ಕಥೆ,ಕವನಗಳು ಮನುಷ್ಯ ಬದುಕಿನ ಹಿತವನ್ನು ಬಯಸುತ್ತವೆ. ಬಸವರಾಜ ವ್ಹಿ. ಹಿರೇಮಠ
Stories and poems seek the welfare of human life. Basavaraja V. Hiremath
ಲೋಕದರ್ಶನ ವರದಿ
ಗೋಕಾಕ 17 :ಅಧ್ಯಯನದ ಅನುಭವದಲ್ಲಿ ಹುಟ್ಟಿದ ಸಾಹಿತ್ಯದೊಳಗಿನ ಕಥೆ ಕಾವ್ಯಗಳು ಮನುಷ್ಯ ಬದುಕಿನ ಹಿತವನ್ನು ಬಯಸುತ್ತವೆೆ. ಎಂದು ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಉಪನಿರ್ದೇಶಕ ಬಸವರಾಜ ವ್ಹಿ. ಹಿರೇಮಠ ಹೇಳಿದರು.
ಜಾನಪದ ಕಲೆ,ಸಾಹಿತ್ಯ ಸಾಂಸ್ಕೃತಿಕ ಕೂಟದ ಗೋಕಾವಿ ಗೆಳೆಯರ ಬಳಗ ನಗರದ ಕೆ.ಎಲ್.ಇ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡ ಕಥೀ ಕಥೀ..ಕಾರಣ ವಿನೂತನ ಸಾಹಿತ್ಯ ಚಿಂತನ ಮಂಥನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ಇಂದಿನ ಮಕ್ಕಳು ಮತ್ತು ಯುವ ಜನಾಂಗವನ್ನು ಸಾಹಿತ್ಯದ ಕಡೆಗೆ ಸೆಳೆಯಬೇಕಾದ ಅಗತ್ಯವಿದೆ ಎಂದರು.
ಮಡಿಕೇರಿಯ ಜವಾಹರ ನವೋದಯ ವಿದ್ಯಾಲಯದ ಕನ್ನಡ ಉಪನ್ಯಾಸಕ ಹಾಗೂ ಸಾಹಿತಿ ಮಾರುತಿ ದಾಸನ್ನವರ ಕಥೆ ಮತ್ತು ಕಾವ್ಯದ ಕುರಿತು ಉಪನ್ಯಾಸ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಅಕ್ಕಿ ಆದಿಕವಿ ಪಂಪ, ರನ್ನ ಬರೆದ ಹಳಗನ್ನಡ ಸಾಹಿತ್ಯವನ್ನು ಮರು ಓದು ಮತ್ತು ಚಿಂತನೆ ಮಾಡುವ ಕಾರ್ಯಗಳಾಗಲಿ ಎಂದು ಅಭಿಪ್ರಾಯಿಸಿದರು.
ಕಥೆಗಾರ ಸುರೇಶ ಮುದ್ದಾರ. ಕವಿ ಈಶ್ವರ ಮಮದಾಪೂರ, ರಜನಿ ಜೀರಗ್ಯಾಳ ಚಿಂತನೆ ಮಾತನಾಡಿದರು. ಕಸಾಪ ತಾಲೂಕಾಧ್ಯಕ್ಷ ಭಾರತಿ ಮದಬಾವಿ, ಕೌಜಲಗಿ ಹಿರಿಯ ಸಾಹಿತಿ ಪ್ರಕಾಶ ಕೋಟಿನತೋಟ, ವಾಗ್ಮಿ ರಾಮಚಂದ್ರ ಕಾಕಡೆ, ಬಸವಜ್ಯೋತಿ ಐಟಿಐ ಕಾಲೇಜ ಚೇರಮನ್ ಅಶೋಕ ಲಗಮಪ್ಪಗೋಳ,ಹಿರಿಯ ಸಾಹಿತಿ ಎಸ್ ಆರ್ ನಲವಡೆ, ಕವಿ ಶಿಕ್ಷಕ ಆನಂದ ಮಾಳವದೆ ಉಪಸ್ಥಿತರಿದ್ದರು.
ಸಾಹಿತಿ ಜಯಾನಂದ ಮಾದರ ಪ್ರಾಸ್ತಾವಿಕ ಮಾತನಾಡಿದರು. ವಿಶ್ವದಾಖಲೆ ಕಲಾವಿದ ಜಿ.ಕೆ.ಕಾಡೇಶಕುಮಾರ ಪ್ರಾರ್ಥಿಸಿದರು, ಸಾಹಿತಿ ವಿದ್ಯಾ ರೆಡ್ಡಿ ಸ್ವಾಗತಿಸಿದರು. ಯೋಗ ಶಿಕ್ಷಕ ಆನಂದ ಸೋರಗಾಂವಿ ನಿರೂಪಿಸಿ ವಂದಿಸಿದರು.
ಮೈದುಂಬಿ ಹರಿಯುತ್ತಿರುವ ಘಟಪ್ರಭಾ ನದಿ: ಭರ್ತಿ ಹಂತದಲ್ಲಿ ಹಿಡಕಲ್ ಜಲಾಶಯ
ಎಚ್ಚರ ಅನಾಹುತಕ್ಕೆ ಕೈ ಮಾಡಿ ಕರೆಯುತ್ತಿದೆ: ರಸ್ತೆಯ ಭೂಗತ ವಿದ್ಯುತ್ ತಂತಿಯಿಂದ ಹೊರಬರುತ್ತಿದೆ ಬೆಂಕಿ ಕಿಡಿ-ಹೊಗೆ
ಹುಕ್ಕೇರಿ ತಾಲೂಕಿನ ಅತಿ ಹಿರಿಯ 107 ವಯಸ್ಸಿನ ನಾಗರಿಕ ನಿಜಪ್ಪ ಜಾಡರ್ ವಿಧಿವಶ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ 