ರಜಪೂತ ಸಮಾಜದಿಂದ ವಿದ್ಯಾರ್ಥಿನಿ ಇಂದಿರಾ ಬಾಯಿಗೆ ಸನ್ಮಾನ
Student Indira Bai felicitated by the Rajput community
ತಾಳಿಕೋಟಿ 07: ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿ ಆಲ್ ಇಂಡಿಯಾ ರ್ಯಾಂಕಿಂಗನಲ್ಲಿ 227ನೇ ರ್ಯಾಂಕ್ ಪಡೆದ ಪಟ್ಟಣದ ವಿದ್ಯಾರ್ಥಿನಿ ಇಂದಿರಾಬಾಯಿ ಭವಾನಸಿಂಗ್ ಹಜೇರಿ ಇವರನ್ನು ರಜಪೂತ ಸಮಾಜದ ವತಿಯಿಂದ ಸೋಮವಾರ ಅಭಿನಂದಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ರಜಪೂತ ಸಮಾಜದ ಅಧ್ಯಕ್ಷ ಹರಿಸಿಂಗ್ ಮೂಲಿಮನಿ ಹಾಗೂ ಯುವ ಮುಖಂಡ ವಿಜಯಸಿಂಗ್ ಹಜೇರಿ ಅವರು ಮಾತನಾಡಿ ನಮ್ಮ ಸಮಾಜದ ಪ್ರತಿಭಾವಂತ ವಿದ್ಯಾರ್ಥಿನಿಯಾದ ಇಂದಿರಾ ಬಾಯಿ ಭವಾನಸಿಂಗ್ ಹಜೇರಿ ಅವರು ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ 227ನೇ ರ್ಯಾಂಕ್ ಪಡೆದಿರುವುದು ಇಡೀ ಸಮಾಜಕ್ಕೆ ಹೆಮ್ಮೆಯ ವಿಷಯವಾಗಿದೆ.
ಈ ಸಾಧನೆ ಮಾಡುವುದರೊಂದಿಗೆ ಈ ವಿದ್ಯಾರ್ಥಿನಿ ಎಲ್ಲರಿಗೂ ಮಾದರಿ ಆಗಿದ್ದಾಳೆ ಅವಳು ಭವಿಷ್ಯದಲ್ಲಿಯೂ ಇದಕ್ಕಿಂತಲೂ ಉತ್ತಮ ಸಾಧನೆಯನ್ನು ಮಾಡಲಿ ಎಂಬುದು ನಮ್ಮೆಲ್ಲರ ಹಾರೈಕೆಯಾಗಿದೆ ಎಂದರು. ಈ ಸಮಯದಲ್ಲಿ ರಜಪೂತ ಸಮಾಜದ ಉಪಾಧ್ಯಕ್ಷ ರತನಸಿಂಗ್ ಕೊಕಟನೂರ,ಭರತಸಿಂಗ್ ವಿಜಾಪುರ,ಸುರೇಶ ಹಜೇರಿ, ಭವಾನಸಿಂಗ್ ಹಜೇರಿ, ರಘುರಾಮಸಿಂಗ್ ಹಜೇರಿ,ಜೈಸಿಂಗ್ ಮೂಲಿಮನಿ,ವಿಠಲಸಿಂಗ್ ಹಜೇರಿ (ಬೆಕಿನಾಳ), ರಮೇಶ ಗೌಡಗೇರಿ, ನಾರಾಯಣಸಿಂಗ್ ಕೊಕಟನೂರ, ಅರುಣಸಿಂಗ್ ದಡೇದ ಹಾಗೂ ವಿದ್ಯಾರ್ಥಿನಿಯ ಕುಟುಂಬದ ಸದಸ್ಯರು ಇದ್ದರು.
ಕ್ರಿಕೇಟಿಗ್ ಧೋನಿ ಬೆಳಗಾವಿಗೆ ಕರೆಸಿ : ವಿದ್ಯಾರ್ಥಿಗಳಿಂದ ಡಿಸಿಗೆ ವಿಭಿನ್ನ ಮನವಿ
ಮಳೆಯಿಂದ ಕಾರಲಗಾ ಗ್ರಾಮ ಜಲಾವೃತ; ವಿದ್ಯಾರ್ಥಿಗಳ ಪರದಾಟ : ಶಾಲಾ ಕಾಲೇಜುಗಳಿಗೆ ರಜೆ
ಆಲಂದಿಯಲ್ಲಿ ಪ್ರವಾಹ: ಭಾರೀ ಮಳೆಯಿಂದ ಇಂದ್ರಾಯಣಿ ನದಿ ಉಕ್ಕಿ ಹರಿದು ಸೇತುವೆಗಳು ಮುಚ್ಚಲ್ಪಟ್ಟವು; ನದಿತೀರ ಪ್ರದೇಶಗಳು ಜಲಾವೃತ
ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ, ಜೀವ ಬೆದರಿಕೆ, ನ್ಯಾಯಕ್ಕಾಗಿ ಡಿಸಿ, ಎಸ್ಪಿಗೆ ಉಪನ್ಯಾಸಕನ ಮೊರೆ
ಗೌರಿ ಸ್ಪ್ರಾಟ್ ಅವರನ್ನು ವಿವಾಹವಾದ ಅಮೀರ್ ಖಾನ್; ಮುಂಬೈಯಲ್ಲಿ ಆಪ್ತರ ಸಮ್ಮುಖದಲ್ಲಿ ಸರಳ ವಿವಾಹ ಸಮಾರಂಭ
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ 