ವಿದ್ಯಾರ್ಥಿಗಳು ಮೊಬೈಲ್ ಬಳಕೆಗೆ ಹೆಚ್ಚು ಆದ್ಯತೆ ನೀಡಬಾರದು: ಕುಲಂಕರ್ ಗುಣಕಿ
Students should not give too much priority to mobile usage: Kulankar Gunaki
ಮಾಂಜರಿ, 20 : ಶಾಲಾ ವಿದ್ಯಾರ್ಥಿಗಳು ಸಮಯದ ಮೌಲ್ಯ ಹಾಳು ಮಾಡಿಕೊಳ್ಳದೆ ಶೈಕ್ಷಣಿಕ ಚಟುವಟಿಕೆಗೆ ಮಹತ್ವ ನೀಡಬೇಕು. ಹೆತ್ತ ತಾಯಿ, ತಂದೆ ಹಾಗೂ ಶಿಕ್ಷಣ ಕಲಿಸುವ ಗುರುಗಳಿಗೆ ಗೌರವ ನೀಡಬೇಕು. ಪ್ರಸ್ತುತ ದಿನಮಾನಗಳಲ್ಲಿ ಮೊಬೈಲ್ ಹಾವಳಿಯಿಂದ ಮಕ್ಕಳ ಮಾನಸಿಕ ನೆಮ್ಮದಿ ಹಾಳಾಗುತ್ತಿರುವುದು ಕಾಣುತ್ತಿದ್ದೇವೆ. ವಿದ್ಯಾರ್ಥಿಗಳು ಮೊಬೈಲ್ ಉಪಯೊಗಕ್ಕೆ ಹೆಚ್ಚು ಆದ್ಯತೆ ನೀಡಬಾರದು ಪ್ರತಿದಿನ ಪುಸ್ತಕ ಹಾಗೂ ದಿನ ಪತ್ರಿಕೆಗಳನ್ನು ಓದುವುದನ್ನು ರೂಡಿಸಿಕೊಳ್ಳಬೇಕು ಎಂದು ಸ್ಪೀಕ ಲಿಮಿಟೆಡ್ ಹಾಗೂ ಗ್ರೀನ್ ಸ್ಟಾರ್ ಲಿಮಿಟೆಡ್ ಹುಬ್ಬಳ್ಳಿಯ ವ್ಯವಸ್ಥಾಪಕ ನಿರ್ದೇಶಕರಾದ ಕುಲಂಕರ್ ಗುಣಕಿ ಸಲಹೆ ನೀಡಿದರು.
ಅವರು ಇಂದು ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ,ಸ್ಪೀಕ ಲಿಮಿಟೆಡ್ ಹಾಗೂ ಗ್ರೀನ್ ಸ್ಟಾರ್ ಲಿಮಿಟೆಡ್, ಹಾಗೂ ಸಕ್ಕರೆ ಕಾರ್ಖಾನೆಯ ವಕ್ಕಲತನ ವಿಭಾಗದ ಸಯುಕ್ತ ಆಶ್ರಯದಲ್ಲಿ ಗಂಗಾ ಶುಗರ್ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಶಾಲಾ ಪರಿಕರನೇ ಮತ್ತು ಶೈಕ್ಷಣಿಕ ಸಾಮಗ್ರಿ ವಿತರಿಸಿ ಮಾತನಾಡುತ್ತಿದ್ದರು ಈ ಸಮಾರಂಭದ ಅಧ್ಯಕ್ಷತೆಯನ್ನು ಚಿದಾನಂದ ಬಸ ಪ್ರಭುಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಾದ ಆರ್ ಬಿ ಖಂಡಗಾವೆ ವಹಿಸಿದ್ದರು ಮುಖ್ಯ ಅತಿಥಿಯಾಗಿ ಸಕ್ಕರೆ ಕಾರ್ಖಾನೆಯ ನಿರ್ದೇಶಕರಾದ ಮಲ್ಲಪ್ಪ ಮೈಶಾಲೆ ಭರಮ್ ಗೌಡ ಪಾಟೀಲ್ ಪ್ರಧಾನ ವ್ಯವಸ್ಥಾಪಕ ನಾಗಯ್ಯ ಎಸ್ ಹಿರೇಮಠ ಸಂಸ್ಥೆಯ ಜಗದೀಶ್ ಗುದಗಿ ಹಾಜರಿದ್ದರು
ಈ ವೇಳೆ ಸಮಾರಂಭದ ಅಧ್ಯಕ್ಷತೆ ವಹಿಸಿದ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಆರ್ ಬಿ ಖಂಡಗಾವಿ ಮಾತನಾಡಿ ಶಾಲಾ ಮಕ್ಕಳಿಗೆ ಶಿಸ್ತಿನ ಪಾಠ ಹೇಳಿದ ಅವರು, ಮಕ್ಕಳು ತಮ್ಮ ಗುರಿಯತ್ತ ಸಾಗಬೇಕಾದರೆ ಶಿಸ್ತು ಬಹಳ ಮುಖ್ಯ, ಶಿಸ್ತನ್ನು ಮೈಗೂಡಿಸಿಕೊಂಡು ಚೆನ್ನಾಗಿ ಓದಿ ವಿದ್ಯಾವಂತರಾಗಿ ದೊಡ್ಡ ದೊಡ್ಡ ಕೆಲಸಕ್ಕೆ ಸೇರಬೇಕು. ನೀವು ಬಡವರಿಗೆ ಸಹಾಯ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಜೀವನದಲ್ಲಿ ಎಲ್ಲರೂ ಕಷ್ಟ ಓದಿ ಮುಂದೆ ಬರಬೇಕು. ನೀವು ದೇಶದ ಉತ್ತಮ ಪ್ರಜೆಯಾಗಿ ದೇಶಕ್ಕೆ ನಿಮ್ಮದೇ ಆದ ಕೊಡುಗೆ ನೀಡಬೇಕು. ನಿಮ್ಮ ಶಾಲೆಗೆ ಬೇಕಾದ ಮೂಲಭೂತ ಸೌಕರ್ಯಗಳು, ಮತ್ತು ವಿದ್ಯಾರ್ಥಿ ಗಳಿಗೆ ಬೇಕಾದ ಮೂಲ ಸೌಕರ್ಯಗಳನ್ನು ಒದಗಿಸಿಕೊಡಲು ಸಿದ್ದನಿದ್ದೇನೆ. ಏನೇ ಸಮಸ್ಯೆ ಇದ್ದರೂ ನಮಗೆ ತಿಳಿಸಿ ಎಂದು ತಮ್ಮ ಓದಾರ್ಯವನ್ನ ಮೆರೆದರು. ಇದೇ ವೇಳೆ ಗಂಗಾ ಶುಗರ್ ಸಕ್ಕರೆ ಕಾರ್ಖಾನೆಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಮೂರು ವಿದ್ಯಾರ್ಥಿನಿಯರಿಗೆ ವಕ್ಕಲತನ ವಿಭಾಗದ ವತಿಯಿಂದ ಗಣ್ಯರಿಂದ ಬಹುಮಾನ ನೀಡಿ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮಕ್ಕೆ ಒಕ್ಕಲುತನ ವಿಭಾಗದ ಎನ್ ಐ ಪಾಟೀಲ್ ರಾಹುಲ್ ಇಚಲಕರಂಜಿ ರಾಹುಲ್ ಬಸ್ತವಾಡೇ ಸಚಿನ್ ಮೋಪಗಾರ ಅನಿಲ್ ಮಂಗಾಜೆ ಎಂ ಎಸ್ ಹೊಸ್ಪೆಟ್ ವೈಭವ್ ಪಾಟೀಲ್ ಸಂಜಯ್ ಪಾಟೀಲ್ ಸುಭಾಷ್ ಖೋತ್ ಸೌರಭ ಕೊಥಳಿ ದೀಪಕ್ ಚವಾನ್ ಶಾಲಾ ಕುಮಾರ ಸಮಿತಿಯ ಅಧ್ಯಕ್ಷರಾದ ರಘು ಪಾಂಡರೆ ಕುಮಾರ್ ಹಳಿಂಗಳಿ ಹಾಗೂ ಇನ್ನುಳಿದ ಶಿಕ್ಷಕರು ಹಾಜರಿದ್ದರು ಶಿಕ್ಷಕ ಹರೀಶ್ ಸ್ವಾಗತಿಸಿ ನಿರೂಪಿಸಿ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 