಾರ್ಥಿಗಳಿಗೆ ವಿಶೇಷ ಕೌಶಲ್ಯ ನೀಡಲಾಗುತ್ತದೆ ಇದರಿಂದ ವಿದ್ಯಾರ್ಥಿಗಳು ಸ್ವಯಂ ಉದ್ಯೋಗ ಮಾಡಿಕೊಂಡು ಆರ್ಥಿಕವಾಗಿ ಸಮೃದ್ಧರಾಗಬಹುದೆಂದು ಅಂತರಾಷ್ಟ್ರೀಯ ಅಗಸ್ತ-್ಯ ಫೌಂಡೇಶನ್ ದ ಬಾಗಲಕೋಟ ಜಿಲ್ಲಾ ಮುಖ್ಯಸ್ಥ ಅನೀಲ ಹಜೇರಿ ಹೇಳಿದರು.
ಅಂತರಾಷ್ಟ್ರೀಯ ಅಗಸ್ತ-್ಯ ಫೌಂಡೇಶನ್ ಬೆಂಗಳೂರು ಹಾಗೂ ಅಡೋಬ್ ಸಾಪ್ಟವೇರ್ ಇವರ ಸಹಯೋಗದಲ್ಲಿ ನಗರದ ಶ್ರೀ ಎಸ್.ಆರ್.ಕಂಠಿ ಮಹಾವಿದ್ಯಾಲಯದ ಪತ್ರಿಕೋಧ್ಯಮ ಹಾಗೂ ಸಮೂಹ ವಿಭಾಗ, ಬಿಸಿಎ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಮೂರು ದಿನಗಳ ಕ್ರಿಯೇಟಿವ್ ಸ್ಕಿಲ್ಲಿಂಗ್ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿ ಸ್ಥಾನವಹಿಸಿ ಮಾತನಾಡಿದರು.
ಅಗಸ್ತ-್ಯ ಇಂಟರನ್ಯಾಷನಲ್ ಫೌಂಡೇಶನ್ ವಿಜಯಪುರದ ತರಬೇತಿದಾರ ದಿನೇಶ ರಾಠೋಡ ಮಾತನಾಡಿ ಕ್ರಿಯೇಟಿವ್ ಸ್ಕಿಲ್ಲಿಂಗ್ ದ ಮಹತ್ವ ಹಾಗೂ ಅದರಿಂದಾಗುವ ಪ್ರಯೋಜನ ಕುರಿತು ತಿಳಿಸಿಕೊಡಲಾಯಿತು ಅಲ್ಲದೆ ವಿವಿಧ ಸಾಪ್ಟವೇರ್ ಗಳ ಬಳಕೆ ಹೇಗೆ ಮಾಡಿಕೊಳ್ಳಬೇಕು ಎಂಬುದರ ಕುರಿತು ವಿದ್ಯಾರ್ಥಿಗಳು ಅತೀ ಆಸಕ್ತಿಯಿಂದ ಪ್ರಾಯೋಗಿಕ ಜ್ಞಾನ ಮತ್ತು ಸೃಜನಾತ್ಮಕ ಕೌಶಲ್ಯವನ್ನು ಪಡೆದುಕೊಂಡರು, ಈ ಉಚಿತ ತರಬೇತಿಯ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದು ಕೊಂಡಿರುವುದು ನಮ್ಮ ಶ್ರಮ ಸಾರ್ಥಕವಾಗಿದೆ ಎಂದರು.
ಪ್ರಾಚಾರ್ಯ ಡಾ.ಎಮ್.ಆರ್.ಜರಕುಂಟಿ ಅಧ್ಯಕ್ಷತೆವಹಿಸಿ ಮಾತನಾಡಿ ಅಗಸ್ತ-್ಯ ಇಂಟರನ್ಯಾಷನಲ್ ಫೌಂಡೇಶನ್ ಅವರು ನಮ್ಮ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಇಂತಹ ಸೃಜನಾತ್ಮಕ ಕೌಶಲ್ಯ ತಿಳಿಸಿಕೊಟ್ಟಿರುವದಕ್ಕೆ ನಾವು ವಿದ್ಯಾರ್ಥಿಗಳ ವತಿಯಿಂದ ಅವರಿಗೆ ಅಭಿನಂದಿಸುತ್ತೇವೆಂದು ಹೇಳಿದರು.
ಬಿಸಿಎ ವಿದ್ಯಾರ್ಥಿಗಳಾದ ಅನ್ನಪೂರ್ಣ ಬಡಿಗೇರ ಮತ್ತು ಕೀರ್ತಿ ಗಾಣಿಕ ತಮ್ಮ ಅನಿಸಿಕೆ ಹಂಚಿ ಕೊಂಡರು.
ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ವಿಶ್ವನಾಥ ಮುನವಳ್ಳಿ, ಬಿಸಿಎ ವಿಭಾಗದ ಮುಖ್ಯಸ್ಥ ಬಸವರಾಜ ಲಿಂಗರಡ್ಡಿ, ವಾಣಿಜ್ಯ ವಿಭಾಗದ ಮುಖ್ಯಸ್ಥ ಅಜ್ಜಪ್ಪ ಕಡೂರ, ವಿಜ್ಞಾನ ವಿಭಾಗದ ಮುಖ್ಯಸ್ಥ ಅನೀಲಕುಮಾರ ಪತ್ತಾರ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಮೂರು ದಿನಗಳ ಕ್ರಿಯೇಟಿವ್ ಸ್ಕಿಲ್ಲಿಂಗ್ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಎಲ್ಲ ವಿಭಾಗಗಳ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು ನಂತರ ಅತಿಥಿ ಗಣ್ಯರನ್ನು ಸನ್ಮಾನಿಸಲಾಯಿತು.
ಉಪನ್ಯಾಸಕ ದುಂಡಪ್ಪ ಇಂಗಳಗಿ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು, ಉಪನ್ಯಾಸಕಿ ಲಕ್ಷಿ-್ಮ ಬಿರಾದರ ನಿರೂಪಿಸಿದರು, ಉಪನ್ಯಾಸಕ ಅನೀಲ ಪತ್ತಾರ ವಂದಿಸಿದರು.
ಪೊಟೋ ಡಿ.11ಎಂಡಿಎಲ್ 1ಎ, 1ಬಿ. ಅಂತರಾಷ್ಟ್ರೀಯ ಅಗಸ್ತ-್ಯ ಫೌಂಡೇಶನ್ ಬೆಂಗಳೂರು ಹಾಗೂ ಅಡೋಬ್ ಸಾಪ್ಟವೇರ್ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕ್ರಿಯೇಟಿವ್ ಸ್ಕಿಲ್ಲಿಂಗ್ ಕಾರ್ಯಾಗಾರದ ಸಮಾರೋಪ ಸಮಾರಂಭ ಜರುಗಿತು.
--
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 