ದೃಢ ಸಂಕಲ್ಪ ಮತ್ತು ಪರಿಶ್ರಮ ಅವರ ಭವಿಷ್ಯವನ್ನು ಖಂಡಿತವಾಗಿ ಉಜ್ವಲಗೊಳಿಸುತ್ತದೆ : ಅಧ್ಯಕ್ಷೆ ಕವಿತಾ ತಿಮ್ಮಾಪುರ
Strong determination and perseverance will definitely make their future bright: President Kavita Thi
ದೃಢ ಸಂಕಲ್ಪ ಮತ್ತು ಪರಿಶ್ರಮ ಅವರ ಭವಿಷ್ಯವನ್ನು ಖಂಡಿತವಾಗಿ ಉಜ್ವಲಗೊಳಿಸುತ್ತದೆ : ಅಧ್ಯಕ್ಷೆ ಕವಿತಾ ತಿಮ್ಮಾಪುರ
ಜಮಖಂಡಿ 15 : ಚಿತ್ರಕಲಾ ಕ್ಷೇತ್ರಕ್ಕೆ ಬೇಕಾದ ಅವಕಾಶಗಳು ಮತ್ತು ವೇದಿಕೆಗಳು ಹಿಂದಿನ ಕಾಲದ ಕಡಿಮೆ ಇದ್ದವು. ಆದರೆ ಇಂದಿನ ಪೀಳಿಗೆಯ ವಿದ್ಯಾರ್ಥಿಗಳು ನಿತ್ಯ ಹೊಸ ಹೊಸ ಪ್ರಯೋಗ ಮಾಡುತ್ತಿದ್ದಾರೆ. ಅವರು ಚಿತ್ರಕಲೆಗಳಿಗೆ ಜೀವ ತುಂಬುವಂತೆ ನಿಖರ ಪರಿಶ್ರಮ ಪಡುತ್ತಿದ್ದಾರೆ. ಅವರ ಈ ದೃಢ ಸಂಕಲ್ಪ ಮತ್ತು ಪರಿಶ್ರಮ ಅವರ ಭವಿಷ್ಯವನ್ನು ಖಂಡಿತವಾಗಿ ಉಜ್ವಲಗೊಳಿಸುತ್ತದೆ ಎಂದು ಜಯ ವಿಜಯ ಮಹಿಳಾ ವಿವಿಧೋದ್ದೇಶ ಶೈಕ್ಷಣಿಕ ಮಹಾ ಸಂಸ್ಥೆಯ ಅಧ್ಯಕ್ಷೆ ಕವಿತಾ ತಿಮ್ಮಾಪುರ ಹೇಳಿದರು.ನಗರದ ಮಹೇಶ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಉಪನ್ಯಾಸಕ ಎಚ್,ಎಂ, ವಿಶ್ವನಾಥ ಅವರ ಸೇವಾ ನಿವೃತ್ತಿ ನಿಮಿತ್ತ ಚಿತ್ರಕಲಾ ಶಿಬಿರ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಚಿತ್ರಕಲೆಯ ಪ್ರತಿ ಚಿತ್ರವೂ ಒಂದು ಕಥೆ ಹೇಳುತ್ತದೆ. ಚಿತ್ರ ನೋಡುತ್ತಿದ್ದಂತೆಯೇ ಅದರ ಹಿಂದಿನ ಭಾವನೆ, ಸಂವೇದನೆ ಕಲಾವಿದನ ಮನೋಭಾವ ಅರ್ಥವಾಗುತ್ತದೆ. ಇಂತಹ ಕಲೆಗಳು ಸಮಾಜದ ಸೌಂದರ್ಯ ಹೆಚ್ಚಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಉಪನ್ಯಾಸಕ ಎಚ್,ಎಂ, ವಿಶ್ವನಾಥ ಸೇವಾ ನಿವೃತ್ತ ಸನ್ಮಾನ ಸ್ವೀಕರಿಸಿ ಮಾತನಾಡಿ, ಮಹೇಶ ಚಿತ್ರಕಲಾ ಮಹಾವಿದ್ಯಾಲಯದಲ್ಲಿ 37 ವರ್ಷಗಳಿಂದ ಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದೇನೆ ಎನ್ನುವುದು ನನಗೆ ಹೆಮ್ಮೆಯ ವಿಷಯ. ಚಿತ್ರಕಲೆಯ ಮೂಲಕ ಅನೇಕ ವಿದ್ಯಾರ್ಥಿಗಳ ಜೀವನ ರೂಪುಗೊಂಡಿರುವುದನ್ನು ನೋಡುವುದು ನನಗೆ ಸಂತೋಷ ತಂದಿದೆ ಎಂದರು.
ಮುಧೋಳ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಮಾಜಿ ಅಧ್ಯಕ್ಷ ಶಿವಾನಂದ ಕತ್ತಿ, ನಿವೃತ್ತ ಪ್ರಾಚಾರ್ಯ ಬಾಬು ಜತ್ಕರ ಹಾಗೂ ಹಿರಿಯ ನ್ಯಾಯವಾದಿ ಬಿ,ಸಿ, ಹಿರೇಮಠ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಪ್ರಾಧ್ಯಾಪಕ ಕೆ,ಬಿ, ರಾಠೋಡ, ಜಿ,ವಿ, ಹಂಪಣ್ಣವರ, ಬಿ,ಜಿ, ಚೌಧರಿ ಹಾಗೂ ವಿದ್ಯಾರ್ಥಿಗಳು, ಕಲಾಪ್ರೇಮಿಗಳು ಸೇರಿದಂತೆ ಅನೇಕರು ಇದ್ದರು.
.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 