ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) 18ನೇ ವಿದ್ಯಾರ್ಥಿಗಳ ಅಖಿಲ ಭಾರತ ಸಮ್ಮೇಳನ

ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) 18ನೇ ವಿದ್ಯಾರ್ಥಿಗಳ ಅಖಿಲ ಭಾರತ ಸಮ್ಮೇಳನ Students Federation (SFI) 18th All India Students Conference

ಹಾವೇರಿ 20: ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) 18ನೇ ವಿದ್ಯಾರ್ಥಿಗಳ ಅಖಿಲ ಭಾರತ ಸಮ್ಮೇಳನ ಅಂಗವಾಗಿ ಧ್ವಜಾರೋಹಣ ದಿನಾಚರಣೆ ಕರೆ ಮೇರೆಗೆ ನಗರದ ಶಿವಾಜಿ ನಗರದಲ್ಲಿರುವ ಎಸ್‌ಎಫ್‌ಐ ಜಿಲ್ಲಾ ಕಚೇರಿ ಎದುರು ಶ್ವೇತ ಪತಾಕೆ ಧ್ವಜಾರೋಹಣ ನೆರವೇರಿಸಿ ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಮಾತನಾಡಿ ಸರ್ವರಿಗೂ ಶಿಕ್ಷಣ ಮತ್ತು ಉದ್ಯೋಗದ ಮೂಲಭೂತ ಹಕ್ಕಿಗಾಗಿ ನಿರಂತರ ಚಳುವಳಿಯನ್ನು ಸಂಘಟಿಸುತ್ತ ಬರುತ್ತಿದೆ. ದೇಶದ ಐಕ್ಯತೆ, ಸಮಗ್ರತೆ ಹಾಗೂ ಸೌಹಾರ್ದತೆಯನ್ನು ಗಟ್ಟಿಗೊಳಿಸುವುದರ ಜೊತೆಗೆ ಇಂದು ಶಿಕ್ಷಣ ಕ್ಷೇತ್ರದ ಖಾಸಗೀಕರಣ, ವ್ಯಾಪಾರೀಕರಣ, ಭ್ರಷ್ಟಾಚಾರ, ಖಾಸಗಿ - ವಿದೇಶಿ ವಿಶ್ವವಿದ್ಯಾಲಯಗಳು ದೇಶಕ್ಕೆ ಆಗಮಿಸುತ್ತಿರುವುದನ್ನು ವಿರೋಧಿಸಿ, ವಿದ್ಯಾರ್ಥಿಗಳು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ನಿರಂತರ ಚಳುವಳಿಯನ್ನು ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರವ್ಯಾಪಿಯಾಗಿ ಕಾರ್ಯಕ್ರಮಗಳನ್ನು ಮಾಡುತ್ತದೆ. 

ಕಳೆದ 56 ವರ್ಷಗಳಿಂದ ಶಿಕ್ಷಣದ ಉಳಿವಿಗಾಗಿ, ವಿದ್ಯಾರ್ಥಿಗಳ ಏಳ್ಗೆಗಾಗಿ ನಿರಂತರ ಹೋರಾಟ, ಕಾರ್ಯಕ್ರಮ, ಸಂವಾದ, ವಿಚಾರ ಸಂಕಿರಣ ಕಾರ್ಯಕ್ರಮಗಳನ್ನು ನಡೆಸುತ್ತಾ ವಿದ್ಯಾರ್ಥಿಗಳ ಆಶಾಕಿರಣವಾಗಿ ಕೆಲಸ ಮಾಡುತ್ತಿರುವ ಎಸ್‌ಎಫ್‌ಐ ಸಂಘಟನೆಯ 18ನೇ ಅಖಿಲ ಭಾರತ ಸಮ್ಮೇಳನವು ಶಿಕ್ಷಣ ನಮ್ಮ ಹಕ್ಕು, ಏಕತೆಯೇ ದಾರಿ, ವೈವಿಧ್ಯತೆಯೇ ಶಕ್ತಿಗಾಗಿ ಎಂಬ ಪ್ರಮುಖ ಘೋಷಣೆ ಅಡಿಯಲ್ಲಿ 27,28,29,30 ಜೂನ್ 2025 ನಾಲ್ಕು ದಿನಗಳ ಕಾಲ ಕೇರಳ ರಾಜ್ಯದ ಕೋಚಿಕೊಡ್ ನಗರದಲ್ಲಿ ನಡೆಯಲಿದೆ.ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಶಿಕ್ಷಣ ತಜ್ಞರು, ಪ್ರಗತಿಪರ ಚಿಂತಕರು, ಬುದ್ಧಿಜೀವಿಗಳು ದೇಶದ ವಿವಿಧ ಭಾಗಗಳಿಂದ ಒಂದು ಸಾವಿರಕ್ಕೂ ಅಧಿಕ ವಿದ್ಯಾರ್ಥಿ ಪ್ರತಿನಿಧಿಗಳು, ವಿದ್ಯಾರ್ಥಿ ಚಳುವಳಿಯಲ್ಲಿರುವ, ನಾಯಕರು ಪಾಲ್ಗೊಳ್ಳುತ್ತಿದ್ದು  ಶಿಕ್ಷಣ ಮತ್ತು ಉದ್ಯೋಗ ಸೇರಿದಂತೆ  ಹಲವಾರು ಕ್ಷೇತ್ರಗಳ ಕುರಿತು, ರಾಷ್ಟ್ರವನ್ನು ತಲ್ಲಣಗೊಳಿಸುತ್ತಿರುವ ಭಯೋತ್ಪಾದನೆ, ಕೋಮುವಾದ, ಭ್ರಷ್ಠಾಚಾರ, ನಿರುದ್ಯೋಗ, ಬಡತನ ಸೇರಿದಂತೆ ಇನ್ನು ಹಲವಾರು ವಿಷಯಗಳ ಕುರಿತು ವಿಚಾರ ಸಂಕಿರಣಗಳು, ಚರ್ಚಾ ಗೋಷ್ಟಿಗಳು ನಡಿಯಲಿವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ವಸಂತ ವಡ್ಡರ, ಸುನೀಲಕುಮಾರ್ ಎಲ್, ಪ್ರಮೋದ್ ಆರ್ ದೊಡ್ಡಮನಿ, ಪ್ರಜ್ವಲ್ ಕೆ ಭದ್ರಣ್ಣನವರ್ ಉಪಸ್ಥಿತರಿದ್ದರು.