ನಾಯಕ ಸುಭೇದಾರ ದಿ ಬಸವರಾಜ ಕಾಡಪ್ಪಾ ಚೌಗಲಾ ಪುತ್ಥಳಿ ಅನಾವರಣ
Statue of Nayaka Subhedar Basavaraja Kadappa Chowgala unveiled
ಹುಕ್ಕೇರಿ 26: ತಾಲೂಕಿನ ಯರಗಟ್ಟಿ ಗ್ರಾಮದಲ್ಲಿ ಭಾರತಾಂಬೆಯ ಹೆಮ್ಮೆಯ ಯೋಧರಾದ ನಾಯಕ ಸುಭೇದಾರ ದಿ. ಬಸವರಾಜ ಕಾಡಪ್ಪಾ ಚೌಗಲಾ ಅವರ ಪುತ್ಥಳಿ ಅನಾವರಣ ಸಮಾರಂಭ ಭಾವಪೂರ್ಣವಾಗಿ ಜರುಗಿತು. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರು 31-01-2025 ರಂದು ಹುತಾತ್ಮರಾಗಿದ್ದು, ಅವರ ಸ್ಮರಣಾರ್ಥವಾಗಿ ಗ್ರಾಮದಲ್ಲಿ ಪುತ್ಥಳಿ ನಿರ್ಮಿಸಲಾಗಿದೆ.ಹುಕ್ಕೇರಿ ಅವುಜಿಕರ ಮಠದ ಅಭಿನವ ಮಂಜುನಾಥ ಮಹಾರಾಜರು ಮಾತನಾಡಿ, ಜಾತಿ-ಮತ ಭೇದವಿಲ್ಲದೆ ಎಲ್ಲರಲ್ಲೂ ಸಮಾನತೆ ಕಾಣುವ ಯೋಧ ಮತ್ತು ರೈತ ದೇಶದ ಕಣ್ಣು ಎಂದರು.
ಹುತಾತ್ಮ ಬಸವರಾಜ ಚೌಗಲಾ ಅವರು ದೇಶ ಸೇವೆಯ ಮೂಲಕ ತಮ್ಮ ಜೀವನವನ್ನು ಸಾರ್ಥಕಗೊಳಿಸಿದ್ದಾರೆ ಎಂದು ಹೇಳಿದರು.ದಿವ್ಯ ಸಾನಿಧ್ಯ ವಹಿಸಿದ್ದ ಸುರಗೀಶ್ವರ ಸಂಸ್ಥಾನ ಮಠದ ಶ್ರೀ ಗುರುಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಇಂತಹ ಪುತ್ಥಳಿ ನಿರ್ಮಾಣವು ಇತರರಿಗೆ ಪ್ರೇರಣೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.ಕಾರ್ಯಕ್ರಮದಲ್ಲಿ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕರಾದ ವಿನಯಗೌಡ ಪಾಟೀಲ, ಪೃಥ್ವಿ ಕತ್ತಿ ಸೇರಿದಂತೆ ಕುಟುಂಬ ಸದಸ್ಯರಾದ ಕಾಡಪ್ಪಾ ಬಸವಂತಪ್ಪಾ ಚೌಗಲಾ, ಕಾಶೀಬಾಯಿ, ರಾಜೇಶ್ವರಿ, ರವೀಂದ್ರ, ಸುಮಿತ್ರಾ, ಶಶಿಕಾಂತ ಚೌಗಲಾ ಉಪಸ್ಥಿತರಿದ್ದರು.
ಜೊತೆಗೆ ಹುಕ್ಕೇರಿ ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಸಂಸ್ಥಾಪಕ ಮಹಾದೇವ ಬನ್ನಕ್ಕಗೋಳ, ಉಪಾಧ್ಯಕ್ಷ ಪುಂಡಲೀಕ ಕೋಟಿನತೋಟ ಕೆಂಪಣ್ಣಾ ಚೌಗಲಾ ಮಾಜಿ ಸೈನಿಕರು ,ಶಶಿಕಾಂತ ಮನಸ ಮಾಜಿ ಸೈನಿಕರು, ಹಾಗೂ ಹುಕ್ಕೇರಿ ಹಾಲಿ ಮತ್ತು ಮಾಜಿ ಸೈನಿಕರು, ಬೆಳಗಾವಿ ಜಿಲ್ಲೆಯ ಮಾಜಿ ಸೈನಿಕರು, ಮತ್ತು ಗ್ರಾಮಸ್ಥರುಹಾಗೂ ಅನೇಕ ಮಾಜಿ ಸೈನಿಕರು, ಯರಗಟ್ಟಿ ಮತ್ತು ಇಂಗಳಿ ಗ್ರಾಮದ ಗಣ್ಯರು ಭಾಗವಹಿಸಿದ್ದರು.ಕಾರ್ಯಕ್ರಮವನ್ನು ಶಿವಾನಂದ ನೊಗನಿಹಾಳ ಸ್ವಾಗತಿಸಿದರು. ಕೆಂಪಣ್ಣಾ ಚೌಗಲಾ ಮಾಜಿ ಸೈನಿಕರುನಿರೂಪಣೆ ನಡೆಸಿದರು.
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 