ವಿದ್ಯಾರ್ಥಿಗಳು ಸಮಾಜದ ಅಧಾರ ಸ್ಥಂಭವಾಗಲಿ: ಡಾ ಅರವಿಂದ ಮನಗೂಳಿ
Students should be the pillars of society: Dr. Aravind Managuli
ಲೋಕದರ್ಶನ ವರದಿ
*ಬಸವೇಶ್ವರ ಪಪೂ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನ *ನಿವೃತ್ತ ಉಪನ್ಯಾಸಕರಿಗೆ ಸನ್ಮಾನ *ಪ್ರತಿಭಾವಂತ ವಿಧ್ಯಾರ್ಥಿಗಳಿಗೆ, ಕ್ರೀಡಾ ವಿಜೇತರಿಗೆ ಗೌರವ ಸನ್ಮಾನ ಪ್ರಶಸ್ತಿ ವಿತರಣೆ
ಕಲಕೇರಿ 05: ಪ್ರತಿಯೊಬ್ಬ ವಿದ್ಯಾರ್ಥಿಯು ಭಾವಾನಾತ್ಮಕ ಪ್ರಪಂಚವನ್ನು ಬೆಳೆಸಿಕೊಳ್ಳುವದರ ಮೂಲಕ ತಮ್ಮ ಜೀವನವನ್ನು ಸುಂದರವಾಗಿಸಿಕೊಳ್ಳಬೇಕಿದೆ, ಅಂಕಗಳ ಜೊತೆಗೆ ಜೀವನ ಮೌಲ್ಯಗಳು ಅತ್ಯಗತ್ಯವಾಗಿದ್ದು ಕಠಿಣ ಪರಸ್ಥಿತಿಯನ್ನು ಎದುರಿಸಿ ಮುನ್ನುಗ್ಗುವ ಛಲವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಸಿಂದಗಿಯ ಸಿ ಎಂ ಮನಗೂಳಿ ಪದವಿ ಕಾಲೇಜಿನ ಪ್ರೋ. ಡಾ ಅರವಿಂದ ಮನಗೂಳಿ ಹೆಳಿದರು.
ಗ್ರಾಮದ ಮಲ್ಲಿಕಾರ್ಜುನ ವಿಧ್ಯಾವರ್ಧಕ ಸಂಘದ ಅಡಿಯಲ್ಲಿ ನಡೆಯುತ್ತಿರುವ ಶ್ರೀ ಬಸವೇಶ್ವರ ಪದವಿ ಪೂರ್ವ ಮಹಾವಿಧ್ಯಾಲಯದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ದ್ವಿತೀಯ ಪಿಯುಸಿ ವಿಧ್ಯಾರ್ಥಿಗಳಿಗೆ ಶುಭಕೊರುವ ಸಮಾರಂಭ ಮತ್ತು 2025-26 ನೇ ಸಾಲಿನಲ್ಲಿ ನಿವೃತ್ತಿ ಹೊಂದಿದ ಉಪನ್ಯಾಸಕರಿಗೆ, ಪ್ರತಿಭಾನ್ವಿತ ಕ್ರೀಡಾ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಿಧ್ಯಾರ್ಥಿಗಳು ಮತ್ತು ಮಹಾವಿಧ್ಯಾಲಯದ ಸಂಬಂದ ಮತ್ತು ಕೊಂಡಿ ಎಂದಿಗೂ ಕಳಚಬಾರದು ಅದು ಶಾಸ್ವತವಾಗಿ ಮುಂದುವರೆಯುತ್ತಾ ಸಾಗಬೇಕು ಭವಿಷ್ಯದ ದಿನಗಳಲ್ಲಿ ಶಿಕ್ಷಣವನ್ನು ಪೂರೈಸಿ ತಮ್ಮ ಸ್ವಂತ ಕಾಲಮೇಲೆ ತಾವೂಗಳು ನಿಂತು ಸಮಾಜದ ಆಧಾರ ಸ್ತಂಭವಾಗಿ ನಿಲ್ಲಬೇಕು ಎಂದು ಅವರು ಹೆಳಿದರು.
ವಿಜಯಪುರದ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಆರ್ ಸಿ ಹಿರೇಮಠ ಮಾತನಾಡಿ ಕಲಕೇರಿ ಗ್ರಾಮದ ಬಸವೇಶ್ವರ ಶಿಕ್ಷಣ ಸಂಸ್ಥೆ ಪಠ್ಯದ ಜೋತೆಗೆ ಅವರ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿ ಸೌಂಸ್ಕೃತಿಕ,ಕ್ರೀಡೆ ಇನ್ನಿತರ ಚಟುವಟಿಕೆಗಳಿಗೆ ಹೆಚ್ಚಿನ ಅವಕಾಶ ನೀಡಿ ಸಂಸ್ಕಾರವಂತ ವ್ಯಕ್ತಿಗಳನ್ನು ಈ ಸಮಾಜಕ್ಕೆ ನೀಡುತ್ತೀರುವದು ನಿಜ್ಜಕ್ಕೂ ಹೆಮ್ಮೆಯ ವಿಚಾರವಾಗಿದ್ದು ವಿಧ್ಯಾರ್ಥಿಳು ಶೈಕ್ಷಣಿಕ ಸಾಧನೆಯೊಂದಿಗೆ ಜೀವನದಲ್ಲಿ ಏನಾದರೂ ಸಾಧಿಸುವ ಛಲ ಹೊಂದಿ ವೀರ್ಧಯರ್ಥಿ ಜೀವನವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಸಂಸ್ಥೆಯ ಹಿರಿಯ ನಿರ್ಧೇಶಕ ವೀರ್ಪ ಝಳಕಿ ಕಾರ್ಯಕ್ರಮವನ್ನು ಉದ್ಘಾಟಿಸಿದರು,ಆದರ್ಶ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಜಾಹಾಂಗೀರ ಶಿರಸಗಿ,ಸಂಸ್ಥೆ ಕಾರ್ಯದರ್ಶಿ ಎಂ ಎಸ್ ಜೋಗುರ,ಶಾಂತಗೌಡ ಪಾಟೀಲ ಮಾತನಾಡಿದರು.ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಕಲಕೇರಿಯ ಗುರುಮರುಳಾರಾಧ್ಯರ ಹಿರೇಮಠದ ಸಿದ್ದರಾಮ ಶಿವಾಚಾರ್ಯರು ವಹಿಸಿದ್ದರು,ಅಧ್ಯಕ್ಷತೆಯನ್ನು ಪ್ರಾಚಾರ್ಯ ಬಸವಂತಪ್ಪ ಚನಗೊಂಡ ವಹಿಸಿಕೊಂಡಿದ್ದರು.
ಈ ವೇಳೆ ಅನುಧಾನಿತ ಬಸವೆಶ್ವರ ಪದವಿ ಪೂರ್ವ ಕಾಲೇಜಿನಲ್ಲಿ 30 ವರ್ಷ ಸೇವೆಯನ್ನು ಸಲ್ಲಿಸಿ ನಿವೃತ್ತರಾದ ಡಾ.ಜಿ ಜಿ ಮೇಡಿದಾರ ಹಾಗೂ ದೈಹಿಕ ಶೀಕ್ಷಣ ಉಪನ್ಯಾಸಕ ಶಾಂತವೀರ ಧುರ್ಗಿ ಹಾಗೂ 2025 ನೇ ಸಾಲಿನ ವಿವಿದ ಜಿಲ್ಲಾ ಮಟ್ಟ ಹಾಗೂ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ ವಿಧ್ಯಾರ್ಥಿಗಳಿಗೆ ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕಾಲೇಜಿನ ವಿಧ್ಯಾರ್ಥಿಗಳಿಂದ ಸೌಂಸ್ಕೃತಿಕ ಮನರಂಜನಾ ಕಾರ್ಯಕ್ರಮಗಳು ನಡೆದವು.
ಕಾರ್ಯಕ್ರಮದಲ್ಲಿ ದೇವಿಂದ್ರ ಗುಮಶೆಟ್ಟಿ,ಅಪ್ಪಾಸಾಬ ಗುಮಶೆಟ್ಟಿ,ಕುಮಾರ ದೇಸಾಯಿ, ಎಸ್ ಎಸ್ ಧುರ್ಗಿ, ಭಿಮನಗೌಡ ಬಿರಾದಾರ,ಸಿ ಎಸ್ ಹಿರೇಮಠ, ಆರ್ ಎಂ ಗುಮಶೆಟ್ಟಿ, ಬಸವರಾಜ್ ದೇವರಮನಿ, ಉಮೇಶ ಮಂಗೊಂಡ,ಗೌಡು ಹದ್ರಿ,ಬಸವರಾಜ್ ಕುಂಬಾರ, ವಿಋಏಶ ಜಳಕಿ, ರವಿಕುಮಾರ ಕುಲಕರ್ಣಿ, ಜಗದೀಶ ಗುಮಶೆಟ್ಟಿ, ಸಂಜು ಮಾದಾರ, ನಿಲಮ್ಮ ಬಿಸನಾಳ ಸೇರಿದಂತೆ ಇತರರು ಇದ್ದರು,ಮಲ್ಲಿಕಾ ಪಡೇಖನೂರ ನಿರೂಪಿಸಿದರು, ಕಾವೇರಿ ಪತ್ತಾರ ಪ್ರಾರ್ಥಿಸಿದರು,ಮುತ್ತು ಅಂಬಳನೂರ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 