ವಿದ್ಯಾರ್ಥಿಗಳು ಆತ್ಮವಿಶ್ವಾಸದೊಂದಿಗೆ ಮುನ್ನಡೆಯಬೇಕು ಹಿ ಡಾ. ಎ.ಮ್.ಖಾನ್
Students should move forward with confidence, says Dr. A.M.Khan
ವಿದ್ಯಾರ್ಥಿಗಳು ಆತ್ಮವಿಶ್ವಾಸದೊಂದಿಗೆ ಮುನ್ನಡೆಯಬೇಕು ಹಿ ಡಾ. ಎ.ಮ್.ಖಾನ್
ಧಾರವಾಡ 17 : ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಧಾರವಾಡ ಕ.ವಿ.ವಿ.ಕುಲಪತಿಗಳಾದ ಡಾ.ಎ.ಎಮ್.ಖಾನ್ ಅವರು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ. ಸ್ಪರ್ಧೆಗಳಲ್ಲಿ ಭಾಗವಹಿಸುವುದು ಮುಖ್ಯ. ಗೆಲುವು - ಸೋಲುಗಳು ಮುಖ್ಯವಲ್ಲ. ಸೋಲು ಉಂಟಾದರೆ ಎದೆಗುಂದಬಾರದು. ಸಾಧಿಸುವ ದೃಢ ಸಂಕಲ್ಪದೊಂದಿಗೆ ಮುನ್ನಡೆಯಬೇಕು. ಆತ್ಮವಿಶ್ವಾಸ ನಮ್ಮನ್ನು ಸಾಧನೆಯ ಪಥದತ್ತ ಕೊಂಡೊಯ್ಯಲಿದೆ. ವ್ಯಕ್ತಿತ್ವ ವಿಕಸನಕ್ಕೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆ ಅವಶ್ಯ. ನಾಯಕತ್ವ, ಸಂಘಟನೆ, ಮಾತಿನ ಕೌಶಲ್ಯ, ಸ್ಪರ್ಧಾತ್ಮಕ ಮನೋಭಾವ, ಗುರು ಹಿರಿಯರಿಗೆ ಗೌರವ ಮುಂತಾದ ಗುಣಗಳನ್ನು ಬೆಳೆಸಿಕೊಂಡು ಉತ್ತಮ ನಾಗರಿಕರಾಗಿ ಬದುಕಬೇಕು. ಕ್ರೀಡೆಯಿಂದ ಆರೋಗ್ಯ ವೃದ್ಧಿಯಾಗುತ್ತದೆ. ಮನಸ್ಸು ಉಲ್ಲಾಸದಿಂದ ಇರುತ್ತದೆ. ನಾನು ಸಹ ವಿದ್ಯಾರ್ಥಿಯಾಗಿದ್ದಾಗ ಉತ್ತಮ ಕ್ರೀಡಾ ಪಟುವಾಗಿದ್ದೆ. ನನ್ನ ಕ್ರೀಡಾ ಅಭ್ಯಾಸಕ್ಕೆ ಜೆ.ಎಸ್.ಎಸ್. ಕಾಲೇಜಿನ ಮೈದಾನ ಸಹಕಾರಿಯಾಗಿತ್ತು. ನಾನೊಬ್ಬ ಒಳ್ಳೆಯ ಕ್ರಿಕೆಟರ್ ನಾನು ಜೆ.ಎಸ್.ಎಸ್.ಮೈದಾನದಲ್ಲಿ ಒಂದು ಕ್ರಿಕೆಟ್ ಪಂದ್ಯದಲ್ಲಿ ಬೌಲಿಂಗ್ ಮಾಡಿ 6 ವಿಕೆಟ್ ಪಡೆದಿದ್ದೆ ಎಂದು ತಮ್ಮ ವಿದ್ಯಾರ್ಥಿ ದಿನಗಳನ್ನು ನೆನಪಿಸಿಕೊಂಡರು. ವಿದ್ಯಾರ್ಥಿಗಳು ಕರುಣಾಶೀಲತೆ, ವಿಚಾರಾತ್ಮಕ ಮತ್ತು ಪ್ರಶ್ನೆ ಮಾಡುವ ಮನೋಭಾವ, ವಿಶಾಲ ಮನಸ್ಸಿನಿಂದ ಪಾಠ ಕೇಳುವುದು, ಸಮಾಜದ ಜನರೊಂದಿಗೆ ವ್ಯವಹರಿಸುವ ರೀತಿ ಇಂತಹ ವೈಶಿಷ್ಟ ಗಳನ್ನು ರೂಢಿಸಿಕೊಂಡು ಮುನ್ನಡೆಯಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ವಿದ್ಯಾರ್ಥಿ ಒಕ್ಕೂಟದ ಪದಾಧಿಕಾರಿಗಳಿಗೆ ಪುಷ್ಪ ನೀಡಿ ಶುಭಕೋರಿದರು. ಪಠ್ಯದ ಜೊತೆಜೊತೆಗೆ ಪಠ್ಯೇತರ ಚಟುವಟಿಕೆಗಳು ಸಹ ವಿದ್ಯಾರ್ಥಿಗಳ ಸವಾಂರ್ಗೀಣ ವಿಕಾಸಕ್ಕೆ ಪೂರಕ. ಹೀಗಾಗಿ ವಿದ್ಯಾರ್ಥಿಗಳು ಸಾಂಸ್ಕೃತಿಕ, ಕ್ರೀಡೆ ಸೇರಿದಂತೆ ಇನ್ನಿತರ ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ಅನಾವರಣಗೊಳಿಸಲು ಸನ್ನದ್ಧರಾಗಬೇಕು ಎಂದು ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಡಾ.ಅಜಿತ ಪ್ರಸಾದ ಹೇಳಿದರು. ನಗರದ ಜೆ.ಎಸ್.ಎಸ್. ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ವಿದ್ಯಾರ್ಥಿ ಸಂಘ ಮತ್ತು ಕ್ರೀಡಾ ವಿಭಾಗಗಳ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಮ್ಮ ಕಾಲೇಜು ಸ್ಥಾಪನೆಯಾಗಿ 12 ವರ್ಷಗಳಾಗಿದ್ದು ಅಂದಿನಿಂದ ಇಂದಿನವರೆಗೆ ವಿದ್ಯಾರ್ಥಿಗಳ ಸರ್ವತೋಮುಖ ವಿಕಾಸಕ್ಕೆ ಪೂರಕವಾಗುವ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುವ ಮೂಲಕ ವಿದ್ಯಾರ್ಥಿಗಳ ಸವಾಂರ್ಗಿಣ ಅಭಿವೃದ್ಧಿಗೆ ಉತ್ತೇಜನ ನೀಡುತ್ತಿದೆ.ಕಳೆದ 12 ವರ್ಷಗಳಿಂದ ನಮ್ಮ ಕಾಲೇಜಿಗೆ ಒಟ್ಟು 73 ಯಾಂರ್ಕ್ ಗಳು ಬಂದಿವೆ. ಈ ವರ್ಷ ನಮ್ಮ ಸ್ನಾತಕ ವಿಭಾಗಕ್ಕೆ 5 ಮತ್ತು ಸ್ನಾತಕೋತ್ತರ ವಿಭಾಗಕ್ಕೆ 2 ಸೇರಿ ಒಟ್ಟು 7 ಯಾಂರ್ಕ ಬಂದಿರುವುದು ಹೆಮ್ಮೆ ತಂದಿದೆ. ಕ್ರೀಡೆಗೆ ವಿಶೇಷ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕ್ರೀಡಾ ಪಟುಗಳಿಗೆ ವಿಶೇಷ ಸೌಲಭ್ಯ ನೀಡುತ್ತ ಬಂದಿದೆ ಎಂದರು. 2025-26ನೇ ಸಾಲಿನ ವಿದ್ಯಾರ್ಥಿ ಒಕ್ಕೂಟದ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ವಿದ್ಯಾರ್ಥಿಗಳು ನೈತಿಕ ಮೌಲ್ಯಗಳನ್ನು ಬೆಳೆಸಿಕೊಂಡು ಸನ್ಮಾರ್ಗದಲ್ಲಿ ನಡೆದ ಕೀರ್ತಿವಂತರಾಗಿರಿ ಎಂದು ಶುಭ ಕೋರಿದರು. ಕ.ವಿ.ವಿ.ಕುಲಪತಿಗಳಾದ ಕುಲಪತಿಗಳಾದ ಡಾ. ಎ.ಎಮ್.ಖಾನ್ ಅವರಿಗೆ ಜೆ.ಎಸ್.ಎಸ್.ಸಂಸ್ಥೆಯಿಂದ ಸನ್ಮಾನಿಸಲಾಯಿತು. ಉಪಪ್ರಾಚಾರ್ಯ ಡಾ. ಸೂರಜ ಜೈನ್ ವಾರ್ಷಿಕ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಲಲಿತಕಲಾ ಸಂಘದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.ವಿದ್ಯಾರ್ಥಿಗಳಾದ ಕು. ಸುದರ್ಶನ ಹಾಗೂ ಕು. ರಶ್ಮಿ ಕಾರ್ಯಕ್ರಮ ನಿರೂಪಿಸಿದರು.ಕು. ರಚನಾ ಹೆಗಡೆ, ಸ್ವಾಗತಿಸಿದರು. ಕು. ಶ್ರೇಯಾ ಹೆಗಡೆ ಅತಿಥಿಗಳನ್ನು ಪರಿಚಯಿಸಿದರು.ಕು.ಭೂಮಿಕಾ ಹೆಗಡೆ ವಂದಿಸಿದರು. ಪ್ರೊ. ವಿವೇಕ ಲಕ್ಷ್ಮೇಶ್ವರ, ಪ್ರೊ. ಶೃತಿ ಶೆಟ್ಟಿ, ಡಾ. ಆರ್.ವಿ.ಚಿಟಗುಪ್ಪಿ, ಡಾ. ಜಿನ್ನಪ್ಪ ಕುಂದಗೋಳ, ಶ್ರೀ ಶ್ರವಣಯೋಗಿ, ಡಾ. ರೋನಿಲ್ ಮನೋಹರ, ವಿವಿಧ ಸ್ನಾತಕೋತ್ತರ ವಿಭಾಗಗಳ ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಪಾಲಕರು, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 