ವಿದ್ಯಾರ್ಥಿಗಳ ಸನ್ಮಾನ ಸಮಾರಂಭ

ಲೋಕದರ್ಶನವರದಿ

ಧಾರವಾಡ:  ದೇವರ ದಾಸಿಮಯ್ಯ ಮನುಜ ಕುಲ ಉದ್ಧಾರಕ್ಕಾಗಿ ಮೌಢ್ಯತೆ, ವೈದಿಕತೆ, ಶೋಷಣೆ, ಅಸಮಾನತೆ, ಬಹುದೇವೋಪಾಸನೆಗಳನ್ನೆಲ್ಲ ಧಿಕ್ಕರಿಸಿ ಮನುಷ್ಯನ ಉನ್ನತಿಕರಣಗೊಳಿಸುವ ವಚನಗಳನ್ನು ಸರ್ವಜನಾಂಗದವರಿಗೂ ಒದಗಿಸಿಕೊಟ್ಟಿದ್ದಾರೆ ಎಂದು ಮಾಜಿ ಮಂತ್ರಿ ವಿನಯ ಕುಲಕಣರ್ಿ ಅಭಿಪ್ರಾಯಪಟ್ಟರು.

     ಡಾ.ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ದೇವರ ದಾಸಿಮಯ್ಯ ನೇಕಾರ ಅಭಿವೃದ್ದಿ ಟ್ರಸ್ಟ ಕಮೀಟಿಯ ಉದ್ಘಾಟನೆ ಹಾಗೂ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪ್ರತಿಭಾವಂತ ವಿದ್ಯಾಥರ್ಿಗಳ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. 

     ದೇವರ ದಾಸಿಮಯ್ಯನವರು ಹಿರಿಯ ಶರಣರು ಅವರು ನೇಯ್ಗೆ ಕಾಯಕ ಮಾಡಿ ತಮ್ಮ ಜೀವನ ನಡೆಸುತ್ತಾ ಸಮಾಜದ ಅಭಿವೃದ್ದಿಗೆ ತಮ್ಮ ಜೀವನವನ್ನೆ ಮುಡುಪಾಗಿಟ್ಟರು. ಅವರು ರಚಿಸಿದ ಅನೇಕ ವಚನಗಳನ್ನು ಇಂದಿನ ಮಕ್ಕಳಿಗೆ ತಿಳಿಸಿ ಕೊಟ್ಟು ದಾಸಿಮಯ್ಯನವರ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಮಾರ್ಗದರ್ಶನ ಮಾಡಬೇಕು.

    ನೇಕಾರ ಸಮುದಾಯ ಚಿಕ್ಕ ಸಮುದಾಯವಾಗಿದ್ದು ಶೈಕ್ಷಣಿಕ, ಔದ್ಯೋಗಿಕ ಕ್ಷೇತ್ರದಲ್ಲಿ ಹಿಂದುಳಿಯುತ್ತಿದ್ದು ಈ ಸಮಾಜದ ಅಭಿವೃದ್ದಿಗೆ ಮುಖಂಡರು ಶ್ರಮಿಸುವುದು ಅವಶ್ಯ ಎಂದರು.

        ಕೆಪಿಸಿಸಿ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಡಿ. ಲಕ್ಷ್ಮೀನಾರಾಯಣ ಮಾತನಾಡಿ, ನೇಕಾರ, ದೇವಾಂಗ ಸಮಾಜದ ಸಮಸ್ತ ಒಳಪಂಗಡಗಳು ಒಗ್ಗೂಡಿ ಸಮಾಜದ ಸಂಘಟನೆ ಮಾಡುವುದು ಅವಶ್ಯಕ.

    ಸಮುದಾಯ ಚಿಕ್ಕದಾಗಿದ್ದು ಸರಕಾರದ ಸೌಲಭ್ಯ ಪಡೆಯುವಲ್ಲಿ ಹಿಂದೆ ಬೀಳುತ್ತಿದೆ. ಈ ನಿಟ್ಟಿನಲ್ಲಿ ಸಮಾಜದ ಅಭಿವೃದ್ದಿ ಜೊತೆಗೆ ಮಕ್ಕಳ ಶೈಕ್ಷಣಿಕ ಅಭಿವೃದ್ದಿ ಸೌಲಭ್ಯ ಪಡೆಯಲು ಸರಕಾರಕ್ಕೆ ಒತ್ತಾಯಿಸಬೇಕು ಇದಕ್ಕಾಗಿ ನಾನು ನಿಮ್ಮೊಂದಿಗೆ ಕಾರ್ಯಗತನಾಗುತ್ತೇನೆ ಎಂದರು. 

               ಹಂಪಿ ಹೇಮಕೂಟ ಗಾಯತ್ರಿ ಮಠದ ಪೀಠಾಧ್ಯಕ್ಷರಾದ ದಯಾನಂದ ಪುರಿ ಸ್ವಾಮಿಜಿ ಆಶಿರ್ವಚನ ಮಾಡಿ ಮಾತನಾಡಿ, ದೇವರ ದಾಸಿಮಯ್ಯ ನೇಕಾರ ಅಭಿವೃದ್ದಿ ಟ್ರಸ್ಟ ಪದಾಧಿಕಾರಿಗಳು ಸಮಾಜದ ಚಿಂತಕರು, ಹಿರಿಯರು ಯೋಚಿಸಿ ನಮ್ಮ ಧಮರ್ಿಯರ ಸಾಮಾಜಿಕ, ಧಾಮರ್ಿಕ, ಶೈಕ್ಷಣಿಕ ಉನ್ನತಿಕರಣಕ್ಕೆ ಶ್ರಮಿಸುವ ಕೆಲಸ ಮಾಡಬೇಕು ಎಂದರು. 

       ದೇವರ ದಾಸಿಮಯ್ಯ ನೇಕಾರ ಅಭಿವೃದ್ದಿ ಟ್ರಸ್ಟ ಕಮೀಟಿ ಅಧ್ಯಕ್ಷ ರವಿ ಲೋಲಿ ಅಧ್ಯಕ್ಷತೆವಹಿಸಿ ಮಾತನಾಡಿದರು. ರವಿಕುಮಾರ ಆಶಯ ನುಡಿಗಳನ್ನಾಡಿದರು.

   ರಾಜ್ಯ ದೇವಾಂಗ ಸಂಘದ ಪ್ರಧಾನ ಕಾರ್ಯದಶರ್ಿ ರವೀಂದ್ರ ಕಲಬುಗರ್ಿ, ಡಾ. ನಾಗರಾಜ ಹಳ್ಳಿಯವರ, ವೀರಭದ್ರ ಕಾಮಕರ, ಡಾ.ಪ್ರವೀಣ ದೇವಾಂಗದ, ಕೃಷ್ಣರಾಜೇಂದ್ರ ತಾಳೂಕರ, ಶಿವಾನಂದ ಲೋಲೆನವರ ವೇದಿಕೆ ಮೇಲಿದ್ದರು. ಸವಿತಾ ಕುಸುಗಲ್ ನಿರೂಪಿಸಿದರು. 

        ವಿರುಪಾಕ್ಷ ಲೋಲೆನವರ  ಸಂಗೀತ ನಡೆಸಿಕೊಟ್ಟರು. ಷಡಕ್ಷರಿ ದೇವಾಂಗದ ಸ್ವಾಗತಿಸಿದರು.

   ದೇವೆಂದ್ರ ಹೊಸಮನಿ ಪರಿಚಯಿಸಿದರು. ರವೀದ್ರ ಲೋಲೆನವರ ವಂದಿಸಿದರು. ಈಶ್ವರ ಕಾಮಕರ, ಸುನೀಲ ಡಗೆ, ಲಕ್ಷ್ಮೀ ಸುನೀಲ ಡಗೆ ಉಪಸ್ಥಿತರಿದ್ದರು, ಸಮಾರಂಭದಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪ್ರತಿಭಾವಂತ ವಿದ್ಯಾಥರ್ಿಗಳಿಗೆ ಸನ್ಮಾನ ಮಾಡಲಾಯಿತು.