ಬೀದಿಬದಿ ವ್ಯಾಪಾರಸ್ಥರಿಂದ ಜೈಲಿಗೆ ಬೀಗ ಜಡಿದು ಪ್ರತಿಭಟನೆ

ಬೀದಿಬದಿ ವ್ಯಾಪಾರಸ್ಥರಿಂದ ಜೈಲಿಗೆ ಬೀಗ ಜಡಿದು ಪ್ರತಿಭಟನೆ Street vendors lock down jail in protest

ಲೋಕದರ್ಶನ ವರದಿ 

ಜಮಖಂಡಿ 21: ನಗರದ ಹಳೇ ಜೈಲಿಗೆ ಬೀದಿಬದಿ ವ್ಯಾಪಾರಸ್ಥರು ದಿಢೀರನೆ ಬೆಳಗಿನ ಜಾವದಲ್ಲಿ ಮುಖ್ಯ ದ್ವಾರಬಾಗಿಲಗೆ ಬೀಗ ಜಡಿದು ಪ್ರತಿಭಟನೆಯನ್ನು ನಡೆಸಿದ ಪ್ರಸಂಗ ಜರುಗಿದೆ. ನಗರದ ರಸ್ತೆ ಬದಿಯಲ್ಲಿ ಕುಳಿತು ವ್ಯಾಪರವನ್ನು ಬೀದಿಬದಿ ವ್ಯಾಪಾರಸ್ಥರಿಂದ ಟ್ರಾಫ್‌ಕ್ ಸಮಸ್ಯೆ ಉಂಟಾಗುತ್ತಿತ್ತು. ಇದರಿಂದ ಎಲ್ಲ ಬೀದಿಬದಿ ವ್ಯಾಪಾರಸ್ಥರನ್ನು ಬಂದ ಮಾಡಿಸಿದ ಅಧಿಕಾರಿಗಳು. ಎಲ್ಲ ತರಕಾರಿ ಹಾಗೂ ಹಣ್ಣುಹಂಪಲಗಳ ವ್ಯಾಪಾರಿಗಳಿಗೆ ಹಳೆ ಜೈಲಿನಲ್ಲಿ ಸ್ಥಳಾಂತರಿಸಿದರು. 

ನಗರಸಭೆಯವರು ಎಲ್ಲರಿಗೂ ಪ್ರತ್ಯಕವಾದ ಸ್ಥಳವನ್ನು ನಿಗದಿಪಡಿಸಲಾಗಿತ್ತು. ಆದರೆ ಕೆಲವಂದಿಷ್ಟು ವ್ಯಾಪಾರಸ್ಥರು ಬೇಕಾಬಿಟ್ಟಿಯಾಗಿ ತಳುವ ಗಾಡಿಗಳನ್ನು ಪಾರ್ಕಿಂಗ್ ಸ್ಥಳಗಳಲ್ಲಿ ಹಚ್ಚುವ ಕಾರಣ ಸಾರ್ವಜನಿಕರಿಗೆ ಟ್ರಾಫಿಕ್ ಸಮಸ್ಯೆ ಉದ್ಭವಿಸಿದ ಹಿನ್ನೆಲೆ ನಗರಸಭೆಯ ಸಿಬಂದಿಗಳು ತಳುವ ಗಾಡಿಗಳನ್ನು ನಗರಸಭೆಯ ಕಚೇರಿಗೆ ತೆಗೆದುಕೊಂಡು ಸಂದರ್ಭದಲ್ಲಿ ಎಲ್ಲ ಬೀದಿಬದಿ ವ್ಯಾಪಾರಸ್ಥರು ದಿಢೀರನೆ ಮುಖ್ಯ ದ್ವಾರ ಬಾಗಿಲಿಗೆ ಬೀಗ್ ಜಡಿದು ಪ್ರತಿಭಟನೆಯನ್ನು ನಡೆಸಿದ್ದಾರೆ. ಸ್ಥಳಕ್ಕೆ ಪೋಲಿಸರು ಆಗಮಿಸಿ. ಎಲ್ಲ ಬೀದಿಬದಿ ವ್ಯಾಪಾರಸ್ಥರಿಗೆ ಟ್ರಾಫಿಕ್ ಸಮಸ್ಯೆದ ಬಗ್ಗೆ ತಿಳಿಹೇಳಿದ ಬಳಿಕ ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ. ಬೀದಿಬದಿ ವ್ಯಾಪಾರಸ್ಥರ ಪ್ರತಿಭಟನೆಯಿಂದ ತರಕಾರಿ ಹಾಗೂ ಹಣ್ಣುಹಂಪಲಗಳ ಖರೀದಿಸಲು ಬಂದ ಸಾರ್ವಜನಿಕರು ಕೆಲ ಸಮಯ ಪರದಾಡುವ ಸ್ಥಿತಿ ಉಂಟಾಯಿತು.