ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಹೆಚ್ಚಿಸಿಕೊಳ್ಳಲು ಸಲಹೆ

ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಹೆಚ್ಚಿಸಿಕೊಳ್ಳಲು ಸಲಹೆ Students are advised to actively participate and enhance their talents

ಲೋಕದರ್ಶನ ವರದಿ 

ಮಾಂಜರಿ  19: ವಿದ್ಯಾರ್ಥಿಗಳಲ್ಲಿ ಸದೃಢತೆಯೊಂದಿಗೆ ಸಂಶೋಧನಾತ್ಮಕಗುಣ ಹಾಗೂ ವೈಚಾರಿಕತೆಯನ್ನು ಕಾಲೇಜುಗಳಲ್ಲಿ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಎಲ್ಲ ವಿದ್ಯಾರ್ಥಿಗಳು ಇದರಲ್ಲಿ ಸಕ್ರೀಯವಾಗಿ ಭಾಗವಹಿಸಿ ತಮ್ಮ ಮನೋಬಲ ಹೆಚ್ಚಿಸಿಕೊಂಡು ಸಾಧನೆಯ ಹಾದಿಯಲ್ಲಿ ನಡೆದು ತಮ್ಮ ಬದುಕನ್ನು ಸುಂದರವಾಗಿ ಕಟ್ಟಿಕೊಳ್ಳಲು ಪ್ರಯತ್ನಸಬೇಕೆಂದು ಬೆಳಗಾವಿಯ ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಸಾಹಿತಿಗಳಾದ ಡಾ. ವೈ. ಬಿ. ಹಿಮ್ಮಡಿ ಹೇಳಿದರು.  ಅವರು ಶುಕ್ರವಾರ ರಂದು ಇಂದು ಅಂಕಲಿಯ ಕೆ.ಎಲ್‌.ಇ. ಸಂಸ್ಥೆಯ ಶ್ರೀಮತಿ ಶಾರದಾದೇವಿ ಕೋರೆ ಸಂ.ಪ.ಪೂ. ಕಾಲೇಜಿನ 2026-27ನೇ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು. 

ಇಂದಿನ ತಂತ್ರಜ್ಞಾನ ಯುಗದಲ್ಲಿ ಅವೆಲ್ಲವುಗಳನ್ನು  ಮಾನವೀಯತೆಯನ್ನು ಸಹೃದಯತೆಯನ್ನು ಕಾಪಾಡಿಕೊಂಡು ಮುನ್ನಡೆಯಬೇಕೆಂದರು. ಕಾಗೆ-ನರಿ ಕಥೆ, ಬಸವಣ್ಣ, ಕವಿ ಹೋಮರ, ವಿವೇಕಾನಂದ, ಅಂಬೇಡ್ಕರ ಅವರ ತತ್ವ ಸಿದ್ಧಾಂತಗಳನ್ನು ಹೇಳುತ್ತಲೇ ಇವರೆಲ್ಲರಂತೆ ನೀವು ಆಗಬೇಕೆಂದು ಸಾಧಕರ ಸಾಲಿನಲ್ಲಿ ನಿಲ್ಲಬೇಕೆಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯರಾದ ಡಾಽ ಆರ್‌. ಡಿ. ಸಿಝರೆಯವರು "ಎಲ್ಲ ಸೌಲಭ್ಯಗಳು ಇಲ್ಲಿವೆ ಅದನ್ನು ಸರಿಯಾಗಿ ಬಳಿಸಿಕೊಂಡು ಸಾಧನೆಯ ಹಾದಿಯಲ್ಲಿ ನಡೆಯಿರಿ" ಎಂದರು. ಪ್ರಾಚಾರರಾದ ಶ್ರೀ. ಸಿ. ಎನ್‌. ತಳವಾರ ವೇದಿಕೆಯಲ್ಲಿದ್ದರು.

ಆವರಣದ ಪದವಿ ಮಹಾವಿದ್ಯಾಲಯದ ಪ್ರಾಚಾರ ಶ್ರೀ. ಎಂ. ಎಸ್‌. ಕಾನಡೆ, ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಜಯಶ್ರೀ ತಮಗೊಂಡ, ಆಂಗ್ಲ ಮಾಧ್ಯಮಶಾಲೆಯ ಮುಖ್ಯಸ್ಥರಾದ ಶ್ರೀ ಪಾರ್ಥಸಾರಥಿ ನಂದಾ, ಸಂಸ್ಕೃತಿ ಪ್ರಾಥಮಿಕ ಶಾಲೆಯ ಶ್ರೀಮತಿ ಮಹುವಾ, ಎಸ್‌.ಸಿ. ಪಾಟೀಲ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಸಂತೋಷ ಹಿರೇಮಠ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶ್ರೀಮತಿ ರೂಪಾ ಮಾನ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು. ಒಕ್ಕೂಟದ ಕಾರ್ಯದರ್ಶಿಗಳಾದ ಡಾ. ಸುಬ್ರಾವ ಎಂಟೆತ್ತಿನವರ ಪರಿಚಯಿಸಿದರು. ಕುಮಾರಿ ಪ್ರೀತಿ ಮಾಂಗ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಶ್ರೀ ನಾಗರಾಜ ಅಮಟೆ ನಿರೂಪಿಸಿದರು. ಕೊನೆಯಲ್ಲಿ ಶ್ರೀ ವೈ. ಬಿ. ಮಾಚಕನೂರ ವಂದಿಸಿದರು.