ಹಾಸ್ಟೆಲ್ ವಿದ್ಯಾರ್ಥಿಗಳ ವಿವಿಧ ಬೇಡಿಕೆಗಾಗಿ ಹಾವೇರಿಯಲ್ಲಿ ರಾಜ್ಯ ಮಟ್ಟದ ಸಮಾವೇಶ - ಬಸವರಾಜ

ಹಾಸ್ಟೆಲ್ ವಿದ್ಯಾರ್ಥಿಗಳ ವಿವಿಧ ಬೇಡಿಕೆಗಾಗಿ ಹಾವೇರಿಯಲ್ಲಿ ರಾಜ್ಯ ಮಟ್ಟದ ಸಮಾವೇಶ - ಬಸವರಾಜ State level conference in Haveri for various demands of hostel students - Basavaraj

ಹಾಸ್ಟೆಲ್ ವಿದ್ಯಾರ್ಥಿಗಳ ವಿವಿಧ ಬೇಡಿಕೆಗಾಗಿ ಹಾವೇರಿಯಲ್ಲಿ ರಾಜ್ಯ ಮಟ್ಟದ ಸಮಾವೇಶ - ಬಸವರಾಜ 

ರಾಣೇಬೆನ್ನೂರ 05 ಹಾಸ್ಟೆಲ್ ಹಾಗೂ ವಸತಿ ಶಾಲಾ-ಕಾಲೇಜು ವಿದ್ಯಾರ್ಥಿಗಳ ಆಹಾರ ಭತ್ಯೆ ಹೆಚ್ಚಳಕ್ಕಾಗಿ, ಖಾಲಿ ಇರುವ ವಾರ್ಡನ್, ಪ್ರಾಂಶುಪಾಲರು, ಸಿಬ್ಬಂದಿ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ, ವಸತಿ ನಿಲಯಗಳಿಗೆ ಸ್ವಂತಕಟ್ಟಡ, ಕನಿಷ್ಠ ಮೂಲಭೂತ ಸೌಕರ್ಯಗಳಿಗಾಗಿ ಆಗ್ರಹಿಸಿ ಹಾವೇರಿಯಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಸಮಾವೇಶ ನಡೆಯಲಿದೆ ಎಂದು ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಬಸವರಾಜಎಸ್ ಹೇಳಿದರು. ಎಸ್‌ಎಫ್‌ಐ ರಾಜ್ಯ ಮಟ್ಟದ ಹಾಸ್ಟೆಲ್ ವಿದ್ಯಾರ್ಥಿಗಳ ಸಮಾವೇಶದ ಲೋಗೋವನ್ನು ಶುಕ್ರವಾರ ರಾಣೇಬೆನ್ನೂರಿನ ಪರೀವೀಕ್ಷಣಾ ಮಂದಿರದಲ್ಲಿ ಬಿಡುಗಡೆ ಮಾಡಿ ಮಾತನಾಡಿದ ಅವರು, 4-5 ಅಕ್ಟೋಬರ್ 2025 ಎರಡು ದಿನಗಳ ಕಾಲ ನಡೆಯುವ ಸಮಾವೇಶದಲ್ಲಿ ರಾಜ್ಯದಲ್ಲಿರುವ ಹಾಸ್ಟೆಲ್ ವಿದ್ಯಾರ್ಥಿಗಳ ಸಮಸ್ಯೆಗಳನ್ನು, ಮೂಲಸೌಕರ್ಯಗಳ ಕುರಿತು ಚರ್ಚಿಸಲಾಗುವುದು. ಈಗಾಗಲೇ ರಾಜ್ಯದಲ್ಲಿರುವ ಎಸ್ಸಿ 3.5ಲಕ್ಷ ವಿದ್ಯಾರ್ಥಿಗಳು ಪೈಕಿ 2400 ವಸತಿ ನಿಲಯಗಳು, ಎಸ್‌.ಟಿ 1.5ಲಕ್ಷ ವಿದ್ಯಾರ್ಥಿಗಳು ಪೈಕಿ 1200 ವಸತಿ ನಿಲಯಗಳು, ಒಬಿಸಿ 2.5 ವಿದ್ಯಾರ್ಥಿಗಳು ಪೈಕಿ 2500 ನಿಲಯಗಳು ಒಟ್ಟು 7.5 ವಿದ್ಯಾರ್ಥಿಗಳು ಮತ್ತು 6000ಕ್ಕೂ ಅಧಿಕ ನಿಲಯಗಳಿವೆ.ನಿಲಯಗಳಿಗೆ ಮೂಲಭೂತ ಸೌಕರ್ಯಕಲ್ಪಿಸಲು ಸಾಧ್ಯವಾಗುತ್ತಿಲ್ಲ. ನೇಮಕಾತಿಗಳು ವಿಳಂಬದ ಕಾರಣದಿಂದಾಗಿ ನಿಲಯ ಪಾಲಕರ, ಸ್ವಚ್ಚತಾ ಸಿಬ್ಬಂದಿ ಕೊರತೆ ಹೆಚ್ಚಿದೆ.   

ಟೆಂಡರ್ ಗಳ ಮೂಲಕ ಆಹಾರ ಸರಬರಾಜು ಮಾಡಲಾಗುತ್ತಿದೆ. ವಿದ್ಯಾರ್ಥಿಗಳನ್ನು ಜೈಲಿನಲ್ಲಿರುವ ಕೈದಿಗಳಿಗಿಂತ ಕಡೆಯಾಗಿ ಕಾಣಲಾಗುತ್ತದೆ. ಎಷ್ಟೋ ವಿದ್ಯಾರ್ಥಿಗಳು ವಸತಿ ನಿಲಯವನ್ನು ಬಿಡುವಂತಾಗಿದೆ. ಅರ್ಜಿ ಹಾಕಿದಎಲ್ಲಾ ವಿದ್ಯಾರ್ಥಿಗಳಿಗೆ ವಸತಿ ನಿಲಯವನ್ನು ಕಲ್ಪಿಸಬೇಕು, ಆದರೆ ಹಾವೇರಿ, ಧಾರವಾಡ ಹುಬ್ಬಳ್ಳಿ, ಬೆಂಗಳೂರಿನಂತಹ ನಗರಗಳಲ್ಲಿ ಮೆರಿಟ್ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನೀಡಲಾಗುತ್ತದೆ.ಇದನ್ನು ಸರ್ಕಾರ ಕೂಡಲೇ ಕೈಬಿಡಬೇಕು. ಪ್ರಾರಂಭದ ಹಂತದಲ್ಲಿರುವ 120 ಹಾಸ್ಟೆಲ್ ಗಳನ್ನು ಕೂಡಲೇ ತೆರೆಯಬೇಕು. ಈ ಶೈಕ್ಷಣಿಕ ಸಾಲಿನಲ್ಲಿ 10 ಹಾಸ್ಟೆಲ್ ಗಳನ್ನು ಕೂಡಲೆ ತೆರೆದು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದುಎಸ್‌ಎಫ್‌ಐಒತ್ತಾಯಿಸುತ್ತದೆ ಎಂದರು. ಎಸ್‌ಎಫ್‌ಐ ಜಿಲ್ಲಾ ಮುಖಂಡ ಕೃಷ್ಣ ನಾಯಕ ಮಾತನಾಡಿ, ಉತ್ತಮ ಶಿಕ್ಷಣಕ್ಕಾಗಿ ಹಾಸ್ಟೆಲ್ ಪ್ರಮುಖ ಪತ್ರವನ್ನು ವಹಿಸಿವೆ ಆದರಿಂದ ಎಸ್‌ಎಫ್‌ಐ ರಾಜ್ಯ ಮಟ್ಟದ ಹಾಸ್ಟೆಲ್ ವಿದ್ಯಾರ್ಥಿಗಳ ಸಮಾವೇಶದಲ್ಲಿ ಇಡೀ ರಾಜ್ಯದ 200 ಕ್ಕೂ ಅಧಿಕ ವಿದ್ಯಾರ್ಥಿ ಪ್ರತಿನಿಧಿಗಳು ಪಾಲ್ಗೊಂಡು ಹಾಸ್ಟೆಲ್ ವ್ಯವಸ್ಥೆಯ ಕುರಿತು ಸಮಗ್ರ ಚರ್ಚೆಗಳು, ಉಪನ್ಯಾಸಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಸರ್ಕಾರದ ಸಚಿವರು, ನಾಲ್ಕು ಇಲಾಖೆಯ ಮುಖ್ಯ ಕಾರ್ಯದರ್ಶಿಗಳು, ಸಂಪನ್ಮೂಲ ವ್ಯಕ್ತಿಗಳು, ಉಪನ್ಯಾಸಕರು, ತಜ್ಞರು, ಅಖಿಲ ಭಾರತ ಅಧ್ಯಕ್ಷರು ಆಗಮಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಹಾಸ್ಟೆಲ್ ಗಳ ಮಧ್ಯೆ ವಿದ್ಯಾರ್ಥಿ ಚಳುವಳಿ ದೊಡ್ಡ ಆಂದೋಲನ ಪ್ರಾರಂಭಿಸುತ್ತಿದೆ ಎಂದರು.ಈ ಸಂದರ್ಭದಲ್ಲಿ ಎಸ್‌ಎಫ್‌ಐ ಮುಖಂಡ ಮಹೇಶ್ ಮರೋಳ, ಗಂಗಾ ಯಲ್ಲಾಪುರ, ಚೈತ್ರಾ ಕೊರವರ, ಸತೀಶ್ ನಾಗವತ್, ಪವನ್ ಪೂಜಾರ, ಪ್ರವೀಣ್‌ಜಗ್ಲಿಕೊಪ್ಪ, ಹೇಮಂತ್ ರಣಸೋತ್, ಮಾಲತೇಶ್ ಹೋಳಿಯಪ್ಪನವರು ಉಪಸ್ಥಿತರಿದ್ದರು.