ವಿದ್ಯಾಥರ್ಿಗಳಿಗೆ ವೃತ್ತಿ ಮಾರ್ಗದರ್ಶನ ಅಗತ್ಯ: ಪೋತದಾರ

ಲೋಕದರ್ಶನ ವರದಿ

ಬೆಳಗಾವಿ 15: ಎಸ್.ಎಸ್.ಎಲ್.ಸಿ.ನಂತರದ ಯಾವ ವಿಷಯ ಮತ್ತು ಯಾವ ವಿಭಾಗದಲ್ಲಿ ಉನ್ನತ ಶಿಕ್ಷಣ ಪಡೆದರೆ ಸೂಕ್ತ ಎಂಬುದರ ಬಗ್ಗೆ ಎಸ್.ಎಸ್.ಎಲ್.ಸಿ.ವಿದ್ಯಾಥರ್ಿಗಳಿಗೆ ವೃತ್ತಿ  ಮಾರ್ಗದರ್ಶನ ನೀಡುವುದು ಇಂದಿನ ಅಗತ್ಯವಾಗಿದೆ ಎಂದು ಅವಿನಾಶ ಪೋತದಾರ ಅವರು ಅಭಿಪ್ರಾಯಪಟ್ಟರು.

ಇತ್ತಿಚಿಗೆ ಕೆ.ಎಲ್.ಎಸ್. ಸಂಸ್ಥೆಯ ಕೆ.ಕೆ.ವೇಣುಗೋಪಾಲ ಸಭಾಗೃಹದಲ್ಲಿ ಜೈನ ಇಂಟರ್ನ್ಯಾಷನಲ್ ಟ್ರೆಡ್ ಆರ್ಗನೈಝೇಶನ ಬೆಳಗಾವಿ ವಿಭಾಗ ಜಿತೋ ಸಂಸ್ಥೆಯ ವತಿಯಿಂದ 9 ನೇ ತರಗತಿ ಮತ್ತು 10 ನೇ ತರಗತಿಯ ವಿದ್ಯಾಥರ್ಿಗಳಿಗಾಗಿ ಹಮ್ಮಿಕೊಳ್ಳಲಾದ ವೃತ್ತಿ ಮಾರ್ಗದರ್ಶನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾಥರ್ಿಗಳಲ್ಲಿ  ಎಸ್.ಎಸ್.ಎಲ್.ಸಿ. ನಂತರ ಮಹಾವಿದ್ಯಾಲಯಕ್ಕೆ ಪ್ರವೇಶ ಪಡೆಯುವ ಸಂದರ್ಭದಲ್ಲಿ ಅನೇಕ ಗೊಂದಲಗಳಿರುತ್ತವೆ. ಸ್ನೇಹಿತರು ಯಾವ ಕಾಲೇಜಿಗೆ ಹೋಗುತ್ತಾರೆ ಅದೆ ಕಾಲೇಜಿಗೆ ನಾನೂ ಹೋಗಬೇಕೆಂಬ ಬಯಕೆ ಇರುತ್ತದೆ. ಆದರೆ ಈ ಶಿಕ್ಷಣದಿಂದ ವೃತ್ತಿ ಜೀವನ ಪಡೆಯಬಹುದೆ ಎಂಬುದು ಗೊತ್ತಾಗುವುದಿಲ್ಲ. ಇದರಿಂದ ವಿದ್ಯಾಥರ್ಿಗಳ ಸಮಯ ಹಾಳಾಗುವುದಲ್ಲದೇ ಶೀಕ್ಷಣವನ್ನು ಅರ್ಧಕ್ಕೆ ನಿಲ್ಲಿಸಬೇಕಾಗುತ್ತದೆ ಎಂದು ಹೇಳಿದ ಅವರು,  ಪಾಲಕರೂ ಸಹ ವಿದ್ಯಾಥರ್ಿಗಳಿಗೆ ಇದೇ ಶಿಕ್ಷಣ ಪಡೆಯಬೇಕು ಎಂಬ ಹಠವಾದಿ ಧೊರಣೆ ತಾಳದೆ ವಿದ್ಯಾಥರ್ಿಗಳ ಬೇಡಿಕೆಗಳಿಗೆ ಸ್ಪಂಧಿಸಿ ಸೂಕ್ತ ವೃತ್ತಿ ಜೀವನ ನೀಡುವ ಶಿಕ್ಷಣ ನೀಡಲು ಮುಂದಾಗಬೇಕೆಂದು ಅವರು ಸಲಹೆ  ನೀಡಿದರು. 

ಈ  ಮಾರ್ಗದರ್ಶನ ಶಿಬಿರದಲ್ಲಿ ಭಕ್ತಿ ದೇಸಾಯಿ,ಡಾ.ಪೂಣರ್ಿಮಾ ಪಟ್ಟಣಶೆಟ್ಟಿ ,ಅಭಿಷೇಕ ಭೇಂಡಿಗೇರಿ, ಮತ್ತು ಸ್ವಾತಿ ಜೋಗ ಅವರು ಮಾತನಾಡಿ, ಉನ್ನತ ಶಿಕ್ಷಣ  ಪಡೆಯುವಲ್ಲಿ ಎದುರಿಸಬಹುದಾದ ಸಮಸ್ಯೆಗಳು ಮತ್ತು ಪರಿಹಾರ ಹಾಗೂ ಅವಕಾಶಗಳ ಕುರಿತು ವಿದ್ಯಾಥರ್ಿಗಳಿಗೆ ಮಾರ್ಗದರ್ಶನ ಮಾಡಿದರು. ಈ ಶಿಬಿರದಲ್ಲಿ ಬೆಳಗಾವಿ ನಗರದ ವಿವಿಧ ಶಾಲೆಗಳಿಂದ ಸುಮಾರು 500 ಕ್ಕೂ ಹೆಚ್ಚು ವಿದ್ಯಾಥರ್ಿಗಳು ಮತ್ತು ಪಾಲಕರು  ಭಾಗವಹಿಸಿದ್ದರು. 

ಈ ಸಂದರ್ಭದಲ್ಲಿ ಜಿತೋ ಸಂಸ್ಥೆಯ ಕಾರ್ಯದಶರ್ಿ ವಿಕ್ರಮ ಜೈನ, ರಾಹುಲ ಜೈನ ,ಡಾ. ಗೋಮಟೇಶ ಕುಸನಾಳೆ, ಪುಷ್ಪಕ ಹನಮಣ್ಣವರ, ಸಂತೋಷ ಪೊರವಾಲ, ಅಂಕಿತ ಖೊಡಾ, ಪ್ರಮೋದ ಪಾಟೀಲ, ಮಹೇಂದ್ರ ಪರಮಾರ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.