ಹಾಸ್ಟೆಲ್ ನಲ್ಲಿ ವಿದ್ಯಾರ್ಥಿ ನೇಣು ಹಾಕಿಕೊಂಡು ಸಾವು

ಹಾಸ್ಟೆಲ್ ನಲ್ಲಿ ವಿದ್ಯಾರ್ಥಿ ನೇಣು ಹಾಕಿಕೊಂಡು ಸಾವು Student dies by hanging in hostel

ಲೋಕದರ್ಶನ ವರದಿ 

ಇಂಡಿ  21: ನಗರದ ವಿಜಯಪೂರ ರಸ್ತೆಯಲ್ಲಿ ಇರುವ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಡಾ ಬಿ ಆರ್ ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ಇಂಡಿ ಟೌನ್ ಯಲ್ಲಿ ಇಂದು ಬೆಳಿಗ್ಗೆ 11-30 ಸುಮಾರಿಗೆ ಯುವಕನೊಬ್ಬ ಹಾಸ್ಟೆಲ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂಡಿ ನಗರದಲ್ಲಿ ನಡೆದಿದೆ. ಡೆತ್ ನೋಟ ಬರೆದು ಇಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ವಿದ್ಯಾರ್ಥಿ ಅಭಿಜಿತ್ ಉರ​‍್ ಅಂಬರೀಶ್ ಭೀಮರಾಯ ಸಮಗಾರ( 17) ಎಂದು ತಿಳಿದು ಬಂದಿದೆ. ಈ ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಆದರೆ ಹಗಲು ಹೊತ್ತಿನಲ್ಲಿ ಈ ಹಾಸ್ಟೆಲ್ ನಲ್ಲಿ ವಾರ್ಡನ್ ಆಗಿರಬಹುದು ಅಥವಾ ಸಿಬ್ಬಂದಿಗಳು ಆಗಿರಬಹುದು ಯಾರು ಇಲ್ಲದೇ ಇರುವುದರಿಂದ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ ನನ್ನ ಮಗನು ಆತ್ಮಹತ್ಯೆ ಮಾಡಿಕೊಂಡಿಲ್ಲ ಇದು ಕೊಲೆ ಆಗಿದೆ ಎಂದು ಆರೋಪಿಸುತ್ತಿದ್ದಾರೆ. ಈ ಸುದ್ದಿ ತಿಳಿದು ಸ್ಥಳಕ್ಕೆ ಇಂಡಿ ಉಪವಿಭಾಗಾಧಿಕಾರಿ ಅಧಿಕಾರಿ ಗುರುಸ್ವಾಮಿ ಹಾಗೂ ತಹಶೀಲದಾರ ನಾಗೇಂದ್ರ ಕೊಳಶೆಟ್ಟಿ ಅವರು ಬೇಟಿ ನೀಡಿ ಘಟನೆ ಬಗ್ಗೆ ವರದಿ ಪಡೆದುಕೊಂಡರು ಹಾಗೂ ಈ ಕುರಿತು ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಇದು ಆತ್ಮಹತ್ಯೆಯೋ ಅಥವಾ ಮತೇ ಯಾವುದೇ ಕಾರಣವೋ ಎಂಬುದು ಪೋಲಿಸರ ತನಿಖೆಯಿಂದ ಗೊತ್ತಾಗಲಿದೆ. ಏನೇ ಇರಲಿ ಭವಿಷ್ಯದಲ್ಲಿ ಬಾಳಿ ಬದುಕಬೇಕಾದ ವಿದ್ಯಾರ್ಥಿ ಭವಿಷ್ಯ ಸಾವಿನಲ್ಲಿ ಅಂತ್ಯವಾಗಿರುವುದು ದುರದೃಷ್ಟಕರ ಸಂಗತಿ.