ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ದೈಹಿಕ, ಮಾನಸಿಕ ಸದೃಡತೆಯನ್ನು ಬೆಳಿಸಿಕೊಳ್ಳಬೇಕು

ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ದೈಹಿಕ, ಮಾನಸಿಕ ಸದೃಡತೆಯನ್ನು ಬೆಳಿಸಿಕೊಳ್ಳಬೇಕು Students should develop physical and mental fitness by participating in sports.

ಹಾವೇರಿ 12: ‘ಓದು, ಅಭ್ಯಾಸ, ಅಧ್ಯಯನ ಮಾಡಿದಾಗ ಸಿಗುವ ಯಶಸ್ಸನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ.’ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ದೈಹಿಕ, ಮಾನಸಿಕ ಸದೃಡತೆಯನ್ನು ಬೆಳಿಸಿಕೊಳ್ಳಬೇಕು ಹಿ ಡಿ.ಡಿ.ಪಿ.ಯು ಅಶೋಕ ಶಾಸ್ತ್ರಿ.  

ನಗರದ ಲಯನ್ಸ್‌ ಶಾಲೆ ಹಾಗೂ ಕಾಲೇಜಿನಲ್ಲಿ ಏರಿ​‍್ಡಸಲಾಗಿದ್ದ ಶಾಲಾ ಕ್ರೀಡಾಕೂಡ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿ ಧ್ವಜಾರೋಹಣ ನೆರವೇರಿಸಿ, ಮಾತನಾಡುತ್ತಾ ವಿದ್ಯಾರ್ಥಿಗಳು ಆಟ ಆಡುವಾಗ ಕ್ರೀಡಾ ಮನೋಭಾವದ ಜೊತೆಗೆ ತಮ್ಮ ತನವನ್ನು ಪ್ರದರ್ಶಿಸಬೇಕು, ಆಟದ ಜೊತೆಗೆ ಓದುವ ಅಭ್ಯಾಸ ರೂಡಿಸಿಕೊಂಡು ತಂದೆ ತಾಯಿಗಳಿಗೆ, ಶಾಲಾ ಕಾಲೇಜುಗಳಿಗೆ, ಕಲಿಸಿದ ಗುರುಗಳಿಗೆ ಉತ್ತಮ ಹೆಸರು ತರಬೇಕು. ಲಯನ್ಸ್‌ ಶಾಲಾ ಮಕ್ಕಳು ಅತ್ಯಂತ ಶಿಸ್ತಿನ ಸಿಪಾಯಿಗಳು, ಅವರನ್ನು ನೋಡಿದಾಗ ಸೈನ್ಯದ ಶಿಸ್ತನ್ನು ನೋಡಿದಂತಾಯಿತು ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕ್ರೀಡಾ ಜ್ಯೋತಿ ಬೆಳಗಿಸಿದ ಲಯನ್ಸ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾ ಲಯನ್ ಪಿ.ಡಿ.ಶಿರೂರ ಮಾತನಾಡಿ ಆರೋಗ್ಯವೇ ಭಾಗ್ಯ, ಪಾಠದ ಜೊತೆಗೆ ಆಟವೂ ಇರಬೇಕು ಹೇಗೆಂದರೆ “ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸು ಇರುತ್ತದೆ” ಎನ್ನುತ್ತಾ, ಮಗುವಿನ ಸರ್ವತೋಮುಖವಾದ ಬೆಳವಣಿಗೆಯೇ ಶಿಕ್ಷಣದ ಗುರಿಯಾಗಬೇಕು, ಈ ದಿಶೆಯಲ್ಲಿ ನಮ್ಮ ಶಿಕ್ಷಣ ಸಂಸ್ಥೆಯು ಮಕ್ಕಳಿಗೆ ತರಬೇತಿ ನೀಡುತ್ತಿರುವುದು ಸಂತೋಷದ ವಿಷಯ ಎಂದರು ಕ್ರೀಡಾಕೂಟದಲ್ಲಿ ಭಾಗವಹಿಸಿ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನಗಳನ್ನು ಪಡೆದ ವಿಧ್ಯಾರ್ಥಿಗಳಿಗೆ ವಿವಿಧ ಪಾರಿತೋಷಕ ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡೆಲಾಯಿತು. 

ಕಾರ್ಯಕ್ರಮದಲ್ಲಿ ಲಯನ್ಸ್‌ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಲಯನ್ ಎಸ್‌.ಸಿ.ಮರ್ತೂರ, ಕಾರ್ಯದರ್ಶಿ ಲಯನ್ ವ್ಹಿ.ಜಿ.ಬಣಕಾರ, ಟ್ರೇಸರರ್ ಲಯನ್ ಎಸ್‌.ಜಿ.ಮಹಾಂತ, ನಿರ್ದೇಶಕರಾದ ಲಯನ್ ಎ.ಎಸ್‌.ಹೆರೂರ, ಲಯನ್ ಎಸ್‌.ಹೆಚ್‌.ಕಬ್ಬಿಣಕಂತಿಮಠ, ಲಯನ್ ಎಮ್‌.ಸಿ.ಮಳಿಮಠ, ಹಾವೇರಿ ಲಯನ್ಸ್‌ ಕ್ಲಬ್‌ನ ಅಧ್ಯಕ್ಷರಾದ ಲಯನ್ ಎ.ಹೆಚ್‌. ಕಬ್ಬಿಣಕಂತಿಮಠ, ಲಯನ್ ಪಿ.ಸಿ.ಹಿರೇಮಠ, ಲಯನ್ ವಿ.ಆರ್‌.ಹಾವನೂರ, ಲಯನ್ ಗೀರೀಶ ತುಪ್ಪದ, ಲಯನ್ ಆನಂದ ಅಟವಾಳಗಿ, ಲಯನ್ ಆರ್‌.ಆರ್‌. ಪಾಟೀಲ, ಲಯನ್ ಸುಭಾಸ್ ಹುಲ್ಯಾಳದ, ಲಯನ್ ಅಶೋಕ ಹಾವನೂರ, ಲಯನ್ ನಿತಿನ್ ಹೊರಡಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಸ್ವಾಗತವನ್ನು ಹೈಸ್ಕೂಲ್ ವಿಭಾಗದ ಮುಖ್ಯೋಪಾಧ್ಯಾಯ ಶ್ರೀ ಪಿ.ಎಸ್‌.ಹಲಸೂರ, ಮುಖ್ಯ ಅತಿಥಿ ಪರಿಚಯವನ್ನು ಪ್ರಾಚಾರ್ಯ ಶ್ರೀ ಎಚ್‌.ಎಫ್‌.ಪಾಣಿಗಟ್ಟಿ ಮಾಡಿದರು. ಪ್ರಾಥಮಿಕ ಶಾಲಾ ವಿಭಾಗದ ಮುಖ್ಯೋಪಾಧ್ಯಾಯನಿ ಶ್ರೀಮತಿ ಪಾರ್ವತಿ ಪಾಟೀಲ ವಂದಿಸಿದರು ಶ್ರೀ ಎಮ್‌.ಎಮ್‌.ದೇಶಪಾಂಡೆ ಕಾರ್ಯಕ್ರಮ ನಿರೂಪಿಸದರು. ಕ್ರೀಡಾಕೂಟದ ನೇತೃತ್ವವನ್ನು ಶಾಲೆಯ ದೈಹಿಕ ಶಿಕ್ಷಕರು ವಹಿಸಿಕೊಂಡಿದ್ದರು. ದಿನಾಂಕ: 13-02-2026 ಬೆಳಿಗ್ಗೆ 9-30 ಗಂಟೆಗೆ ಭಾಷೆ ಹಾಗೂ ವಿಜ್ಞಾನ, ಗಣಿತ, ಕಲಾ ವಿಭಾಗದ ಪ್ರದರ್ಶನ ಇರುವುದು. ಇದರ ಉದ್ಘಾಟನೆಯನ್ನು ಲಯನ್ಸ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಲಯನ್ ಪಿ.ಡಿ.ಶಿರೂರ ನೆರವೇರಿಸುವರು ಎಂದು ಗೌರವ ಕಾರ್ಯದರ್ಶಿ ವ್ಹಿ.ಜಿ.ಬಣಕಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


Flag Hoisting Sports Day Event Lions School & College Physical and Mental Fitness