ಮಿರಜ್‌ನ ಅರೀನ್ ಆಸ್ಪತ್ರೆಯಲ್ಲಿ ಶೀಘ್ರ ಅತ್ಯಾಧುನಿಕ ಸೌಲಭ್ಯಗಳು ಪ್ರಾರಂಭ: ಡಾ. ದೀಪಾಲಿ ಜಾಧವ
State-of-the-art facilities to be launched soon at Areen Hospital in Miraj: Dr. Deepali Jadhav
ಕಾಗವಾಡ, 20 ; ಮಹಾರಾಷ್ಟ್ರದ ಮಿರಜ್ ಪಟ್ಟಣದ ಅರೀನ್ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯು ಆಗಷ್ಟ 15 ಕ್ಕೆ ನಾಲ್ಕು ವರ್ಷಗಳನ್ನು ಪೂರೈಸಿ, ಐದನೇ ವರ್ಷದಲ್ಲಿ ಪಾದಾರೆ್ಣ ಮಾಡಿದ್ದು, ಅಲ್ಪ ಸಮಯದಲ್ಲಿಯೇ ಕರ್ನಾಟಕ ಮತ್ತು ಮಹಾರಾಷ್ಟ್ರದ ರೋಗಿಗಳ ಪಾಲಿಗೆ ಆಶಾಕಿರಣವಾಗಿ ಹೊಮ್ಮಿದೆ. ಶೀಘ್ರದಲ್ಲಿಯೇ ಅತ್ಯಧುನಿಕ ಸೌಲಭ್ಯಗಳಾದ ಸಿಟಿ-ಸ್ಯಾನ್, 2ಡಿ-ಇಕೋ, ಡೈಯಾಲಿಸಿಸ್ ವಿಭಾಗಳನ್ನು ಪ್ರಾರಂಭಿಸಲಾಗುವುದು ಎಂದು ಆಸ್ಪತ್ರೆಯ ವೈದ್ಯೆ ಡಾ. ದೀಪಾಲಿ ಜಾಧವ ತಿಳಿಸಿದ್ದಾರೆ.
ಅವರು, ಬುಧವಾರ ದಿ. 20 ರಂದು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು. ಅಲ್ಪ ಸಮಯದಲ್ಲಯೇ ಕರ್ನಾಟಕ ಮತ್ತು ಮಹಾರಾಷ್ಟ್ರದ ರೋಗಿಗಳ ಪಾಲಿಗೆ ಹೊಸ ಆಶಾಕಿರಣವಾಗಿ ಹೊಮ್ಮಿರುವ ನಮ್ಮ ಆಸ್ಪತ್ರೆಯಲ್ಲಿ ಈಗಾಗಲೇ ಸುಸಜ್ಜಿತ ಐಸಿಯು, ವೆಂಟಿಲೇಟರ್, ಆಪರೇಶನ್ ಥೇಟರ್, ನ್ಯೂರೋ ಮತ್ತು ಮೆದುಳು ವಿಭಾಗ, ಅರ್ಥೋಪಿಡಿಕ್ ವಿಭಾಗ, ಅಕ್ಸಿಡೆಂಟ್ ಮತ್ತು ಟ್ರಾಮ್‌ಕೆರ್ ಸೆಂಟರ್, ಹೊಟ್ಟೆ ಮತ್ತು ಕರಳು ರೋಗ ವಿಭಾಗ, ಶ್ವಾಸಕೋಶ ಮತ್ತು ಎದೆ ರೋಗ ವಿಭಾಗ, ಮಧುಮೇಹ ವಿಭಾಗ, ಮೂತ್ರ ರೋಗ ವಿಭಾಗಗಳನ್ನು ಹೊಂದಿದ್ದು, ಆಸ್ಪತ್ರೆಯಲ್ಲಿ ಮೆದುಳು ಮತ್ತು ಮೊಣಕಾಲದ ಶಸ್ತ್ರಚಿಕಿತ್ಸೆ, ಗರ್ಭಾಶಯದ ಎಲ್ಲ ಪ್ರಕಾರದ ಶಸ್ತ್ರಚಿಕಿತ್ಸೆ, ಮೂಲವಾಧ್ಯಿ, ಭುಗೇಂದ್ರ ಫಿಶರ್ ಶಸ್ತ್ರಚಿಕಿತ್ಸೆ, ಕಾನ್ಸರ್ ಸಹಿತ ಎಲ್ಲ ಗಂಟುಗಳ ತೆಗೆಯುವ ಶಸ್ತ್ರಚಿಕಿತ್ಸೆ, ಮೂತ್ರಪಿಂಡ ಹರಳು, ಪ್ಲಾಸ್ಟಿಕ್ ಸರ್ಜರಿ, ಹೇರ್ ಟ್ರಾನ್ಸಪ್ಲಾಂಟ್, ಬಂಜೆತನ ಪಾರ್ಶ್ವವಾಯು, ಮೆದುಳಿನ ರಕ್ತಸ್ರಾವದ ಉಪಚಾರಗಳು ಜೊತೆಗೆ ವಿಶೇಷವಾಗಿ ಡೈಯಾಬೆಟಿಕ್ ತಜ್ಞ ಡಾ. ಸುನೀಲ ಕೊಲ್ಹೆ ಇವರ ನೇತೃತ್ವದಲ್ಲಿ ಡೈಯಾಬೆಟಿಕ್ ಫುಟ್‌ಕೆರ್ ಉಪಚಾರ ಕೂಡಾ ಲಭ್ಯವಿದೆ ಎಂದು ಅವರು ತಿಳಿಸಿದ್ದಾರೆ.
ಇದಲ್ಲದೇ ನಮ್ಮ ಆಸ್ಪತ್ರೆಯಲ್ಲಿ ಸರ್ಕಾರದ ಯೋಜನೆಗಳು ಮತ್ತು ಖಾಸಗಿ ಆರೋಗ್ಯ ವಿಮೆಯ ಕ್ಯಾಶಲೆಸ್ ಚಿಕಿತ್ಸೆಗಳು ಲಭ್ಯವಾಗಿರುತ್ತವೆ. ಈ ವೇಳೆ ಆಸ್ಪತ್ರೆಯ ಇತರ ವೈದ್ಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 