ಜಾನಪದ ಕಲೆ ಉಳಿಸಿ ಬೆಳೆಸಲು ಶ್ರಮಿಸಿ

ಜಾನಪದ ಕಲೆ ಉಳಿಸಿ ಬೆಳೆಸಲು ಶ್ರಮಿಸಿ  Strive to preserve and nurture folk art


ಮುುದ್ದೇಬಿಹಾಳ ಆ. 22: ಗ್ರಾಮೀಣ ಭಾಗದಲ್ಲಿ ಅಡಗಿರುವ ಜಾನಪದ ಕಲೆಯಿಂದಲೇ ಭಾರತದ ಸಂಸ್ಕೃತಿ ಉಳಿದಿದೆ. ಕೇವಲ ಅಕ್ಷರಸ್ಥರಿಂದ ಮಾತ್ರ ಸಂಸ್ಕೃತಿ ಉಳಿಯುವುದಿಲ್ಲ. ನಮ್ಮ ನಾಡಹಬ್ಬ ದಸರಾ ಉತ್ಸವವನ್ನು ಜಗತ್ತೇ ತಿರುಗಿ ನೋಡುವಂತಾಗಿರುವುದು ಇದಕ್ಕೆ ಉತ್ತಮ ಉದಾಹರಣೆ ಎಂದು ಕುಂಟೋಜಿ ಸಂಸ್ಥಾನ ಹಿರೇಮಠದ ಚನ್ನವೀರ ಶಿವಾಚಾರ್ಯರು ಹೇಳಿದರು.  

ಪಟ್ಟಣದ ಬೆಂಗಳೂರು ಬೇಕರಿ ಸಭಾಭವನದಲ್ಲಿ ಶನಿವಾರ ನಡೆದ ಕರ್ನಾಟಕ ಜಾನಪದ ಪರಿಷತ್ ತಾಲೂಕು ಘಟಕದ ಅಧ್ಯಕ್ಷರು ಹಾಗೂ ಸದಸ್ಯರ ಪದಗ್ರಹಣ, ‘ಜಾನಪದ ಚರಕ’ ಕೃತಿ ಲೋಕಾರೆ​‍್ಣ ಹಾಗೂ ಸಾಧಕರ ಸನ್ಮಾನ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.  

ಗ್ರಾಮೀಣ ಭಾಗದಲ್ಲಿ ಮರೆಯಾಗುತ್ತಿರುವ ಜಾನಪದ ಕಲಾವಿದರನ್ನು ಗುರುತಿಸಿ, ಅವರಿಗೆ ಸೂಕ್ತ ವೇದಿಕೆ ಕಲ್ಪಿಸುವ ಮೂಲಕ ಸಂಸ್ಕೃತಿಯನ್ನು ಬೆಳೆಸಬೇಕು. ಮುಂದಿನ ಪೀಳಿಗೆಗೂ ಜಾನಪದ ಪರಂಪರೆಯನ್ನು ಉಳಿಸಿ ಕೊಂಡೊಯ್ಯಬೇಕು ಎಂದರು.  

ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಿ.ಎನ್‌. ಪಾಟೀಲ ಮಾತನಾಡಿ, ರಾಜ್ಯದಲ್ಲಿ ಜಾನಪದ ಕಲೆ ಮತ್ತು ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಪರಿಷತ್ತು ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು. ಜಾನಪದ ಸಂಸ್ಕೃತಿಯ ಉಳಿವಿಗಾಗಿ ಸರ್ಕಾರವೂ ವಿವಿಧ ಸೌಲಭ್ಯಗಳನ್ನು ಒದಗಿಸಿದೆ ಎಂದು ತಿಳಿಸಿದರು.  

ಕಾರ್ಯಕ್ರಮದಲ್ಲಿ ‘ಜಾನಪದ ಚರಕ’ ಕೃತಿಯನ್ನು ಎಸ್ಜಿವಿಸಿ ವಿದ್ಯಾಪ್ರಸಾರಕ ವಿಶ್ವನಿಧಿ ಕಾರ್ಯದರ್ಶಿ ಅಶೋಕ ತಡಸದ ಲೋಕಾರೆ​‍್ಣ ಮಾಡಿದರು. ವಿವಿಧ ಗ್ರಾಮಗಳ ಜಾನಪದ ಕಲಾವಿದರನ್ನು ಸನ್ಮಾನಿಸಲಾಯಿತು. ಜಾನಪದ ಕಲಾವಿದೆ ಸುಪ್ರೀತಾ ಗೋನಾಳ ಅವರು ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರ ಸಾಧನೆಯನ್ನು ಜಾನಪದ ಹಾಡಿನ ಮೂಲಕ ಪ್ರಸ್ತುತಪಡಿಸಿ ಗಮನ ಸೆಳೆದರು.  

ಕಾರ್ಯಕ್ರಮದಲ್ಲಿ ಕಮರಾಜ ಬಿರಾದಾರ, ಕೆ.ವೈ. ಬಿರಾದಾರ, ಎ.ಆರ್‌. ಮುಲ್ಲಾ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಹುಲೂರು, ಪೀರಾಪುರ, ಕಾಶಿನಕುಂಟಿ, ಮಡಿಕೇಶ್ವರ, ಕೋಳೂರು, ಅಬ್ಬಿಹಾಳ, ಹರೇಂದ್ರಾಳ, ದೇವರ ಹುಲಗಬಾಳ, ಅಮರಗೋಳ, ಕುಂಟೋಜಿ, ಗೋನಾಳ ಹಾಗೂ ಬಿದರಕುಂದಿ ಗ್ರಾಮದ ಜಾನಪದ ಕಲಾವಿದರನ್ನು ಸನ್ಮಾನಿಸಲಾಯಿತು.